Film News

ಕಾಲೇಜಿನ ಹಬ್ಬದಲ್ಲಿ ಐಟಂ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ವೈರಲ್ ಆದ ಓಲ್ಡ್ ವಿಡಿಯೋ…..!

ಸಿನಿರಂಗದಲ್ಲಿ ಗ್ಲಾಮರ್‍ ಶೋ ಮಾಡದೇ ಸ್ಟಾರ್‍ ನಟಿಯಾದವರಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಸಹ ಒಬ್ಬರಾಗಿದ್ದಾರೆ. ಸಿನೆಮಾಗಳಲ್ಲಿ ಗ್ಲಾಮರ್‍ ಶೋಗೆ ಯಾವುದೇ ರೀತಿಯ ಆಸ್ಪದ ನೀಡಿದೇ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಆಕೆ ಕಂಟೆಂಟ್ ಹಾಗೂ ಪಾತ್ರ ಪ್ರಾಧಾನ್ಯತೆ ಇರುವಂತಹ ಸಿನೆಮಾಗಳಲ್ಲಿ ನಟಿಸುತ್ತಾ ಸ್ಪೇಷಲ್ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ಇದೀಗ ಆಕೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಲಾ ಕಿ ಜವಾನಿ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ನ್ಯಾಚುರಲ್ ಬ್ಯೂಟಿ ಎಂದೇ ಕ್ರೇಜ್ ಪಡೆದುಕೊಂಡ ನಟಿ ಸಾಯಿ ಪಲ್ಲವಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಮೂಲತಃ ತಮಿಳು ಮೂಲದವರಾದರೂ ಸಹ ಸಾಯಿಪಲ್ಲವಿ ಅಪಾರ ಸಂಖ್ಯೆಯ ತೆಲುಗು ಅಭಿಮಾನಿಗಳನ್ನೂ ಸಹ ಪಡೆದುಕೊಂಡಿದ್ದಾರೆ. ಫಿದಾ, ಎಂಸಿಎ, ಲವ್ ಸ್ಟ್ರೋರಿ, ಶ್ಯಾಮಸಿಂಗರಾಯ್ ಮೊದಲಾದ ಸಿನೆಮಾಗಳ ಮೂಲಕ ಮತಷ್ಟು ಕ್ರೇಜ್ ಪಡೆದುಕೊಂಡರು. ಈ ಸಿನೆಮಾಗಳಲ್ಲಿ ಆಕೆ ಪವರ್‍ ಪುಲ್ ರೋಲ್ ಪ್ಲೇ ಮಾಡಿದ್ದರು. ಕೊನೆಯದಾಗಿ ಆಕೆ ಗಾರ್ಗಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ ನಟಿ ಸಾಯಿ ಪಲ್ಲವಿ ಹೆಸರು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಾಲೇಜು ಓದುತ್ತಿರುವಾಗ ಆಕೆ ಕಾಲೇಜ್ ಫೆಸ್ಟ್ ನಲ್ಲಿ ಬಾಲಿವುಡ್ ಹಾಡಿಗೆ ಮಾಸ್ ಡ್ಯಾನ್ಸ್ ಮಾಡಿದ್ದಾರೆ. ಈ ಹಳೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ನಟಿ ಸಾಯಿಪಲ್ಲವಿ ವಿದೇಶದಲ್ಲಿ ಓದಿದ ವಿಚಾರ ತಿಳಿದೇ ಇದೆ. ಕಾಲೇಜು ಹಬ್ಬದಲ್ಲಿ ಆಕೆ ತನ್ನ ಸ್ನೇಹಿತೆಯೊಂದಿಗೆ ಮಾಡಿದ ಡ್ಯಾನ್ಸ್ ಸಖತ್ ವೈರಲ್ ಆಗುತ್ತಿದೆ. ಬಾಲಿವುಡ್ ಸ್ಟಾರ್‍ ನಟಿ ಹಿರೋಯಿನ್ ಕತ್ರಿನಾ ಕೈಫ್ ಸೂಪರ್‍ ಹಿಟ್ ಶಿಲಾ ಕಿ ಜವಾನಿ ಹಾಡಿಗೆ ಮಾಸ್ ಸ್ಟೆಪ್ಸ್ ಹಾಕಿದ್ದಾರೆ. ಆಗಲೂ ಸಹ ಸಾಯಿಪಲ್ಲವಿ ಭರ್ಜರಿಯಾಗಿಯೇ ಸ್ಟೆಪ್ಸ್ ಹಾಕಿದ್ದಾರೆ. ತುಂಬಾ ಎನೆರ್ಜಿಟಿಕ್ ಆಗಿ ಆಕೆ ಸ್ಟೆಪ್ಸ್ ಹಾಕಿ ತನ್ನ ಪಕ್ಕದಲ್ಲಿದ್ದ ಯುವತಿಯನ್ನು ಡಾಮಿನೇಟ್ ಮಾಡಿದ್ದಾರೆ. ವಿಡಿಯೋ ದೂರದಿಂದ ತೆಗೆದ ಕಾರಣದಿಂದ ಕೊಂಚ ಬ್ಲರ್‍ ಆಗಿ ಕಾಣಿಸುತ್ತಿದ್ದಾರೆ. ಆದರೆ ಡ್ಯಾನ್ಸ್ ಸ್ಟೆಪ್ಸ್ ಮಾತ್ರ ನೆಕ್ಸ್ಟ್ ಲೆವೆಲ್ ಎಂದೇ ಹೇಳಬಹುದು. ಇನ್ನೂ ಸಾಯಿಪಲ್ಲವಿಯ ಡ್ಯಾನ್ಸ್ ನೋಡಿದ ಅಭಿಮಾನಿಗಳು ಲೇಡಿ ಮೈಖಲ್ ಜಾಕ್ಸನ್ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಾ ವಿಡಿಯೋ ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಸದ್ಯ ನಟಿ ಸಾಯಿಪಲ್ಲವಿ ತಂಡೇಲ್ ಎಂಬ ಸಿನೆಮಾದಲ್ಲಿ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳು ಸ್ಟಾರ್‍ ನಟ ಶಿವಕಾರ್ತಿಕೇಯನ್ ಜೊತೆಗೆ ನಟಿಸಲಿದ್ದಾರೆ. ಇದರ ಜೊತೆಗೆ ಬಾಲಿವುಡ್ ಸ್ಟಾರ್‍ ನಟ ಅಮೀರ್‍ ಖಾನ್ ಪುತ್ರ ಜುನೇದ್ ಖಾನ್ ಜೊತೆಗೆ ಒಂದು ಸಿನೆಮಾ ಹಾಗೂ ಬಹುನಿರೀಕ್ಷಿತ ರಾಮಾಯಣ ಸಿನೆಮಾದಲ್ಲಿ ಸೀತೆಯ ಪಾತ್ರದಲ್ಲಿ ಸಾಯಿಪಲ್ಲವಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top