Film News

ವಿಶ್ವದ ಟಾಪ್ 50 ಡೈರೆಕ್ಟರ್ ಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ರವರಿಗೆ ಸ್ಥಾನ, ಟಾಪ್ 8ನೇ ಸ್ಥಾನದಲ್ಲಿ ಉಪೇಂದ್ರ…..!

ವಿಭಿನ್ನ ಸಿನೆಮಾಗಳನ್ನು ಮಾಡುವ ನಿರ್ದೇಶಕರಲ್ಲಿ ಸ್ಯಾಂಡಲ್ ವುಡ್ ನಿರ್ದೇಶಕ ಕಂ ನಟ ರಿಯಲ್ ಸ್ಟಾರ್‍ ಉಪೇಂದ್ರ ರವರೂ ಸಹ ಒಬ್ಬರಾಗಿದ್ದಾರೆ. ಅವರ ನಿರ್ದೇಶನದ ಸಿನೆಮಾಗಳು ಭಾರಿ ಹಿಟ್ ಪಡೆದುಕೊಂಡಿದೆ. ಇದೀಗ IMDB ಸಂಸ್ಥೆಯ ಸರ್ವೆಯಂತೆ ವಿಶ್ವದ ಟಾಪ್ ಬೆಸ್ಟ್ 50 ಮಂದಿ ನಿರ್ದೇಶಕರ ಪಟ್ಟಿಯೊಂದು ಹೊರಬಂದಿದ್ದು, ಅದರಲ್ಲಿ ರಿಯಲ್ ಸ್ಟಾರ್‍ ಉಪೇಂದ್ರ ರವರು 8ನೇ ಸ್ಥಾನದಲ್ಲಿದ್ದಾರೆ. ಇದು ಕನ್ನಡ ಸಿನಿರಂಗಕ್ಕೆ ಹೆಮ್ಮೆಯ ವಿಚಾರವಾಗಿದೆ ಎನ್ನಲಾಗುತ್ತಿದೆ.

ರಿಯಲ್ ಸ್ಟಾರ್‍ ಉಪೇಂದ್ರ 10 ಸಿನೆಮಾಗಳನ್ನು ನಿರ್ದೇಶನ ಮಾಡಿದ್ದಾರೆ. 60ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಅವರ ನಿರ್ದೇಶಮದ ಓಂ, ಶ್, ತರ್ಲೆ ನನ್ನ ಮಗ ಮೊದಲಾದ ಸಿನೆಮಾಗಳ ಮೂಲಕ ವಿಭಿನ್ನ ನಿರ್ದೇಶಕ ಎನ್ನುವುದನ್ನು ನಿರೂಪಿಸಿದ್ದಾರೆ. ಜೊತೆಗೆ ತಮ್ಮ ಅಭಿನಯದ ಸಿನೆಮಾಗಳಲ್ಲಿ ನಟಿಸಿ ಓರ್ವ ನಟನಾಗಿಯೂ ಸಹ ಫೇಮಸ್ ಆಗಿದ್ದಾರೆ. ಅವರ ನಿರ್ದೇಶನದ ಸಿನೆಮಾಗಳನ್ನು ನೋಡಿದರೇ  ಎಷ್ಟು ವಿಭಿನ್ನವಾಗಿರುತ್ತದೆ ಎಂಬುದು ತಿಳಿಯುತ್ತದೆ. ಅವರ ಸಿನೆಮಾಗಳು ಇಂಡಸ್ಟ್ರಿಯಲ್ಲಿ ಹೊಸ ಅಲೆಯನ್ನೆ ಎಬ್ಬಿಸುತ್ತವೆ ಎಂಬ ಮಾತುಗಳೂ ಸಹ ಇದೆ. ಇದೀಗ ವಿಶ್ವದ ಬೆಸ್ಟ್ 50 ನಿರ್ದೇಶಕರ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಉಪೇಂದ್ರರವರು ಪಡೆದುಕೊಂಡಿದ್ದಾರೆ.

ಇನ್ನೂ IMDB ಸಂಸ್ಥೆಯ ಸರ್ವೆಯಂತೆ ವಿಶ್ವದ ಟಾಪ್ 50 ನಿರ್ದೇಶಕರ ಪಟ್ಟಿ ರಿಲೀಸ್ ಆಗಿದೆ. ಈ ಪಟ್ಟಿಯಲ್ಲಿ ಬಾಲಿವುಡ್, ಹಾಲಿವುಡ್ ದೊಡ್ಡ ದೊಡ್ಡ ನಿರ್ದೇಶಕರಿದ್ದಾರೆ. ಅಂತಹ ದೊಡ್ಡ ನಿರ್ದೇಶಕರ ಮಧ್ಯೆ ರಿಯಲ್ ಸ್ಟಾರ್‍ ಉಪೇಂದ್ರ 8ನೇ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದೇ ಹೇಳಬಹುದು. ಮೊದಲ ಸ್ಥಾನದಲ್ಲಿ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್‍ ನೋಲನ್ ಇದ್ದರೇ, ಎರಡನೇ ಸ್ಥಾನದಲ್ಲಿ ಬಾಲಿವುಡ್ ನಿರ್ದೇಶಕ ರಾಜಕುಮಾರ್‍ ಹಿರಾನಿ ಇದ್ದಾರೆ. ಸ್ಯಾಂಡಲ್ ವುಡ್ ನಿರ್ದೇಶಕ ರಿಯಲ್ ಸ್ಟಾರ್‍ ಉಪೇಂದ್ರರವರು 8ನೇ ಸ್ಥಾನದಲ್ಲಿದ್ದಾರೆ. ಇನ್ನೂ ಶೀಘ್ರದಲ್ಲೇ ಉಪೇಂದ್ರ ರವರ ನಿರ್ದೇಶನದ UI ಸಿನೆಮಾ ತೆರೆಗೆ ಬರಲಿದೆ. ಈ ಸಿನೆಮಾದಲ್ಲಿ ಉಪೇಂದ್ರ ಕಲ್ಕಿ ಕಥೆಯನ್ನು ಹೇಳಲಿದ್ದಾರೆಯೇ ಎಂಬಂತೆ ಅನ್ನಿಸುತ್ತಿದೆ. ಸದ್ಯ ಈ ಸಿನೆಮಾದಿಂದ ಬಿಡುಗಡೆಯಾದ ಟ್ರೋಲ್ ಸಾಂಗ್ ಮಾತ್ರ ಭಾರಿ ಸದ್ದು ಮಾಡುತ್ತಿದೆ.

Most Popular

To Top