Film News

ಯಾನಿಮಲ್ ಸಿನೆಮಾದಲ್ಲಿನ ರಣಬೀರ್ ಕಪೂರ್ ಜೊತೆಗೆ ಲಿಪ್ ಲಾಕ್ ಗಾಗಿ ಭಾರಿ ವಸೂಲಿ ಮಾಡಿದ ರಶ್ಮಿಕಾ ಮಂದಣ್ಣಾ….!

ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡ ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಅಂಡ್ ನಾರ್ತ್‌ನಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಸದ್ಯ ರಶ್ಮಿಕಾ ಮಂದಣ್ಣ ಬಾಲಿವುಡ್ ನ ಸ್ಟಾರ್‍ ನಟ ರಣಬೀರ್‍ ಕಪೂರ್‍ ಜೊತೆಗೆ ಯಾನಿಮಲ್ ಸಿನೆಮಾದಲ್ಲಿ ನಟಿಸಿದ್ದು ಶೀಘ್ರದಲ್ಲೇ ಈ ಸಿನೆಮಾ ರಿಲೀಸ್ ಆಗಲಿದೆ. ಈ ಸಿನೆಮಾದ ಟೀಸರ್‍ ಸಹ ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡಿದೆ. ಈ ಸಿನೆಮಾದಲ್ಲಿ ರಣಬೀರ್‍ ಹಾಗೂ ರಶ್ಮಿಕಾ ಲಿಪ್ ಲಾಕ್ ದೃಶ್ಯವಿದ್ದು, ಇದಕ್ಕಾಗಿ ಆಕೆ ಭಾರಿ ಮೊತ್ತ ಡಿಮ್ಯಾಂಡ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ಕೆರಿಯರ್‍ ಒಳ್ಳೆಯ ಪೀಕ್ ನಲ್ಲಿದೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಸೌತ್ ಅಂಡ್ ನಾರ್ತ್ ನಲ್ಲಿ ಸ್ಟಾರ್‍ ನಟರ ಜೊತೆಗೆ ಸಿನೆಮಾಗಳಲ್ಲಿ ನಟಿಸುತ್ತಾ ಫೇಂ ಪಡೆದುಕೊಂಡಿದ್ದಾರೆ. ಜೊತೆಗೆ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕ ಕೊಂಚ ಓವರ್‍ ಆಗಿ ಎಕ್ಸ್ ಪೋಸ್ ಮಾಡುತ್ತಿದ್ದಾರೆ. ಇದೀಗ ಹಿರೋ ಜೊತೆಗೆ ಬೋಲ್ಡ್ ಆಗಿ ರೊಮ್ಯಾನ್ಸ್ ಮಾಡಲು ಸಹ ಸೈ ಎನ್ನುತ್ತಿದ್ದಾರೆ. ಬಾಲಿವುಡ್ ನಿರ್ದೇಶಕ ಸಂದೀಪ್ ರೆಡ್ಡಿ ಹಾಗೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್ ನಲ್ಲಿ ತೆರೆಕಂಡ ಮೋಸ್ಟ್ ಇಂಟ್ರಸ್ಟಿಂಗ್ ಯಾನಿಮಲ್ ಸಿನೆಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿ ತೆರೆಗೆ ಬರಲಿದೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ.

ಯಾನಿಮಲ್ ಸಿನೆಮಾದ ಟೀಸರ್‍ ಹಾಗೂ ಫಸ್ಟ್ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಭಾರಿ ರೆಸ್ಪಾನ್ಸ್ ಪಡೆದುಕೊಂಡಿದೆ.  ಈ ಸಿನೆಮಾದಲ್ಲಿ ರಣಬೀರ್‍ ಹಾಗೂ ರಶ್ಮಿಕಾ ನಡುವೆ ಕೆಲವೊಂದು ಬೋಲ್ಡ್ ದೃಶ್ಯಗಳಿವೆ. ಇದೀಗ ಬಿಡುಗಡೆಯಾದ ಲಿರಿಕಲ್ ವಿಡಿಯೋ ಸಾಂಗ್ ನಲ್ಲಿ ರಶ್ಮಿಕಾ ಹಾಗೂ ರಣಬೀರ್‍ ಕಪೂರ್‍ ನಡುವೆ ಲಿಪ್ ಕಿಸ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಇಬ್ಬರ ಲಿಪ್ ಲಾಕ್ ದೃಶ್ಯ ನೋಡಿದ ಅನೇಕರು ಶಾಕ್ ಆಗುತ್ತಾ, ರಶ್ಮಿಕಾ ಸೌತ್ ನಲ್ಲಿ ಈ ಮಾದರಿಯಲ್ಲಿ ಬೋಲ್ಡ್ ಆಗಿ ನಟಿಸಿಲ್ಲ. ಬಾಲಿವುಡ್ ನಲ್ಲಿ ಆ ಮಾದರಿಯಲ್ಲಿ ಬೋಲ್ಡ್ ಆಗಿ ನಟಿಸಿದ್ದಕ್ಕಾಗಿ ಎಲ್ಲರೂ ಶಾಕ್ ಆಗುತ್ತಿದ್ದಾರೆ. ಇನ್ನೂ ಆಕೆ ಮತಷ್ಟು ಬೋಲ್ಡ್ ದೃಶ್ಯಗಳಲ್ಲೂ ನಟಿಸುತ್ತಾರಾ ಎಂಬ ಅನುಮಾನಗಳೂ ಮೂಡುವಂತೆ ಮಾಡಿದೆ.

ಇನ್ನೂ ಇದೀಗ ಸುದ್ದಿಯೊಂದು ಕೇಳಿಬರುತ್ತಿದ್ದು, ಅದರಂತೆ ಒಂದು ಲಿಪ್ ಲಾಕ್ ದೃಶ್ಯಕ್ಕಾಗಿ ರಶ್ಮಿಕಾ ನಿರ್ಮಾಪಕರಿಂದ ಬರೊಬ್ಬರಿ 20 ಲಕ್ಷ ರೆನ್ಯುಮರೇಷನ್ ಪಡೆದುಕೊಂಡಿದ್ದಾರೆ. ಅಂದರೇ ಆಕೆ ಸಿನೆಮಾಗೆ ಒಪ್ಪಿಕೊಂಡ ಸಂಭಾವನೆ ಜೊತೆಗೆ ಹೆಚ್ಚುವರಿಯಾಗಿ ಈ ಸಂಭಾವನೆ ಪಡೆದುಕೊಂಡಿದ್ದಾರಂತೆ. ಈ ಸಿನೆಮಾದಲ್ಲಿ ಎಷ್ಟು ಲಿಪ್ ಕಿಸ್ ಇದೆಯೋ ಒಂದೊಂದು ಕಿಸ್ ಗೆ 20 ಲಕ್ಷದಂತೆ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಈ ಸುದ್ದಿಯಲ್ಲಿ ಸತ್ಯಾಂಶ ಇದೆಯೋ ಇಲ್ಲವೋ ಸುದ್ದಿ ಮಾತ್ರ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

Most Popular

To Top