ಮದುವೆಗೆ ಇನ್ನು ಕೆಲವೇ ದಿನಗಳು, ಈ ವೇಳೆ ಮೈಂಡ್ ಬ್ಲಾಕ್ ಆಗುವಂತಹ ಬೋಲ್ಡ್ ಲುಕ್ಸ್ ಕೊಟ್ಟ ರಕುಲ್ ಪ್ರೀತ್ ಸಿಂಗ್……!

Follow Us :

ಸ್ಟಾರ್‍ ನಟಿ ಬ್ಯೂಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚಿಗೆ ಗ್ಲಾಮರ್‍ ಡೋಸ್ ದಿನೇ ದಿನೇ ಏರಿಸುತ್ತಲೇ ಇದ್ದಾರೆ. ಬಾಲಿವುಡ್ ಸಿನಿಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟ ಈಕೆ ಗ್ಲಾಮರ್‍ ಡೋಸ್ ಏರಿಸುತ್ತಲೇ ಇದ್ದಾರೆ. ಸ್ಯಾಂಡಲ್ ವುಡ್ ನ ಗಿಲ್ಲಿ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಈಕೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿ ಅನೇಕ ಹಿಟ್ ಸಿನೆಮಾಗಳನ್ನು ಸಹ ನೀಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ರಕುಲ್ ಪ್ರೀತ್ ಮದುವೆ ನಡೆಯಲಿದೆ. ಮದುವೆ ಹತ್ತಿರವಿದ್ದುಕೊಂಡು ಆಕೆ ಮೈಂಡ್ ಬ್ಲಾಕ್ ಆಗುವಂತಹ ಬೋಲ್ಡ್ ಪೋಸ್ ಕೊಟ್ಟಿದ್ದು, ಆಕೆಯ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ.

ನಟಿ ರಕುಲ್ ಪ್ರೀತ್ ಸಿಂಗ್ ಮದುವೆ ಇದೇ ಫೆ.21 ರಂದು ಗೋವಾದಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಫೆ.19 ರಿಂದಲೇ ಮದುವೆ ಸಂಭ್ರಮ ಶುರುವಾಗಲಿದೆ. ದುಬಾರಿ ರೆಸಾರ್ಟ್‌ನಲ್ಲಿ ಈ ರಕುಲ್ ಹಾಗೂ ಬಾಲಿವುಡ್ ನಿರ್ಮಾಪಕಜ ಜಾಕಿ ಭಗ್ನಾನಿ ಮದುವೆ ನಡೆಯಲಿದೆ. ಈ ಜೋಡಿ ಸುಮಾರು ವರ್ಷಗಳಿಂದ ಪ್ರೀತಿಸಿಕೊಳ್ಳುತ್ತಿದ್ದು, ಸೋಷಿಯಲ್ ಮಿಡಿಯಾದಲ್ಲಿ ಕೆಲವು ತಿಂಗಳುಗಳ ಹಿಂದೆಯಷ್ಟೆ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಸುದ್ದಿ ಪ್ರಕಟಿಸಿದ್ದರು. ಇದೀಗ ಗೋವಾದಲ್ಲಿ ಸುಮಾರು 45ಎಕರೆ ಪ್ರದೇಶದಲ್ಲಿ ಐಟಿಸಿ ಗ್ರಾಂಡ್ ಗೋವಾ ರೆಸಾರ್ಟ್ ಬುಕ್ ಮಾಡಿಕೊಂಡಿದ್ದಾರೆ. ಈ ರೆಸಾರ್ಟ್‌ನಲ್ಲಿ ಬರೊಬ್ಬರಿ 240 ಕೋಣೆಗಳಿವೆಯಂತೆ. ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಅನೇಕ ವಿಲಾಸಪೂರಿತವಾದ ಸೌಕರ್ಯಗಳಿವೆ ಎನ್ನಲಾಗಿದೆ. ಇದೇ ರೆಸಾರ್ಟ್‌ನಲ್ಲಿ ರಕುಲ್ ಪ್ರೀತ್ ಮದುವೆ ನೆರವೇರಲಿದೆ ಎನ್ನಲಾಗಿದೆ.

ಇನ್ನೂ ರಕುಲ್ ಪ್ರೀತ್ ಕೆಲವೇ ದಿನಗಳಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಮದುವೆಗೆ ಹೆಚ್ಚು ಸಮಯವಿಲ್ಲದ ಕಾರಣ ಭರದಿಂದ ಮದುವೆ ಕೆಲಸಗಳೂ ಸಹ ನಡೆಯುತ್ತಿವೆ. ಆದರೆ ಈ ಸಮಯದಲ್ಲಿ ರಕುಲ್ ಕೆಲವೊಂದು ಪೊಟೋಗಳನ್ನು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳನ್ನು ನೋಡಿ ಅನೇಕರು ಶಾಕ್ ಆಗಿದ್ದಾರೆ. ಇನ್ನೇನು ಮದುವೆ ಕೆಲವೇ ದಿನಗಳಿದೆ ಅಂತಹುದರಲ್ಲಿ ಈ ರೀತಿಯಲ್ಲಿ ಬೋಲ್ಡ್ ಆಗಿ ಯಾರು ಕಾಣಿಸಿಕೊಳ್ಳುವುದಿಲ್ಲ ಎನ್ನಬಹುದು. ಆದರೆ ರಕುಲ್ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಎಲ್ಲೆ ಎಂಬ ಮ್ಯಾಗ್ ಜೈನ್ ಗಾಗಿ ರಕುಲ್ ಹಾಟ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.