Film News

ಮತ್ತೊಮ್ಮೆ ಆಸ್ಪತ್ರೆಯ ಬೆಡ್ ಮೇಲೆ ಕಾಣಿಸಿಕೊಂಡ ಸಮಂತಾ, ಗಾಬರಿಗೊಂಡ ಫ್ಯಾನ್ಸ್……!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಕಳೆದೆರಡು ವರ್ಷಗಳಿಂದ ಸದಾ ಸುದ್ದಿಯಲ್ಲೇ ಇರುತ್ತಾರೆ. ಅದರಲ್ಲೂ ಆಕೆ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಮತಷ್ಟು ಸುದ್ದಿಯಾಗುತ್ತಿದ್ದಾರೆ. ಬಳಿಕ ಆಕೆ ಮಯೋಸೈಟೀಸ್ ವ್ಯಾಧಿಗೆ ಗುರಿಯಾಗಿದ್ದು, ಮತ್ತೆ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದು, ಇದೀಗ ಮತ್ತೆ ವಿರಾಮ ಪಡೆದುಕೊಂಡಿದ್ದರ ಬಗ್ಗೆ ಸುದ್ದಿಯಲ್ಲೇ ಇದ್ದಾರೆ. ಇದೀಗ ಮತ್ತೊಮ್ಮೆ ಆಕೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಸಲೈನ್ ಹಾಕಿಕೊಂಡಿರುವ ಪೊಟೋ ಹಂಚಿಕೊಂಡಿದ್ದು, ಆಕೆಗೆ ಏನಾಗಿದೆ ಎಂದು ಅಭಿಮಾನಿಗಳು ಕಂಗಾಲಾಗಿದ್ದಾರೆ ಎನ್ನಲಾಗಿದೆ.

ನಟಿ ಸಮಂತಾ ಕಳೆದ ವರ್ಷ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾಗಿದ್ದಾಗಿ ಸೋಷಿಯಲ್ ಮಿಡಿಯಾದಲ್ಲಿ ವಿಚಾರ ತಿಳಿಸಿದ್ದರು. ಅಂದಿನಿಂದ ಆಕೆ ಮಯೋಸೈಟೀಸ್ ವ್ಯಾದಿಯ ಜೊತೆಗೆ ಹೋರಾಟ ಮಾಡುತ್ತಿದ್ದಾರೆ. ಇನ್ನೂ ಆಕೆ ಒಪ್ಪಿಕೊಂಡಂತಹ ಸಿನೆಮಾಗಳ ಶೂಟಿಂಗ್ ಪೂರ್ಣ ಗೊಳಿಸಿ ಸಂಪೂರ್ಣ ಆರೋಗ್ಯ ಪಡೆದುಕೊಳ್ಳಲು ಒಂದು ವರ್ಷದ ಕಾಲ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಖುಷಿ ಸಿನೆಮಾ ಹಾಗೂ ಸಿಟಾಡೆಲ್ ವೆಬ್ ಸಿರೀಸ್ ಗಳ ಶೂಟಿಂಗ್ ಮುಗಿದ ಬಳಿಕ ಆಕೆ ಚಿಕಿತ್ಸೆಗಾಗಿ ನ್ಯೂಯಾರ್ಕ್ ಗೆ ಹೋಗಿದ್ದರು. ಅಲ್ಲಿ ಕೆಲ ದಿನಗಳ ಕಾಲ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರು. ಆಧ್ಯಾತ್ಮಿಕ ಪ್ರದೇಶಗಳಲ್ಲಿ ವಿಹರಿಸುತ್ತಾ, ಯೋಗಾ, ಪೂಜೆಗಳನ್ನು ಮಾಡುತ್ತಾ ತಮ್ಮ ಆರೋಗ್ಯವನ್ನು ಸ್ಥಿರವಾಗಿಟ್ಟುಕೊಳ್ಳಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಇದೀಗ ಸಮಂತಾ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಪೊಟೊ ಒಂದನ್ನು ಶೇರ್‍ ಮಾಡಿದ್ದರು. ಸಲೈನ್ ಹಾಕಿಕೊಳ್ಳುತ್ತಿರುವ ಪೊಟೋ ಇದಾಗಿತ್ತು. ಈ ಪೊಟೋ ಹಂಚಿಕೊಂಡ ಸ್ವಲ್ಪ ಸಮಯದಲ್ಲೇ ಭಾರಿ ವೈರಲ್ ಆಗಿದೆ. ಆದರೆ ಸಮಂತಾಗೆ ಮತ್ತೆ ಏನಾಯ್ತು ಎಂದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ ಅಭಿಮಾನಿಗಳು ಕಂಗಾಲಾಗುವಂತಹದ್ದು ಏನು ಆಗಿಲ್ಲ. ಆಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಲೈನ್ ತೆಗೆದುಕೊಂಡಿದ್ದಾರೆ ಎಂದು ಪೋಸ್ಟ್ ನೋಡಿದರೇ ತಿಳಿಯುತ್ತದೆ. ಸಮಂತಾ ತೆಗೆದುಕೊಳ್ಳುತ್ತಿರುವ ಸಲೈನ್ ಇಮ್ಯೂನಿಟಿ ಬೂಸ್ಟರ್‍ ಆಗಿದ್ದು, ರೋಗನಿರೋಧಕ ಶಕ್ತಿ, ಮಾಂಸಖಂಡಗಳ ಶಕ್ತಿ, ವೈರಲ್ ಗಳನ್ನು ಎದುರಿಸುವ ಶಕ್ತಿ, ಮೂಳೆಗಳಿಗೆ ಶಕ್ತಿ ಬರಲು ಸಹಾಯ ಆಗುತ್ತೆ ಎಂದು ಸಮಂತಾ ತಿಳಿಸಿದ್ದಾರೆ.

ಇನ್ನೂ ಸಮಂತಾ ಅಭಿಮಾನಿಗಳು ಆಕೆ ಸಂಪೂರ್ಣವಾಗಿ ಗುಣಮುಖರಾಗಲಿ ಎಂದು ಶುಭ ಕೋರುತ್ತಿದ್ದಾರೆ. ಇನ್ನೂ ಇತ್ತೀಚಿಗೆ ಆಕೆ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡಿದ್ದರು. ಈ ವೇಳೆ ಓರ್ವ ಅಭಿಮಾನಿ ನಿಮ್ಮ ಸ್ಕಿನ್ ಗ್ಲೋ ಕಡಿಮೆಯಾಗಿದೆ ಏನಾಗಿದೆ ಎಂದು ಪ್ರಶ್ನೆ ಮಾಡಿದ್ದ. ಅದಕ್ಕೆ ಸಮಂತಾ ಉತ್ತರಿಸುತ್ತಾ, ಮಯೋಸೈಟೀಸ್ ಚಿಕಿತ್ಸೆಗಾಗಿ ಹೆಚ್ಚು ಸ್ಟೆರಾಯಿಡ್ ತೆಗೆದುಕೊಳ್ಳಬೇಕಾಯಿತು ಆದ್ದರಿಂದ ಸ್ಕಿನ್ ಮೇಲೆ ಪ್ರಭಾವ ಬೀರಿದ ಎಂದು ಹೇಳಿದ್ದರು.

Most Popular

To Top