ನನ್ನಂತೆ ದುಃಖ ಅನುಭವಿಸಿದರೇ ನಿಮಗೂ ತಿಳಿಯುತ್ತೇ ಎಂದು ಸಂಚಲನಾತ್ಮಕ ಪೋಸ್ಟ್ ಮಾಡಿ ಪವನ್ ಪತ್ನಿ ರೇಣು…..!

Follow Us :

ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ರವರ ಮಾಜಿ ಪತ್ನಿ ರೇಣು ದೇಸಾಯಿ ವಿಚ್ಚೇದನ ಪಡೆದುಕೊಂಡು ವರ್ಷಗಳೇ ಕಳೆದಿದೆ. ವಿಚ್ಚೇದನ ಬಳಿಕ ರೇಣು ತನ್ನ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ವಿಚ್ಚೇದನದ ಬಳಿಕ ಅನೇಕ ಬಾರಿ ರೇಣು ಪವನ್ ಕಲ್ಯಾಣ್ ರವರ ಬಗ್ಗೆ ಅನೇಕ ವಿಮರ್ಶೆಗಳನ್ನು ಮಾಡಿದರು. ಪವನ್ ಕಲ್ಯಾಣ್ ರವರಿಂದ ದೂರವಾದ ಬಳಿಕ ರೇಣು ದೇಸಾಯಿ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದರು. ಆಗಾಗ ಅವರು ನೀಡುವ ಪೋಸ್ಟ್ ಗಳಲ್ಲಿ ಅನೇಕ ಅರ್ಥಗಳು ಅಡಗಿರುತ್ತವೆ. ಇದೀಗ ಆಕೆ ಹಂಚಿಕೊಂಡ ಪೋಸ್ಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ನಟಿ ರೇಣು ದೇಸಾಯಿ ಸೋಷಿಯಲ್ ಮಿಡಿಯಾ ವೇದಿಕೆಯಾಗಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಕೆ ಹಂಚಿಕೊಳ್ಳುವ ಪೋಸ್ಟ್ ಗಳಲ್ಲಿ ತುಂಬಾನೆ ಅರ್ಥಗಳು ಅಡಗಿರುತ್ತವೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿರುತ್ತವೆ. ವಿಚ್ಚೇದನದ ಬಳಿಕ ಪವನ್ ನನಗೆ ಒಂದು ರೂಪಾಯಿ ಸಹ ನೀಡಿಲ್ಲ. ನನ್ನ ಸಂಪಾದನೆ ಹಾಗೂ ನನ್ನ ಉಳಿತಾಯದಿಂದ ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇ ಎಂದಿದ್ದರು. ಈ ಹೇಳಿಕೆಗಳಿಂದ ಪವನ್ ಕಲ್ಯಾಣ್ ಅಭಿಮಾನಿಗಳ ದೃಷ್ಟಿಯಲ್ಲಿ ರೇಣು ವಿರುದ್ದ ಆಕ್ರೋಷಗಳು ಹುಟ್ಟಿಕೊಂಡವು. ಈ ಹಿಂದೆ ರೇಣು ದೇಸಾಯಿ ಎರಡನೇ ಮದುವೆಯ ಬಗ್ಗೆ ಸಹ ಪವನ್ ಅಭಿಮಾನಿಗಳು ಆಕ್ರೋಷ ಹೊರಹಾಕಿದ್ದರು. ರೇಣು ದೇಸಾಯಿ ಎರಡನೇ ಮದುವೆಯಾಗಬಾರದು ಎಂದು ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಚರ್ಚೆಗಳನ್ನೆ ಮಾಡಿದ್ದರು. ಜೊತೆಗೆ ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡಿದ್ದರು. ಈ ಕಾರಣದಿಂದ ಆಕೆ ತುಂಬಾನೆ ನೋವನ್ನು ಸಹ ಅನುಭವಿಸಿದ್ದರು.

