ಮತ್ತೊಮ್ಮೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ಮಂಚು ಮನೋಜ್, ವರ್ಷಗಳ ಕಾಲ ವನವಾಸ ಮಾಡಿದ್ದೇವೆ ಎಂದ ನಟ….!

Follow Us :

ತೆಲುಗು ಸಿನಿರಂಗದ ಮಂಚು ಕುಟುಂಬದ ಮಂಚು ಮನೋಜ್ ನೀಡುವಂತಹ ಹೇಳಿಕೆಗಳು ಇತ್ತಿಚಿಗೆ ಸಖತ್ ಸದ್ದು ಮಾಡುತ್ತಿವೆ. ಕೆಲವು ದಿನಗಳಿಂದ ಮಂಚು ಕುಟುಂಬದ ಬ್ರದರ್ಸ್ ನಡುವೆ ಕೋಲ್ಡ್ ವಾರ್‍ ನಡೆಯುತ್ತಿದೆ ಎಂಬ ರೂಮರ್‍ ಗಳು ಜೊರಾಗಿಯೇ ನಡೆಯುತ್ತಿವೆ. ಕಳೆದ ಮಾ 3,4 ರಂದು ಮಂಚು ಮನೋಜ್ ಹಾಗೂ ಭೂಮಾ ಮೋನಿಕಾ ರೆಡ್ಡಿ ಮದುವೆ ಕಡಿಮೆ ಮಂದಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನೆರವೇರಿದೆ. ಈ ಮದುವೆಯ ಸಂರ್ಪೂಣ ಜವಾಬ್ದಾರಿಯನ್ನು ಮಂಚು ಲಕ್ಷ್ಮೀ ವಹಿಸಿಕೊಂಡಿದ್ದರು. ಮದುವೆಯಾದ ಬಳಿಕ ಮಂಚು ಮನೋಜ್ ಸದಾ ಸುದ್ದಿಯಲ್ಲೇ ಇರುತ್ತಾರೆ. ಇದೀಗ ಮಂಚು ಮನೋಜ್ ನೀಡಿದ ಕೆಲ ಹೇಳಿಕೆಗಳು ವೈರಲ್ ಆಗುತ್ತಿವೆ.

