Film News

ಅಗಲಿದ ತಾರೆಯರ ಪೊಟೋ ಇಟ್ಟು ಪೂಜೆ ಸಲ್ಲಿಸಿದ ಸೃಜನ್ ಕುಟುಂಬ, ಎಲ್ಲರ ಮೆಚ್ಚುಗೆಗೆ ಪಾತ್ರರಾದ ಸೃಜನ್ ಕುಟುಂಬ……!

ಸ್ಯಾಂಡಲ್ ವುಡ್ ನ ನಟ ಸೃಜನ್ ಲೋಕೇಶ್ ರವರ ಇಡೀ ಕುಟುಂಬ ಸಿನಿಮಾ ರಂಗಕ್ಕೆ ಸೇರಿದವರಾಗಿದ್ದಾರೆ. ಸೃಜನ್ ತಂದೆ ಮೈಸೂರ್‍ ಲೋಕೇಶ್,  ತಾಯಿ ಗಿರಿಜಾ ಲೋಕೇಶ್, ತಂಗಿ ಪೂಜಾ ಲೋಕೇಶ್ ರವರುಗಳು ಕಲಾವಿದರೇ ಆಗಿದ್ದು, ಕಲಾವಿದರ ಮೇಲೆ ಅವರಿಗೆ ಅಪಾರ ಗೌರವ ಹಾಗೂ ಪ್ರೀತಿ ಇದೆ. ಈ ಹಾದಿಯಲ್ಲೇ ಇದೀಗ ಕನ್ನಡ ಸಿನಿರಂಗದಲ್ಲಿ ಇಹಲೋಕದಿಂದ ದೂರವಾದ ಕೆಲ ತಾರೆಯರ ಪೊಟೋಗಳನ್ನು ಇಟ್ಟು ಪಿತೃಪಕ್ಷದ ಆಚರಣೆಯನ್ನು ವಿಭಿನ್ನವಾಗಿ ಆಚರಿಸಿದ್ದಾರೆ.

ಪಿತೃಪಕ್ಷದ ಆಚರಣೆಯನ್ನು ಕನ್ನಡ ನಟ ಹಾಗೂ ನಿರೂಪಕ ಸೃಜನ್ ಲೋಕೇಶ್ ರವರು ತಮ್ಮ ಮನೆಯಲ್ಲಿ ವಿಭಿನ್ನವಾಗಿ ಆಚರಿಸಿದ್ದಾರೆ. ಸಿನಿರಂಗದಲ್ಲಿ ಅಜರಾಮರರಾಗಿರುವಂತಹ ಅನೇಕ ದಿಗ್ಗಜರು ಹಾಗೂ ನಟ-ನಟಿಯರ ಪೊಟೋಗಳನ್ನು ಇಟ್ಟು ಪಿತೃಪಕ್ಷದ ಆಚರಣೆ ಮಾಡಿದ್ದಾರೆ. ಅಗಲಿದ ಸಿನೆಮಾ ತಾರೆಯರಿಗೆ ಅಲಂಕಾರ ಮಾಡಿ ಪಿತೃಗಳ ಗೌರವ ಕೊ‌ಟ್ಟು ಪೂಜೆ ಮಾಡಿದ್ದಾರೆ ಸೃಜನ್ ಲೋಕೇಶ್ ಕುಟುಂಬ. ಮಹಾಲಯ ಅಮಾವಾಸ್ಯೆಯ ಪ್ರಯುಕ್ತ ಅನೇಕ ಕಡೆ ಪಿತೃಪಕ್ಷ ಆಚರಣೆ ಮಾಡುತ್ತಾರೆ. ಮರಣ ಹೊಂದಿರುವಂತಹವರ ಪ್ರತಿಮೆ ಅಥವಾ ಪೊಟೋಗಲಿಗೆ ಪೂಜೆ ಮಾಡಿ ಎಡೆ ಇಟ್ಟು ಗೌರವಿಸುವಂತಹ ಪದ್ದತಿ ನಡೆದುಕೊಂಡು ಬಂದಿದೆ. ಅದರಲ್ಲೂ ಕೆಲವರು ಪಿತೃಪಕ್ಷವನ್ನು ತಿಥಿಯೆಂದು ಮಾಡುತ್ತಾರೆ.

ಆದರೇ ಸೃಜನ್ ಲೋಕೇಶ್ ರವರು ಸಿನಿರಂಗದಲ್ಲಿ ಅಗಲಿದ ಕೆಲ ತಾರೆಯರ ಪೊಟೋಗಳನ್ನು ಇಟ್ಟು ಪಿತೃಪಕ್ಷ ಪೂಜೆ ಮಾಡಿದ್ದಾರೆ. ಮೈಸೂರ್‍ ಲೋಕೇಶ್ ಹಾಗೂ ಅವರ ತಾಯಿ, ಡಾ.ರಾಜ್ ಕುಮಾರ್‍, ಡಾ.ವಿಷ್ಣುವರ್ಧನ್, ಪುನೀತ್ ರಾಜ್ ಕುಮಾರ್‍, ಚಿರಂಜೀವಿ ಸರ್ಜಾ,  ವಜ್ರಮುನಿ, ಕಲ್ಪನಾ, ಮಂಜುಳಾ ಸೇರಿದಂತೆ ಕೆಲವು ನಟ-ನಟಿಯರ ಪೊಟೋಗಳನ್ನು ಇಟ್ಟು ವಿಭಿನ್ನವಾಗಿ ಪಿತೃಪಕ್ಷ ಆಚರಣೆ ಮಾಡಿದ್ದಾರೆ. ಈ ಸಂಬಂಧ ವಿಡಿಯೋವನ್ನು ಕೆಲವರು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ಇನ್ನೂ ತಮ್ಮನ್ನು ಅಗಲಿದಂತಹ ಹಲವು ಸಿನೆಮಾ ತಾರೆಯರನ್ನು ಸೃಜನ್ ಮನೆಯಲ್ಲಿ ಒಟ್ಟಿಗೆ ಇರಿಸಿ ಪೂಜೆ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Most Popular

To Top