Film News

ಸಿನೆಮಾ ಪ್ರಮೋಷನ್ ಗೆ ಅನಾರೋಗ್ಯದ ನೆಪ, ಬಾಯ್ ಫ್ರೆಂಡ್ ಜೊತೆ ಜಾಲಿ ರೈಡ್ ಹೊಡೆದ ಶ್ರುತಿ ಹಾಸನ್…!

ಇತ್ತೀಚಿಗೆ ಸೌತ್ ಸಿನಿರಂಗದ ಸ್ಟಾರ್‍ ನಟಿ ಶ್ರುತಿ ಹಾಸನ್ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಲೇ ಇದ್ದಾರೆ. ನಟಿ ಶ್ರುತಿ ಹಾಸನ್ ಅಭಿನಯದ ವೀರಸಿಂಹಾರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಸಿನೆಮಾ ಕಳೆದೆರಡು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಾ ಯಶಸ್ವಿಯಾಗಿ ಪ್ರದರ್ಶನ ಆಗುತ್ತಿದೆ.  ನಟಿ ಶ್ರುತಿ ಹಾಸನ್ ತಮ್ಮ ಸಿನೆಮಾಗಳ ಪ್ರಮೋಷನ್ ಗೆ ಅನಾರೋಗ್ಯದ ನೆಪ ಹೇಳಿ, ಇದೀಗ ಬಾಯ್ ಫ್ರೆಂಡ್ ಜೊತೆ  ಜಾಲಿಯಾಗಿ ಸುತ್ತಾಡುತ್ತಿದ್ದಾಳೆ ಎಂದು ಆರೋಪಗಳು ಕೇಳಿಬರುತ್ತಿವೆ.

ನಟಿ ಶ್ರುತಿ ಹಾಸನ್ ವಾಲ್ತೇರು ವೀರಯ್ಯ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರಲಿಲ್ಲ. ಆಕೆ ತೀವ್ರ ಜ್ವರದಿಂದ ಬಳಲುತ್ತಿದ್ದು, ಕೋವಿಡ್ ಚೆಕ್ ಅಪ್ ಸಹ ಮಾಡಿಕೊಂಡಿದ್ದೇನೆ ಎಂದು ಹೇಳಿ ಪ್ರಮೋಷನ್ ನಲ್ಲಿ ಭಾಗಿಯಾಗಿರಲಿಲ್ಲ. ಆದರೆ ಆಕೆ ಇದೀಗ ಬಾಯ್ ಫ್ರೆಂಡ್ ಜೊತೆಗೆ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅನಾರೋಗ್ಯದ ಕಾರಣದಿಂದ ಆಕೆ ಸಿನೆಮಾ ಪ್ರಮೋಷನ್ ನಲ್ಲಿ ಭಾಗಿಯಾಗಿಲ್ಲ ಎಂದು ಪ್ರಮೋಷನ್ ಕಾರ್ಯಕ್ರಮದಲ್ಲಿ ಚಿರಂಜೀವಿ ಹೇಳಿದ್ದರು. ಆದರೆ ಇದೀಗ ಆಕೆ ತನ್ನ ಪ್ರಿಯಕರ ಶಾಂತಾನು ಹಜಾರಿಕಾ ಜೊತೆ ಎಂಜಾಯ್ ಮಾಡುತ್ತಾ ಸುತ್ತಾಡುತ್ತಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ನಟಿ ಶ್ರುತಿ ಹಾಸನ್ ನಂದಮೂರಿ ಬಾಲಕೃಷ್ಣ ಜೊತೆಗೆ ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಜ.12 ರಂದು ಬಿಡುಗಡೆಯಾಗಿದೆ. ಮೆಗಾಸ್ಟಾರ್‍ ಚಿರಂಜೀವಿ ಜೊತೆಗೆ ವಾಲ್ತೇರು ವೀರಯ್ಯ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಜ.13 ರಂದು ಬಿಡುಗಡೆಯಾಗಿದೆ. ಆದರೆ ಈ ಸಿನೆಮಾ ಪ್ರಮೋಷನ್ ಗಳಲ್ಲಿ ಶ್ರುತಿ ಹಾಸನ್ ಕಾಣಿಸಿಕೊಂಡಿರಲಿಲ್ಲ. ಈ ಕಾರಣದಿಂದ ಆಕೆ ಮಾನಸಿಕ ಸಮಸ್ಯೆಯಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಆಕೆ ಗರಂ ಆಗಿದ್ದು, ಸುಳ್ಳು ಸುದ್ದಿಗಳ ವಿರುದ್ದ ಆಕ್ರೋಷ ಹೊರಹಾಕಿದ್ದರು. ನನಗೆ ಜ್ವರ ಬಂದಿತ್ತು ಅಷ್ಟೆ, ನೀವು ವೈದ್ಯರನ್ನು ಸಂಪರ್ಕ ಮಾಡಿ, ನನಗೆ ಯಾವುದೇ ಮಾನಸಿಕ ಸಮಸ್ಯೆಯಿಲ್ಲ ಎಂದು ಟಾಂಗ್ ಕೊಟ್ಟಿದ್ದರು.

ಇನ್ನೂ ಶ್ರುತಿ ಹಾಸನ್ ವಾಲ್ತೇರು ವೀರಯ್ಯ ಸಿನೆಮಾದ ಪ್ರಮೋಷನ್ ನಲ್ಲಿ ಭಾಗಿಯಾಗದೇ ಇರುವ ಕಾರಣದಿಂದ ಅನೇಕ ವಿಮರ್ಶೆಗಳು ಚಿರು ಅಭಿಮಾನಿಗಳಿಂದ ಕೇಳಿಬಂದಿತ್ತು. ಇನ್ನೂ ಶ್ರುತಿ ಹಾಸನ್ ಕೆಜಿಎಫ್ ಸಿನೆಮಾ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ರೆಬೆಲ್ ಸ್ಟಾರ್‍ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಲಾರ್‍ ಸಿನೆಮಾದಲ್ಲಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಈ ಸಿನೆಮಾದ ಮೇಲೆ ಶ್ರುತಿ ಹಾಸನ್ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

Most Popular

To Top