ಇನ್ನೂ ನಟಿ ರೇಣುದೇಸಾಯಿಗೆ ಅಕಿರಾ ನಂದನ್ ರನ್ನು ಪವನ್ ಕಲ್ಯಾಣ್ ಪುತ್ರ ಎಂದು ಹೇಳುವುದು ಇಷ್ಟವಿಲ್ಲ. ಅನೇಕ ಬಾರಿ ರೇಣು ದೇಸಾಯಿ ಈ ಕಾರಣದಿಂದ ತುಂಬಾ ಆಕ್ರೋಷ ಸಹ ವ್ಯಕ್ತಪಡಿಸಿದ್ದರು. ಇತ್ತಿಚಿಗೆ ಪವನ್ ಅಭಿಮಾನಿ ಒಬ್ಬರು ನಮ್ಮ ಅಣ್ಣ ಪವನ್ ಕಲ್ಯಾಣ್ ಮಗ ಎಂದು ಅಕಿರಾ ರನ್ನು ಉದ್ದೇಶಿಸಿ ಕಾಮೆಂಟ್ ಮಾಡಿದ್ದರು. ಮೇಡಂ ಅಕಿರಾ ನಮ್ಮ ಅಣ್ಣ ಪವನ್ ಕಲ್ಯಾಣ್ ರವರ ಪುತ್ರ  ನಮಗೆ ಅವರನ್ನು ತೋರಿಸುತ್ತಾ ಇರಿ ಎಂದು ರಿಕ್ವೆಸ್ಟ್ ಮಾಡಿದ್ದರು. ಈ ಪೊಸ್ಟ್ ರೇಣು ರವರನ್ನು ಆಕ್ರೋಷಕ್ಕೆ ಗುರಿ ಮಾಡಿತ್ತು. ಅಕಿರಾ ನನ್ನ ಮಗ, ನಿಮ್ಮ ಅಣ್ಣನ ಮಗ ಅಲ್ಲ ಎಂದು ಫೈರ್‍ ಆಗಿದ್ದರು. ಇಲ್ಲಿಂದ ಸೋಷಿಯಲ್ ಮಿಡಿಯಾದಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳು ಹಾಗೂ ರೇಣು ದೇಸಾಯಿ ನಡುವೆ ವಾರ್‍ ಶುರುವಾಗಿತ್ತು. ಬಳಿಕ ಕೆಲ ಪವನ್ ಅಭಿಮಾನಿಗಳು ಪವನ್ ಕಲ್ಯಾಣ್ ರವರ ಇಮೇಜ್ ಡ್ಯಾಮೆಜ್ ಮಾಡಲು ಕೆಲ ನಕಲಿ ಅಭಿಮಾನಿಗಳು ಇಂತಹ ತಪ್ಪು ಸಂದೇಶಗಳನ್ನು ಮಾಡುತ್ತಾರೆ. ನೀವು ನಿಮ್ಮ ಇನ್ಸ್ಟಾದಲ್ಲಿ ಕಾಮೆಂಟ್ಸ್ ಬಾಕ್ಸ್ ಆಫ್ ಮಾಡಿ ಎಂದು ಸಲಹೆ ನೀಡಿದ್ದರು.

ಈ ಸಲಹೆಯ ವಿರುದ್ದ ರೇಣು ಸಂಚಲನಾತ್ಮಕ ಪೋಸ್ಟ್ ಮಾಡಿದ್ದಾರೆ. ಸಮಾಜದೊಂದಿಗೆ ಇದೇ ಸಮಸ್ಯೆ. ಬೇರೆಯವರಿಗಾಗಿ ನಾನು ಬದಲಾಗಬೇಕೆ. ನೀವು ಹೇಳಿದಂತೆ ನಾನು ಜೀವನ ಸಾಗಿಸಲು ನಾನು ಏನು ತಪ್ಪು ಮಾಡಿದ್ದೇನೆ. ಸಲಹೆ ನೀಡುವುದು ತುಂಬಾ ಸುಲಭ. ನೋವು ಅನುಭವಿಸುವವರಿಗೆ ತಿಳಿಯುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ರೇಣು ಹಂಚಿಕೊಂಡ ಈ ಸ್ಟೇಟಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.