ಹಾಸ್ಯ ನಟ ವೆನ್ನೆಲ ಕಿಷೋರ್‍ ಹೋಸ್ಟ್ ಮಾಡುವಂತಹ ಅಲಾ ಮೊದಲೈಂದಿ ಶೋ ನಲ್ಲಿ ಮನೋಜ್ ಹಾಗೂ ಮೋನಿಕಾ ಅತಿಥಿಗಳಾಗಿ ಹಾಜರಾಗಿದ್ದಾರೆ. ಈ ಜೋಡಿಯ ಎಂಟ್ರಿಯಿಂದ ಶೋ ಮತಷ್ಟು ಎನರ್ಜಿಯಿಂದ ನಡೆದಿದೆ ಎನ್ನಬಹುದಾಗಿದದೆ. ಇನ್ನೂ ಈ ಶೋ ನಲ್ಲಿ ವೆನ್ನೆಲ ಕಿಷೋರ್‍ ಕೇಳಿದ ಅನೇಕ ಪ್ರಶ್ನೆಗಳಿಗೆ ಮನೋಜ್ ಉತ್ತರ ನೀಡಿದ್ದಾರೆ. ಈ ವೇಳೆ ಮನೋಜ್ ನೀಡಿದ ಹೇಳಿಕೆಗಳು ಸಂಚಲನ ಸೃಷ್ಟಿಸಿದೆ. ಇನ್ನೂ ಮನೋಜ್ ಮಾತನಾಡುತ್ತಾ ನಾವು ಅನೇಕ ವರ್ಷಗಳು ದೇಶಗಳನ್ನು ಸುತ್ತಾಡುತ್ತಾ ವನವಾಸ ಮಾಡಿದ್ದೇವೆ. ಮೋನಿಕಾ ರವರ ತಾಯಿ ಮೃತಪಟ್ಟಾಗ ಅಂತಹ ಪರಿಸ್ಥಿತಿಯಲ್ಲಿ ತುಂಬಾ ನೋವನ್ನು ಅನುಭವಿಸಿದ್ದೆ. ಆಕೆಗೆ ಸಪೋರ್ಟ್ ಆಗಿ ಇರದೇ ಇದ್ದರೇ ನಾನು ಬದುಕ್ಕಿದ್ದು ವ್ಯರ್ಥ ಎಂದು ಅನ್ನಿಸಿತ್ತು. ಎಷ್ಟು ಬಾಗಿಲುಗಳನ್ನು ಮುಚ್ಚಿತ್ತಿರೋ ಮುಚ್ಚಿ ಎಂದು ಸಂಚಲನಾತ್ಮಕ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಇನ್ನೂ ಕೆಲವು ದಿನಗಳ ಹಿಂದೆ ಮಂಚು ಮನೋಜ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋದಲ್ಲಿ ಮಂಚು ವಿಷ್ಣು ಮನೋಜ್ ಸಂಬಂಧಿಕರ ನಡುವೆ ಗಲಾಟೆಯಾಗಿತ್ತು. ಈ ವಿಡಿಯೋ ಬಳಿಕ ಪ್ರತಿನಿತ್ಯ ಒಂದಲ್ಲ ಒಂದು ವಿಚಾರ ಮಂಚು ಕುಟುಂಬದ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇದೆ. ಬಳಿಕ ಮನೋಜ್ ತಂದೆ ಮದ್ಯಸ್ಥಿಕೆ ವಹಿಸಿ ವಿಡಿಯೋ ಡಿಲೀಟ್ ಮಾಡಿಸಿದ್ದರು. ಅದಾದ ಬಳಿಕ ವಿಷ್ಣು ತನ್ನ ಕುಟುಂಬದ ಇಮೇಜ್ ಡ್ಯಾಮೇಜ್ ಆಗುವುದರಿಂದ ತಪ್ಪಿಸಿಕೊಳ್ಳಲು ಹೌಸ್ ಆಫ್ ಮಂಚೂಸ್ ಎಂಬ ರಿಯಾಲಿಟಿ ಶೋ ಗಾಗಿ ಆ ಗಲಾಟೆ ವಿಡಿಯೋ ಪ್ರೊಮೋ ಆಗಿ ಬಳಸಲಾಗಿದೆ ಎಂದು ಹೇಳಿದರು. ಬಳಿಕ ಮನೋಜ್ ಹಾಗೂ ಲಕ್ಷ್ಮೀ ಸಹ ಅದೆಲ್ಲಾ ನಮಗೆ ಗೊತ್ತೇ ಇಲ್ಲ ಎಂದು ಹೇಳುವ ಮೂಲಕ ಅದಕ್ಕೂ ಚೆಕ್ ಇಟ್ಟರು.

ಮಂಚು ಮನೋಜ್ ಹಾಗೂ ಮೋನಿಕಾ ಮದುವೆಯ  ಕಾರಣದಲ್ಲಿ ಮಂಚು ಕುಟುಂಬದಲ್ಲಿ ಅನೇಕ ವಿಬೇದಗಳು ಸೃಷ್ಟಿಯಾದವು ಎನ್ನಲಾಗುತ್ತಿದೆ. ಇನ್ನೂ ಮನೋಜ್ ಮಾಡುವಂತಹ ಕಾಮೆಂಟ್ ಗಳು ಕಡಿಮೆ ಸಮಯದಲ್ಲೇ ಸಖತ್ ಸದ್ದು ಮಾಡುತ್ತಿವೆ. ಮನೋಜ್ ಏನೇ ಮಾಡಿದರೂ ಸಹ ಅದು ವೈರಲ್ ಆಗುತ್ತಿದೆ. ಇದೀಗ ಅಲಾ ಮೊದಲೈಂದಿ ಶೋ ನಲ್ಲಿ ಮನೋಜ್ ನೀಡಿದ ಹೇಳಿಕೆಗಳು ಇದೀಗ ವೈರಲ್ ಆಗುತ್ತಿವೆ. ಇನ್ನೂ ಈ ಶೋ ಪೂರ್ಣವಾಗಿ ಏ.18 ರಂದು ಪ್ರಸಾರವಾಗಲಿದೆ. ಪೂರ್ಣ ಶೋ ನಲ್ಲಿ ಮನೋಜ್ ಇನ್ನೂ ಏನೇನು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.