ಪ್ರೀತಿಯ ಅಣ್ಣನ ಸಮಾಧಿ ಪಕ್ಕ ಮಲಗಿದ ನಟ ಧ್ರುವ ಸರ್ಜಾ, ವೈರಲ್ ಆದ ವಿಡಿಯೋ….!

Follow Us :

ಕನ್ನಡ ಸಿನಿರಂಗದ ಖ್ಯಾತ ನಟ ದಿವಂಗತ ಚಿರಂಜೀವಿ ಸರ್ಜಾ ಇಹಲೋಕ ತ್ಯೆಜಿಸಿ ಮೂರು ವರ್ಷಗಳ ಸಮಯವಾಗುತ್ತಾ ಬಂದಿದೆ. ಇಂದಿಗೂ ಸಹ ಅವರ ಕುಟುಂಬಸ್ಥರು ಹಾಗೂ ಅವರ ಅಭಿಮಾನಿಗಳು ಚಿರು ಅಗಲಿಕೆಯ ನೋವನ್ನು ಇನ್ನೂ ಮರೆತಿಲ್ಲ. ಚಿರು ಪತ್ನಿ ಮೇಘನಾ ರಾಜ್ ತನ್ನ ಮಗನಲ್ಲಿ ಚಿರು ರನ್ನು ನೋಡಿಕೊಳ್ಳುತ್ತಾ ಮತ್ತೆ ಸಿನೆಮಾಗಳಲ್ಲಿ ಮರಳಿದ್ದಾರೆ. ಜೊತೆಗೆ ಚಿರು ಸಹೋದರ ಧ್ರುವ ಸರ್ಜಾ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಸಹ ತನ್ನ ಪ್ರೀತಿಯ ಅಣ್ಣ ಇಲ್ಲದ ಕೊರಗು ಮಾತ್ರ ಇನ್ನೂ ಆತನಲ್ಲಿ ಕಾಡುತ್ತಲೇ ಇದೆ. ಇದೀಗ ಧ್ರುವ ಸರ್ಜಾ ತನ್ನ ಅಣ್ಣನ ಸಮಾದಿಯ ಬಳಿ ಮಲಗಿದ್ದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟ ಧ್ರುವ ಸರ್ಜಾ ತನ್ನ ಅಣ್ಣನ ಮೇಲೆ ಎಷ್ಟರ ಮಟ್ಟಿಗೆ ಪ್ರೀತಿ ಇಟ್ಟುಕೊಂಡಿದ್ದಾನೆ ಎಂಬುದು ಈ ವಿಡಿಯೋ ನೋಡಿದರೇ ತಿಳಿಯಲಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಧ್ರುವ ಸರ್ಜಾ ಚಿರಂಜೀವಿ ಸರ್ಜಾ ಸಮಾಧಿಯ ಪಕ್ಕದಲ್ಲೇ ಮಲಗಿದ್ದಾರೆ. ಗಾಢ ನಿದ್ದೆಗೆ ಜಾರಿದ ಧ್ರುವ ಸರ್ಜಾರವರನ್ನು ಅಭಿಮಾನಿಗಳು ಎಬ್ಬಿಸಿದ್ದಾರೆ. ಇನ್ನೂ ಈ ವಿಡಿಯೋವನ್ನು ಅಭಿಮಾನಿಗಳೇ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೀಕ್ಷಣೆ ಕಾಣುತ್ತಿದೆ. ಈ ವಿಡಿಯೋ ನೋಡಿದರೇ ಧ್ರುವ ತನ್ನ ಅಣ್ಣನ ಮೇಲೆ ಎಷ್ಟೊಂದು ಪ್ರೀತಿ ಇಟ್ಟುಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಇನ್ನೂ ಧ್ರುವ ಸರ್ಜಾ ತಮ್ಮ ಫಾರಂ ಹೌಸ್ ನಲ್ಲಿಯೇ ಅಣ್ಣನ ಸಮಾಧಿ ಮಾಡಿದ್ದಾರೆ. ಕನಕಪುರದ ಬಳಿಯ ನೆಲಗುಳಿ ಎಂಬಲ್ಲಿರುವ ಧ್ರು ಸರ್ಜಾ ಫಾರಂ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ರವರ ಸಮಾಧಿ ನಿರ್ಮಿಸಲಾಗಿದೆ. ಇತ್ತೀಚಿಗಷ್ಟೆ ಧ್ರುವ ಸರ್ಜ ತನ್ನ ಅಣ್ಣನ ಸಮಾದಿ ಬಳಿ ಮಲಗಿದ್ದರು. ಧ್ರುವ ಒಬ್ಬರೇ ಅಣ್ಣನ ಸಮಾಧಿ ಬದಿಯಲ್ಲಿ ಮಲಗಿದ್ದಾರೆ. ಇದನ್ನು ಕಂಡ ಅನೇಕರು ನೋವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೋಡಿದ ಅನೇಕರು ಭಾವುಕರಾಗಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇನ್ನೂ ಅಕ್ಟೋಬರ್‍ 6 ರಂದು ಚಿರಂಜೀವಿ ಸರ್ಜಾ ರವರ ಹುಟ್ಟುಹಬ್ಬವಿದ್ದು, ಅಂದು ಚಿರು ಅಭಿನಯದ ಕೊನೆಯ ಸಿನೆಮಾ ರಾಜಮಾರ್ತಾಂಡ ಸಿನೆಮಾ ಸಹ ಬಿಡುಗಡೆಯಾಗಲಿದೆ. ಈ ಸಿನೆಮಾಗೆ ಧ್ರುವ ಸರ್ಜ ರವರೇ ಧ್ವನಿ ನೀಡಿದ್ದು, ಸಿನೆಮಾ ಬಿಡುಗಡೆಗೆ ಆರ್ಥಿಕ ಸಹಾಯ ಸಹ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಭಾರಿ ನಿರೀಕ್ಷೆ ಹುಟ್ಟಿಸಿರುವ ಮಾರ್ಟಿನ್ ಸಿನೆಮಾದಲ್ಲಿ ಧ್ರುವ ಸರ್ಜಾ ಭಾರಿ ಆಕ್ಷನ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿ ತೆರೆಕಾಣಲಿದೆ. ಈ ಸಿನೆಮಾದ ಜೊತೆಗೆ ಕನ್ನಡದ ಸ್ಟಾರ್‍ ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ಕೆಡಿ ಎಂಬ ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ. ಈ ಸಿನೆಮಾದಲ್ಲಿ ಭಾರತ ಸಿನಿರಂಗದ ಅನೇಕ ಸ್ಟಾರ್‍ ಕಲಾವಿದರು ಬಣ್ಣ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.