ಸಂಬಂಧಗಳಲ್ಲಿ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಬಾರದೆಂದು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಏನಾಯ್ತು ಎಂದ ಫ್ಯಾನ್ಸ್….!

Follow Us :

ಕನ್ನಡ ಸಿನಿರಂಗದಲ್ಲಿ ಮೋಹಕತಾರೆ ಎಂತಲೇ ಕರೆಯಲಾಗುವ ರಮ್ಯಾ ಇದೀಗ ಮತ್ತೆ ಸಿನಿರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸುಮಾರು ವರ್ಷಗಳ ಕಾಲ ಸಿನೆಮಾಗಳಿಂದ ದೂರವುಳಿದ ರಮ್ಯಾ ಇದೀಗ ಸಿನೆಮಾಗಳಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ. ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಸಹ ಆರಂಭಿಸಿ ನಿರ್ಮಾಪಕಿಯಾಗಿದ್ದಾರೆ. ಜೊತೆಗೆ ಕನ್ನಡ ಸಿನೆಮಾ ಕಾರ್ಯಕ್ರಮಗಳಲ್ಲೂ ಸಹ ಆಕೆ ಭಾಗಿಯಾಗುತ್ತಾ ಕನ್ನಡ ಸಿನೆಮಾಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದೀಗ ಆಕೆ  ಸಂಬಂಧಗಳ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ರವರ ಅಭಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಮ್ಯಾ, ಕಡಿಮೆ ಸಮಯದಲ್ಲೇ ಭಾರಿ ಫೇಂ ಪಡೆದುಕೊಂಡರು. ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸಿ, ಸೂಪರ್‍ ಹಿಟ್ ಪಡೆದುಕೊಂಡು ಸ್ಯಾಂಡಲ್ ವುಡ್ ಕ್ವೀನ್ ಎಂಬ ಖ್ಯಾತಿ ಸಹ ಪಡೆದುಕೊಂಡರು. ಜೊತೆಗೆ ತೆಲುಗು ಹಾಗೂ ತಮಿಳು ಸಿನೆಮಾಗಳಲ್ಲೂ ಸಹ ನಟಿಸಿ ಸೌತ್ ಸಿನಿರಂಗದ ನಟಿಯಾಗಿ ಫೇಂ ಪಡೆದುಕೊಂಡರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ರಮ್ಯಾ ಪೊಟೋಶೂಟ್ಸ್ ಹಾಗೂ ತಮ್ಮ ಸಿನೆಮಾಗಳ ಅಪ್ಡೇಟ್ ಸಹ ನೀಡುತ್ತಾ ಅಭಿಮಾನಿಗಳಿಗೆ ಟಚ್ ನಲ್ಲೇ ಇರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೇ ಆಕೆ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದರು. ಈ ಕಾರಣದಿಂದ ಆಕೆ ಟ್ರೋಲ್ ಸಹ ಆಗಿದ್ದರು.

ಇನ್ನೂ ರಮ್ಯಾ ಸಂಬಂಧ, ಸ್ನೇಹ ಹಾಗೂ ನಿರೀಕ್ಷೆಗಳ ಬಗ್ಗೆ ಮಾತನಾಡಿರುವ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ. ಯಾರ ಮೇಲೂ ಯಾವುದೇ ಕಾರಣಕ್ಕೂ ನಾವು ನಿರೀಕ್ಷೆ ಇಟ್ಟುಕೊಳ್ಳಬಾರದು. ನಿಮ್ಮ ಕಾಲ ಮೇಲೆ ನಿಂತು ಸ್ವತಂತ್ರರಾಗಬೇಕು. ಸ್ನೇಹ ಇರಲಿ, ಸಬಂಧ ಇರಲಿ ಯಾರ ಮುಂದೆಯೂ ತಲೆಬಾಗಬಾರದು ಒಂದು ವೇಳೆ ತಲೆ ಬಾಗಿದರೇ ಜೀವನ ಪೂರ್ತಿ ತಲೆ ಬಾಗಿಯೇ ಇರಬೇಕು. ಜೊತೆಗೆ ಯಾರ ಮೇಲೂ ಯಾವುದೇ ವಿಚಾರಕ್ಕೂ ಅತಿಯಾದ ನಂಬಿಕೆ ಇಟ್ಟುಕೊಳ್ಳಬಾರದು. ಆದರೆ ನಿಮ್ಮಲ್ಲಿರುವ ಕೊರತೆ ಅವರಿಗೆ ತಿಳಿದು ನೀವೇ ಸೋಲಬೇಕಾಗುತ್ತದೆ. ನೀವಿ ತಮ್ಮ ಮೇಲೆ ಅವಲಂಬಿತರಾಗಿದ್ದೀರಾ ಎಂದರೇ ಸದಾ ಅದೇ ರೀತಿಯಲ್ಲಿ ನೋಡುತ್ತಾರೆ. ಏನೇ ಕೆಲಸ ಮಾಡಿದರೂ ಸ್ವತಂತ್ರವಾಗಿ ಮಾಡಬೇಕು ಎಂದು ರಮ್ಯಾ ಹೇಳಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಯಾಕೆ ಮೇಡಂ ಏನಾಯ್ತು ಎಂಬೆಲ್ಲಾ ಕಾಮೆಂಟ್ ಗಳ ಮೂಲಕ ಆಕೆಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇನ್ನೂ ಇತ್ತೀಚಿಗೆ ತೆರೆಕಂಡ ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ ಸಿನೆಮಾದಲ್ಲಿ ರಮ್ಯಾ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಆಕೆಯ ಅನುಮತಿಯಿಲ್ಲದೇ ಪೊಟೋ ಬಳಸಿಕೊಂಡಿದ್ದಾರೆ ಎಂದು ರಮ್ಯಾ ಗರಂ ಸಹ ಆಗಿದ್ದರು. ಡಾಲಿ ಧನಂಜಯ್ ಜೊತೆಗೆ ಉತ್ತರಾಖಾಂಡ ಸಿನೆಮಾದಲ್ಲಿ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ.