Film News

ಹನ್ಸಿಕಾ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ನಟ, ಆಕೆ ನನ್ನ ಕಾಲು ಮುಟ್ಟಲ್ಲ ಎಂದಿದ್ರು ಎಂದ ನಟ ರೊಬೋ ಶಂಕರ್…..!

ಸೌತ್ ಸಿನಿರಂಗದಲ್ಲಿ ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ನಟಿಯರ ಸಾಲಿಗೆ ಆಪಲ್ ಬ್ಯೂಟಿ ಹನ್ಸಿಕಾ ಮೊಟ್ವಾನಿ ಸಹ ಸೇರುತ್ತಾರೆ. ಸದ್ಯ ಆಕೆ ಆದಿ ಜೊತೆಗೆ ಪಾರ್ಟನರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾದ ಟ್ರೈಲರ್‍ ಬಿಡುಗಡೆ ಕಾರ್ಯಕ್ರಮ ಸಹ ನೆರವೇರಿದ್ದು, ಈ ವೇಳೆ ಈ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ರೊಬೋ ಶಂಕರ್‍ ಆಕೆಯ ಮುಂದೆಯೇ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. ಹನ್ಸಿಕಾ ವರ್ತನೆಯ ವಿರುದ್ದ ಅಸಹನೆ ವ್ಯಕ್ತಪಡಿಸಿದ್ದಾರೆ. ಆತನ ಕಾಮೆಂಟ್ ಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಹನ್ಸಿಕಾ ಹಾಗೂ ಆದಿ ಕಾಂಬಿನೇಷನ್ ನಲ್ಲಿ ಪಾರ್ಟನರ್‍ ಎಂಬ ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದ್ದು, ಕಳೆದೆರಡು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಟ್ರೈಲರ್‍ ಬಿಡುಗಡೆ ಮಾಡಲಾಗಿತ್ತು. ಈ ಸಿನೆಮಾದಲ್ಲಿ ರೊಬೋ ಶಂಕರ್‍ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಟ್ರೈಲರ್‍ ರಿಲೀಸ್ ಈವೆಂಟ್ ನಲ್ಲಿ ರೊಬೋ ಶಂಕರ್‍ ಸಹ ಭಾಗಿಯಾಗಿದ್ದರು. ಈ ವೇಳೆ ರೊಬೋ ಶಂಕರ್‍ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.  ಶೂಟಿಂಗ್ ವೇಳೆ ಹನ್ಸಿಕಾ ನನ್ನನ್ನು ಮುಟ್ಟಲು ಸಹ ಇಷ್ಟಪಡಲಿಲ್ಲ. ಹನ್ಸಿಕಾ ವರ್ತನೆಗೆ ನಿರ್ದೇಶಕರ ಜೊತೆಗೆ ಸೆಟ್ ನಲ್ಲಿ ಇರುವಂತಹವರೆಲ್ಲಾ ಆಶ್ವರ್ಯಚಕಿತರಾದರು ಎಂದು ಸಾರ್ವಜನಿಕವಾಗಿಯೇ ವಿವಾದಿತ ಹೇಳಿಕೆಗಳನ್ನು ಕೊಟ್ಟರು. ಇನ್ನೂ ಆತನ ಹೇಳಿಕೆಗಳಿಗೆ ಟ್ರೈಲರ್‍ ಬಿಡುಗಡೆಯಲ್ಲಿದ್ದ ಎಲ್ಲರೂ ಶಾಕ್ ಆಗಿದ್ದಾರೆ.

ಈ ವೇಳೆ ಅಲ್ಲಿದ್ದ ಲೇಡಿ ರಿಪೋರ್ಟರ್‍ ಒಬ್ಬರು ಆತನ ಹೇಳಿಕೆಗಳನ್ನು ಖಂಡಿಸಿದರು. ರೊಬೋ ಶಂಕರ್‍ ಗೆ ವೃತ್ತಿ ನೈಪುಣ್ಯತೆ, ಮರ್ಯಾದೆ ಇಲ್ಲವೇ ಎಂದು ಆಕ್ರೋಷ ವ್ಯಕ್ತಪಡಿಸಿದರು. ಬಳಿಕ ರೊಬೋ ಶಂಕರ್‍ ಕುಟುಂಬಸ್ಥರು ಆತನಿಗೆ ಆರೋಗ್ಯ ಸರಿಯಿಲ್ಲ. ಆತನಿಗೆ ಜಾಂಡಿಸ್ ಸೋಕಿದೆ. ಮಾನಸಿಕ ಪರಿಸ್ಥಿತಿ ಸಹ ಸರಿಯಿಲ್ಲ. ಅದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ರೊಬೋ ಶಂಕರ್‍ ಪತ್ನಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಂಘಟನೆಗೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಹನ್ಸಿಕಾ ತಮಿಳಿನಲ್ಲಿ ಕೆಲವೊಂದು ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಮದುವೆಯಾದ ಬಳಿಕವೂ ಆಕೆ ಸಿನೆಮಾಗಳಲ್ಲಿ ನಟಿಸುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇನ್ನೂ ಹನ್ಸಿಕಾ ಮೊಟ್ವಾನಿ ದೇಶಮುದುರು ಸಿನೆಮಾದ ಮೂಲಕ ಬಹುಬೇಡಿಕೆ ಸೃಷ್ಟಿಸಿಕೊಂಡರು. ಈ ಸಿನೆಮಾದ ಬಳಿಕ ಆಕೆಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಬಂದವು. ತೆಲುಗಿನಲ್ಲಿ ಅವಕಾಶಗಳು ಕಡಿಮೆಯಾದ ಬಳಿಕ ಆಕೆ ತಮಿಳಿನಲ್ಲೇ ಹೆಚ್ಚು ಸಿನೆಮಾಗಳನ್ನು ಮಾಡಿದರು. ಸದ್ಯ ಆಕೆಯ ಕೈಯಲ್ಲಿ ಆರಕ್ಕೂ ಹೆಚ್ಚು ಸಿನೆಮಾಗಳಿವೆ ಎನ್ನಲಾಗಿದೆ.

Most Popular

To Top