News

ರೈಲು ಏರುವಾಗ ಕಾಲು ಜಾರಿ ಬಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸ್, ವೈರಲ್ ಆದ ವಿಡಿಯೋ…..!

ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಕೆಲವೊಂದು ವಿಡಿಯೋಗಳು ಸಖತ್ ವೈರಲ್ ಆಗುತ್ತಿರುತ್ತದೆ. ಇದೀಗ ರೈಲು ಏರುವಾಗ ವ್ಯಕ್ತಿಯೊಬ್ಬ ಕಾಲು ಜಾರಿ ಪ್ಲಾಟ್ ಫಾರಂ ಕೆಳಗೆ ಬಿದ್ದಿದ್ದಾನೆ, ಕೂಡಲೇ ಅಲ್ಲಿದ್ದ ಪೊಲೀಸ್ ಆ ವ್ಯಕ್ತಿಯನ್ನು ಮೇಲಕ್ಕೆ ಎತ್ತಿ ಹಾಕಿ ಪ್ರಾಣ ಉಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ರೈಲು ಹತ್ತುವಾಗ ಪ್ರಯಾಣಿಕರು ತುಂಬಾ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯವಾಗಿದೆ. ಪ್ರಯಾಣಿಕರ ಅಜಾಗರೂಕತೆಯಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಅದೇ ಮಾದರಿಯಲ್ಲಿ ಪ್ರಯಾಣಿಕನೋರ್ವ ರೈಲು ಏರುವಾಗ ಆಯಾತಪ್ಪಿ ಬಿದ್ದಿದ್ದಾನೆ. ಆದರೆ ಅಲ್ಲಿದ್ದ ಪೊಲೀಸ್ ಆ ಹಿರಿಯ ವ್ಯಕ್ತಿಯನ್ನು ಕಾಪಾಡಿದ್ದಾರೆ. ಪ್ರಯಾಗ್ ರಾಜ್ ನ ರೈಲು ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. 63 ವರ್ಷದ ಸಜ್ಜನ್ ಸಿಂಗ್ ಎಂಬಾತ ಗೌಹಾಟಿಯಿಂದ ಬಿಕಾನೆರ್‍ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ರೈಲು ಪ್ರಯಾಗರಾಜ್ ರೈಲು ನಿಲ್ದಾಣ ತಲುಪಿದಾಗ ರೈಲು ನಿಂತಿದೆ. ಊಟ ತರಲು ಸಜ್ಜನ್ ಸಿಂಗ್ ರೈಲಿನಿಂದ ಇಳಿದು ಹೋಟೆಲ್ ಗೆ ತೆರೆಳಿದ್ದಾರೆ. ಊಟ ತೆಗೆದುಕೊಂಡು ಬರುವಷ್ಟರಲ್ಲೇ ರೈಲು ಚಲಿಸಲು ಆರಂಭಿಸಿದೆ. ನಿಧಾನವಾಗಿ ಚಲಿಸುತ್ತಿದ್ದ ರೈಲನ್ನು ಏರಲು ಸಜ್ಜನ್ ಸಿಂಗ್ ಪ್ರಯತ್ನ ಮಾಡಿದ್ದಾನೆ.

ಆದರೆ ವಯಸ್ಸಿನ ಕಾರಣದಿಂದ ಚಲಿಸುತ್ತಿದ್ದ ರೈಲನ್ನು ಏರಲು ಆತನಿಗೆ ಆಗಿಲ್ಲ. ಕಾಲು ಜಾರಿ ಫ್ಲಾಟ್ ಫಾರ್ಮ್ ಕೆಳಗೆ ಜಾರಿ ಬಿದ್ದಿದ್ದಾನೆ. ಈ ನಡುವೆ ರೈಲು ಸಹ ವೇಗವಾಗಿ ಚಲಿಸಲು ಆರಂಭಿಸಿದೆ. ಅಲ್ಲಿದ್ದ ಪೊಲೀಸ್ ಹಿರಿಯ ವ್ಯಕ್ತಿಯನ್ನು ಗಮನಿಸಿ ಆತನನ್ನು ಹಿಡಿದು ಎಳೆದು ಫ್ಲಾಟ್ ಫಾರ್ಮ್ ಮೇಲಕ್ಕೆ ಹಾಕಿದ್ದಾರೆ. ಇದರಿಂದ ಸಜ್ಜನ್ ಪ್ರಾಣ ಉಳಿದಿದೆ. ಆದರೆ ಆತನ ದೇಹದ ಕೆಲವು ಕಡೆ ಗಾಯಗಳಾಗಿದೆ. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ರೈಲ್ವೆ ಪ್ರೊಟೆಕ್ಷನ್ ಪೋರ್ಸ್ ಪೊಲೀಸ್ ಸಂಜಯ್ ಕುಮಾರ್‍ ರಾವತ್ ಸಜ್ಜನ್ ಸಿಂಗ್ ಪ್ರಾಣ ಕಾಪಾಡಿದ್ದು, ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Most Popular

To Top