Film News

ರಶ್ಮಿಕಾಗೆ ನಮ್ಮ ಮನೆಯ ಸೊಸೆಯಾಗುವ ಅರ್ಹತೆ ಇಲ್ಲ ಎಂದ ವಿಜಯ್ ದೇವರಕೊಂಡ ತಾಯಿ.….!

ಟಾಲಿವುಡ್ ಸ್ಟಾರ್‍ ನಟ ವಿಜಯ್ ದೇವರಕೊಂಡ ಹಾಗೂ ಸ್ಟಾರ್‍ ನಟಿ ರಶ್ಮಿಕಾ ರವರ ಪ್ರೇಮ ಕಥೆ ಆಗಾಗ ಕೇಳಿಬರುತ್ತಲೇ ಇರುತ್ತದೆ. ಸುಮಾರು ದಿನಗಳಿಂದ ಈ ಜೋಡಿಯ ಬಗ್ಗೆ ವಿವಿಧ ರೀತಿಯ ರೂಮರ್‍ ಗಳು ಕೇಳಿಬರುತ್ತಲೇ ಇರುತ್ತದೆ. ರೂಮರ್‍ ಗಳು ಜೋರಾದ ಸಮಯದಲ್ಲಿ ಅವರು ನಮ್ಮ ಮಧ್ಯೆ ಅಂತಹ ಯಾವುದೇ ಸಂಬಂಧವಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳುತ್ತಾರೆ. ಆದರೂ ಸಹ ಅವರ ಬಗೆಗಿನ ರೂಮರ್‍ ಗಳು ಮಾತ್ರ ನಿಂತಿಲ್ಲ. ಇದೀಗ ವಿಜಯ್ ದೇವರಕೊಂಡ ತಾಯಿ ರಶ್ಮಿಕಾ ಗೆ ನಮ್ಮ ಮನೆಗೆ ಸೊಸೆಯಾಗುವ ಅರ್ಹತೆಯಿಲ್ಲ ಎಂದು ಹೇಳಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಹೊಸ ವರ್ಷದ ಸಂಭ್ರಮಾಚರಣೆಗೆ ಮಾಲ್ಡೀವ್ಸ್ ಗೆ ಹೋಗಿದ್ದರು ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು. ಬಳಿಕ ಆಗಾಗ ಅವರಿಬ್ಬರು ವೆಕೇಷನ್ ಗೆ ಹಾರುತ್ತಿದ್ದರು. ಅವರು ಒಟ್ಟಿಗೆ ಕಾಣಿಸಿಕೊಳ್ಳದೇ ಇದ್ದರೂ ಸಹ ಅವರಿಬ್ಬರೂ ಒಂದೇ ಸ್ಥಳದಲ್ಲಿರುವಂತಹ ಪೊಟೋಗಳನ್ನು ಸಿಂಗಲ್ ಆಗಿ ಹಂಚಿಕೊಳ್ಳುತ್ತಿದ್ದರು. ಆದರೆ ನೆಟ್ಟಿಗರು ಒಂದೇ ಸ್ಥಳದಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಸೋಷಿಯಲ್ ಮಿಡಿಯಾದಲ್ಲಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದರು. ಜೊತೆಗೆ ಮಿಡಿಯಾಗಳ ಮುಂದೆ ಸಹ ಅನೇಕ ಬಾರಿ ಈ ಜೋಡಿ ಕಾಣಿಸಿಕೊಂಡಿತ್ತು. ಅವರಿಬ್ಬರೂ ಮದುವೆಯಾಗಿ ಒಂದೇ ಮನೆಯಲ್ಲಿ ಇದ್ದಾರೆ ಎಂಬ ಸುದ್ದಿ ಸಹ ಕೇಳಿಬಂದಿತ್ತು. ಇದೀಗ ರಶ್ಮಿಕಾ ಬಗ್ಗೆ ವಿಜಯ್ ದೇವರಕೊಂಡ ತಾಯಿ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ ಎಂಬ ರೂಮರ್‍ ಜೊರಾಗಿ ಹರಿದಾಡುತ್ತಿದೆ.

