ಟಾಲಿವುಡ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ರಾಧಿಕಾ ಆಪ್ಟೆ, ತೆಲುಗು ಸಿನೆಮಾಗಳಲ್ಲಿ ಅವರದ್ದೇ ಅಧಿಪತ್ಯ ಎಂದ ನಟಿ…..!

Follow Us :

ಬಣ್ಣದ ಲೋಕದಲ್ಲಿ ಬೋಲ್ಟ್ ಕಂಟೆಂಟ್ ಹಾಗೂ ವಿವಾದಗಳಿಗೆ ಸದಾ ಮುಂದಾಗಿರುವ ನಟಿಯರಲ್ಲಿ ರಾಧಿಕಾ ಆಪ್ಟೆ ಸಹ ಒಬ್ಬರಾಗಿದ್ದಾರೆ. ಸೌತ್ ಅಂಡ್ ನಾರ್ತ್‌ನಲ್ಲೂ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದಂತಹ ಈ ನಟಿ ನಟನೆಯಲ್ಲೂ ಹಾಗೂ ದೇಹದ ಮೈಮಾಟ ಪ್ರದರ್ಶನದಲ್ಲೂ ಯಾರಿಗೂ ಕಡಿಮೆಯಿಲ್ಲ ಎಂಬಂತೆ ಮುನ್ನುಗ್ಗುತ್ತಿದ್ದಾರೆ. ಆಕೆಯನ್ನು ಸಂಚಲನಾತ್ಮಕ ನಟಿಯೆಂದಲೇ ಕರೆಯಲಾಗುತ್ತದೆ. ಇದೀಗ ಟಾಲಿವುಡ್ ಸಿನಿರಂಗದ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಬೋಲ್ಡ್ ನಟಿ ರಾಧಿಕಾ ಆಪ್ಟೆ ಬಾಲಿವುಡ್ ನಲ್ಲಿ ಮೊಸ್ಟ್ ಟ್ಯಾಲೆಂಟೆಡ್ ನಟಿಯೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸಿನೆಮಾಗಳ ಜೊತೆಗೆ ಆಕೆ ಆಗಾಗ ಕೆಲವೊಂದು ಸಂಚಲನಾತ್ಮಕ ಹಾಗೂ ವಿವಾದಗಳಿಗೆ ಕಾರಣವಾಗುವಂತಹ ಹೇಳಿಕೆಗಳನ್ನು ಸಹ ನೀಡುತ್ತಾ ಸುದ್ದಿಯಾಗುತ್ತಿರುತ್ತಾರೆ. ಯಾರು ಏನು ಅಂದುಕೊಂಡರೂ ಅದನ್ನು ಲೆಕ್ಕಿಸದೆ ತನಗೆ ಇಷ್ಟಬಂದಂತೆ ಬದುಕಲು ಇಷ್ಟಪಡುತ್ತಿರುತ್ತಾರೆ. ಅಷ್ಟೇಅಲ್ಲದೇ ಯಾವುದೇ ವಿಚಾರವಿರಲಿ ಬೋಲ್ಡ್ ಆಗಿಯೇ ಮಾತನಾಡಿ ಎಲ್ಲರ ದೃಷ್ಟಿಯನ್ನು ಸೆಳೆಯುತ್ತಿರುತ್ತಾರೆ. ಸೌಂದರ್ಯ ಪ್ರದರ್ಶನದಲ್ಲಿ ಯಾವುದೇ ರೀತಿಯಲ್ಲಿ ಹಿಂದೆ ಮುಂದೆ ನೋಡದ ರಾಧಿಕಾ ಆಗಾಗ ಕೆಲವೊಂದು ವಿಚಾರಗಳ ಕಾರಣದಿಂದ ಸುದ್ದಿಯಾಗುತ್ತಿರುತ್ತಾರೆ. ಕೊನೆಯದಾಗಿ ಆಕೆ ವಿಜಯ್ ಸೇತುಪತಿ ಹಾಗೂ ಕತ್ರಿನಾ ಕೈಫ್ ರವರ ಮೆರ್ರಿ ಕ್ರಿಸ್ ಮಸ್ ಸಿನೆಮಾದಲ್ಲಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

ಇನ್ನೂ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ರಾಧಿಕಾ ಆಪ್ಟೆ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಟಾಲಿವುಡ್ ಸಿನಿರಂಗದ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ತೆಲುಗು ಸಿನಿರಂಗದಲ್ಲಿ ನಾನು ತುಂಬಾನೆ ಕಷ್ಟಪಟ್ಟೆ. ಆದರೆ ತೆಲುಗು ಸಿನೆಮಾಗಳಲ್ಲಿ ನಟಿಯರನ್ನು ನೋಡುವ ವಿಧಾನವೇ ಸರಿಯಿಲ್ಲ. ತೆಲುಗಿನಲ್ಲಿ ಮಹಿಳೆಯರ ಪಾತ್ರಕ್ಕೆ ಅಷ್ಟೊಂದು ಪ್ರಾಧಾನ್ಯತೆ ಇರೊಲ್ಲ. ಸೆಟ್ ನಲ್ಲಿ ಮೂರನೇ ವ್ಯಕ್ತಿಯಂತೆ ಟ್ರೀಟ್ ಮಾಡುತ್ತಾರೆ. ಅದರಲ್ಲೂ ತೆಲುಗಿನಲ್ಲಿ ಪುರುಷರ ಅಧಿಪತ್ಯ ತುಂಬಾನೆ ಜಾಸ್ತಿಯಾಗಿರುತ್ತದೆ. ಬೇರೆ ನಟ-ನಟಿಯರನ್ನು ಕೇಳದೇ ತಮಗೆ ಇಷ್ಟಬಂದಾಗ ಸಿನೆಮಾ ಶೂಟಿಂಗ್ ರದ್ದು ಮಾಡುತ್ತಿರುತ್ತಾರೆ. ಆ ರೀತಿ ನಾನು ಸಹ ತುಂಬಾನೆ ಕಿರಿಕಿರಿ ಅನುಭವಿಸಿದ್ದೆ. ಆದರೆ ಅದಕ್ಕೆ ಅಲ್ಲೇ ಎಂಡ್ ಕಾರ್ಡ್ ಬಿತ್ತು. ಅಲ್ಲಿ ನನ್ನ ಅವಶ್ಯಕತೆ ಅಷ್ಟೆ ಎಂದು ಗ್ರಹಿಸಿದೆ ಎಂದು ವಿಮರ್ಶೆ ಮಾಡಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಈ ಕಾಮೆಂಟ್ ಗಳು ಭಾರಿ ವೈರಲ್ ಆಗುತ್ತಿದೆ. ತೆಲುಗು ಫ್ಯಾನ್ಸ್ ರಾಧಿಕಾ ಆಪ್ಟೆ ವಿರುದ್ದ ಆಗ್ರಹ ವ್ಯಕ್ತಪಡಿಸುತ್ತಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.