Film News

ಮದುವೆಯಾದ ಬಳಿಕವೂ ತಗ್ಗೇದೇ ಲೇ ಎಂದ ಮೆಗಾ ಸೊಸೆ ಲಾವಣ್ಯ, ಟ್ರೆಂಡಿ ವೇರ್ ನಲ್ಲಿ ಹಾಟ್ ಪೋಸ್ ಕೊಟ್ಟ ನಟಿ….!

ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಸುಮಾರು ವರ್ಷಗಳಿಂದ ಪ್ರೀತಿಸಿ ಇದೀಗ ಸಪ್ತಪದಿ ತುಳಿಯುವ ಮೂಲಕ ಒಂದಾಗಿದ್ದಾರೆ. ನ.1 ರಂದು ಈ ಜೋಡಿಯ ಮದುವೆ ಇಟಲಿಯಲ್ಲಿ ಅದ್ದೂರಿಯಾಗಿ ನೆರವೇರಿದೆ. ಸುಮಾರು ದಿನಗಳಿಂದ ಯಾರಿಗೂ ತಿಳಿಯದಂತೆ ಪ್ರೇಮ ಪಯಣ ಸಾಗಿಸಿದ್ದ ಈ ಜೋಡಿ ಕೊನೆಯದಾಗಿ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಮದುವೆಯಾದರು. ಮದುವೆಯಾದರೂ ಸಹ ನಟಿ ಲಾವಣ್ಯ ತಗ್ಗೇದೇ ಲೇ ಎಂದು ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಇದೀಗ ಆಕೆ ಟ್ರೆಂಡಿ ವೇರ್‍ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದು, ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಅಂದಾಲ ರಾಕ್ಷಸಿ ಸಿನೆಮಾದ ಮೂಲಕ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟ ಲಾವಣ್ಯ ತ್ರಿಪಾಠಿ, ಮೊದಲನೇ ಸಿನೆಮಾದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಭಲೆ ಭಲೆ ಮಗಾಡಿವೋಯ್, ಸೊಗ್ಗಾಡೆ ಚಿನ್ನಿ ನಾಯನಾ ಮೊದಲಾದ ಸಿನೆಮಾಗಳ ಮೂಲಕ ಮತಷ್ಟು ಕ್ರೇಜ್ ಪಡೆದುಕೊಂಡರು. ಇನ್ನೂ ವರುಣ್ ತೇಜ್ ಜೊತೆಗೆ ಮಿಸ್ಟರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದು. ಆದರೆ ಈ ಸಿನೆಮಾದ ಸಮಯದಲ್ಲಿ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ನಡುವೆ ಪ್ರೀತಿ ಹುಟ್ಟಿ ಸುಮಾರು ವರ್ಷಗಳ ಕಾಲ ಈ ಜೋಡಿ ಸೀಕ್ರೇಟ್ ಆಗಿ ಪ್ರೇಮ ಪಯಣ ಸಾಗಿಸಿದ್ದರು. ಬಳಿಕ ಪೋಷಕರನ್ನು ಒಪ್ಪಿಸಿ ಕಳೆದ ವರ್ಷ ನ.1 ರಂದು ಇಟಲಿಯಲ್ಲಿ ಅದ್ದೂರಿಯಾಗಿ ಮದುವೆಯಾದರು. ಸದ್ಯ ಈ ಜೋಡಿ ತಮ್ಮ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

ಇನ್ನೂ ಲಾವಣ್ಯ ತ್ರಿಪಾಠಿ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಮದುವೆಯಾದರು ಸಹ ಜೋರು, ಜೋಷ್ ಕಡಿಮೆಯಾಗದಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ.  ಮದುವೆಯಾದ ಬಳಿಕ ಲಾವಣ್ಯ ಸಿನೆಮಾಗಳನ್ನು ಒಪ್ಪಿಕೊಂಡಿಲ್ಲ. ಆದರೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪೊಟೋಶೂಟ್ಸ್ ಮೂಲಕ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಇದೀಗ ಆಕೆ ಸ್ಲೀವ್ ಲೆಸ್ ಬ್ಲಾಕ್ ಅಂಡ್ ವೈಟ್ ಫ್ಲೋರ್‍ ಲಾಂಗ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಆಕೆಯ ಈ ಲುಕ್ಸ್ ನೋಡಿದರೇ ಮತ್ತೆ ಮತ್ತೇ ನೋಡಬೇಕೆಂದು ಅನ್ನಿಸುತ್ತದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಇನ್ನೂ ಲಾವಣ್ಯ ತ್ರಿಪಾಠಿ ಸದ್ಯ ಸಿನೆಮಾಗಳಲ್ಲಿ ನಟಿಸುತ್ತಾರಾ ಇಲ್ಲವೇ ಎಂಬುದು ಅಭಿಮಾನಿಗಳಲ್ಲಿ ಅನುಮಾನ ಕಾಡುತ್ತಿದೆ. ಆದರೆ ವೆಬ್ ಸಿರೀಸ್ ಗಳು, ಜಾಹಿರಾತುಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಒಂದು ವೇಳೆ ಸಿನೆಮಾಗಳಲ್ಲಿ ನಟಿಸಬೇಕಾದರೇ ಆಕೆ ವರುಣ್ ತೇಜ್ ಜೊತೆಗೆ ಸಿನೆಮಾಗಳಲ್ಲಿ ನಟಿಸಬಹುದು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.

Most Popular

To Top