ಇನ್ನೂ ಈ ರೂಮರ್‍ ಗಳು ವಿಜಯ್ ದೇವರಕೊಂಡ ರವರ ತಾಯಿಯ ವರೆಗೂ ಹೋಗಿ ತಲುಪಿದೆ. ವಿಜಯ್ ತಾಯಿ ಆಕ್ರೋಷಗೊಂಡು ಅಂತಹ ಹುಡುಗಿ ನಮ್ಮ ಮನೆಗೆ ಸೊಸೆಯಾಗುವ ಅರ್ಹತೆ ಇಲ್ಲ. ಮೊನ್ನೆಯವೆರೆಗೂ ನಮ್ಮ ಮಗನ ಸಿನೆಮಾಗಳಲ್ಲಿ ಮಾತ್ರ ಆ ರೀತಿಯಾಗಿ ಮಾಡುತ್ತಾರೆ ಎಂದು ಅಂದುಕೊಂಡಿದ್ದೆವೆ. ಈ ರೀತಿಯಲ್ಲಿ ಬೇರೆ  ಹಿರೋಗಳ ಜೊತೆಗೆ ಆ ರೀತಿಯಲ್ಲಿ ಮಿತಿಮೀರಿ ರೊಮ್ಯಾನ್ಸ್ ಮಾಡುವ ಹುಡುಗಿ ನಮಗೆ ಬೇಡ. ಅಷ್ಟಕ್ಕೂ ಆ ಹಿರೋಯಿನ್ ನಮ್ಮ ಮನೆಗೆ ಸೊಸೆಯಾಗಿ ಬೇಡವೇ ಬೇಡ ಎಂದು ರಶ್ಮಿಕಾ ಬಗ್ಗೆ ವಿಜಯ್ ದೇವರಕೊಂಡ ತಾಯಿ ಫೈರ್‍ ಆಗಿದ್ದಾರೆ ಎಂದು ಸೋಷಿಯಲ್ ಮಿಡಿಯಾದಲ್ಲಿ ರೂಮರ್‍ ಗಳು ಬಿರುಗಾಳಿಯಂತೆ ಹರಿದಾಡುತ್ತಿವೆ. ಇನ್ನೂ ಇದು ಎಷ್ಟರ ಮಟ್ಟಿಗೆ ನಿಜವೋ ಸುಳ್ಳೋ ತಿಳಿಯದು ಸುದ್ದಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ.

ಇನ್ನೂ ಈ ಸುದ್ದಿ ವೈರಲ್ ಆಗುತ್ತಿದ್ದು, ನಿಮ್ಮ ಮಗ ಬೇರೆ ಹಿರೋಯಿನ್ ಗಳ ಜೊತೆಗೆ ಆ ರೀತಿ ಮಾಡಿದರೇ ತಪ್ಪಿಲ್ಲ. ರಶ್ಮಿಕಾ ಮಾಡಿದ್ರೆ ಮಾತ್ರ ತಪ್ಪೇ ಎಂದು ರಶ್ಮಿಕಾಗೆ ಬೆಂಬಲಿಸುವಂತಹ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ರಶ್ಮಿಕಾ ಹಾಗೂ ರಣಬೀರ್‍ ಕಪೂರ್‍ ಕಾಂಬಿನೇಷನ್ ನಲ್ಲಿ ತೆರೆಕಾಣಲಿರುವ ಯಾನಿಮಲ್ ಸಿನೆಮಾದಲ್ಲಿ ಅವರಿಬ್ಬರ ನಡುವೆ ಕೊಂಚ ರೊಮ್ಯಾನ್ಸ್ ಓವರ್‍ ಆಗಿಯೇ ಇದೆ ಎಂದು ಇತ್ತಿಚಿಗೆ ಬಿಡುಗಡೆಯಾದ ಟ್ರೈಲರ್‍ ನಿಂದ ತಿಳಿದುಬರುತ್ತಿದೆ. ಈ ಟೀಸರ್‍ ನಲ್ಲಿನ ಕೆಲವೊಂದು ದೃಶ್ಯಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top