ಹೆಂಡ್ತಿ ಕೋಪಗೊಂಡಾಗ ಏನು ಮಾಡಬೇಕು ಎಂಬುದರ ಬಗ್ಗೆ ಪುರುಷರಿಗೆ ಟಿಪ್ಸ್ ಕೊಟ್ಟ AIMIM ನಾಯಕ ಓವೈಸಿ…….!

Follow Us :

ಸದಾ ಒಂದಲ್ಲ ಒಂದು ರೀತಿಯ ಕಾಮೆಂಟ್ ಗಳನ್ನು ಮಾಡಿ ಸುದ್ದಿಯಾಗುವಂತಹ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇದೀಗ ಪುರುಷರಿಗೆ ಕೆಲವೊಂದು ಟಿಪ್ಸ್ ಕೊಟ್ಟಿದ್ದಾರೆ. ಆತನ ಭಾಷಣಗಳು ವಿವಾದದಗಳ ಜತೆಗೆ ವೈರಲ್ ಸಹ ಆಗುತ್ತಿರುತ್ತವೆ. ಬಿಜೆಪಿ ವಿರುದ್ದ ನೀಡುವ ಹೇಳಿಕೆಗಳು, ಬಾಬ್ರಿ ಮಸೀದಿ ಪರ ಮಾಡಿದ ಭಾಷಣಗಳೂ ಸಹ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಇದೀಗ ಹೆಂಡ್ತಿ ಕೋಪಗೊಂಡಾಗ ಪುರುಷರು ಏನು ಮಾಡಬೇಕು ಎಂದು ಪುರುಷರಿಗೆ ಓವೈಸಿ ಟಿಪ್ಸ್ ಕೊಟ್ಟಿದ್ದಾರೆ.

ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೈದರಾಬಾದ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸುಖಿ ದಾಂಪತ್ಯದ ಬಗ್ಗೆ ಪುರುಷರಿಗೆ ಸಲಹೆ ನೀಡಿದ್ದಾರೆ. ನಿಮ್ಮ ಪತ್ನಿ ಕೋಪಗೊಂಡಾಗ ನೀವು ಕೋಪ ಮಾಡಿಕೊಳ್ಳಬೇಡಿ. ಕೋಪದಿಂದ ಆಕೆ ಬೈಯುತ್ತಿರುವಾಗ ಏನು ಪ್ರತಿಕ್ರಿಯೆ ನೀಡಬೇಡಿ. ಆಕೆಯ ಕೋಪಕ್ಕೆ ಅನೇಕ ಕಾರಣಗಳಿರಬಹುದು ಅಥವಾ ಕಾರಣಗಳೇ ಇಲ್ಲದಿರಬಹುದು. ತಾವು ಮಾತ್ರ ಪತ್ನಿಯ ಆಕ್ರೋಷದ ಮಾತುಗಳನ್ನು ಸಮಾಧಾನದಿಂದ ಕೇಳಿಸಿಕೊಳ್ಳಿ. ಹೀಗೆ ಮಾಡಿದರೇ ಅರ್ಧ ಸಮಸ್ಯೆ ಪರಿಹಾರವಾಗುತ್ತದೆ. ಪತ್ನಿ ಕೋಪಗೊಂಡಾಗ ಆಕೆಯನ್ನು ನಿಯಂತ್ರಿಸಲು ಹಲ್ಲೆ ಮಾಡುವುದು, ಕೋಪದಿಂದ ಗದರಿಸುವುದು ಮಾಡಬಾರದು. ಪ್ರವಾದಿ ಮೊಹಮ್ಮದ್ ರವರು ಎಂದೂ ಸಹ ಮಹಿಳೆಯರ ಮೇಲೆ ಕೈ ಎತ್ತಿಲ್ಲ. ಮಹಿಳೆಯರನ್ನು ಗೌರವದಿಂದ ಕಾಣಬೇಕು. ಕೋಪ, ಆಕ್ರೋಷಗಳನ್ನು ತಾಳ್ಮೆಯಿಂದ ಕೇಳಿ ಪರಿಹಾರ ಕಂಡುಕೊಳ್ಳಬೇಕೆಂದು ಪುರುಷರಿಗೆ ಟಿಪ್ಸ್ ಕೊಟ್ಟಿದ್ದಾರೆ.

ಇನ್ನೂ ಇಸ್ಮಾಂನಲ್ಲಿ ಮಹಿಳೆಯರು ಪುರುಷರಿಗೆ ಅಡುಗೆ ಮಾಡಿ ಆಹಾರ ನೀಡಬೇಕು, ನಿಮ್ಮ ಬಟ್ಟೆ ಶುಭ್ರ ಮಾಡಬೇಕೆಂದು ಹೇಳಿಲ್ಲ. ಪತಿಗೆ ಪತ್ಮಿಯ ಆದಾಯದಲ್ಲಿ ಹಕ್ಕಿಲ್ಲ. ಆದರೆ ಪತ್ನಿಗೆ ಪತಿಯ ಆದಾಯದಲ್ಲಿ ಎಲ್ಲಾ ಹಕ್ಕುಗಳಿವೆ. ಅನೇಕ ಮುಸ್ಲೀಂರು ನನ್ನ ಪತ್ನಿ ಅಡುವೆ ಮಾಡಲ್ಲ, ಒಟ್ಟೆ ತೊಳೆಯುವುದಿಲ್ಲ ಎಂಬ ದೂರುಗಳನ್ನೂ ಸಹ ಕೇಳಿದ್ದೇವೆ. ಆದರೆ ಖುರಾನ್ ಪ್ರಕಾರ ಇಬ್ಬರೂ ಕೆಲಸಗಳನ್ನು ಹಂಚಿಕೊಂಡು, ಒಬ್ಬರನ್ನೊಬ್ಬರು ಗೌರವದಿಂದ ಕಂಡರೇ ಜೀವನ ಸುಖಕರವಾಗಿರುತ್ತದೆ ಎಂದು ಓವೈಸಿ ಟಿಪ್ಸ್ ಕೊಟ್ಟಿದ್ದಾರೆ.