Film News

ಕಿಸ್ ದೃಶ್ಯಗಳಲ್ಲಿ ನಟಿಸಿದರೇ ನನ್ನ ಪತಿಗೆ ಉತ್ತರ ಹೇಳಬೇಕಾಗುತ್ತದೆ, ಕಿಸ್ ಸೀನ್ ಗಳ ಬಗ್ಗೆ ಪ್ರಿಯಮಣಿ ಇಂಟ್ರಸ್ಟಿಂಗ್ ಹೇಳಿಕೆ….!

ಸೌತ್ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಅನೇಕ ಹಿಟ್ ಸಿನೆಮಾಗಳನ್ನು ನೀಡಿದವರಲ್ಲಿ ಪ್ರಿಯಮಣಿ ಸಹ ಒಬ್ಬರಾಗಿದ್ದಾರೆ. ವಿವಾದಗಳ ಸುದ್ದಿಗೆ ಹೋಗದೇ ತುಂಬಾ ಎಚ್ಚರಿಕೆಯಿಂದ ಬಂದಂತಹ ಎಲ್ಲಾ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಾ ಸಾಗಿದ್ದರು. ನಟನೆ, ಡ್ಯಾನ್ಸ್, ಗ್ಲಾಮರ್‍ ಎಲ್ಲವೂ ಪ್ರಿಯಮಣಿಯಲ್ಲಿ ಅಡಗಿವೆ. ಟಾಲಿವುಡ್ ನಲ್ಲಿ ಪ್ರಿಯಮಣಿ ತುಂಬಾ ಹೆಚ್ಚಾಗಿ ಕಮರ್ಷಿಯಲ್ ಸಿನೆಮಾಗಳಲ್ಲಿ ಗ್ಲಾಮರ್‍ ರೋಲ್ ಪ್ಲೇ ಮಾಡಿದ್ದಾರೆ. ಆದರೆ ಮದುವೆ ಬಳಿಕ ಸಿನೆಮಾಗಳಿಗೆ ಬ್ರೇಕ್ ಕೊಟ್ಟ ಪ್ರಿಯಮಣಿ ಕಿರುತೆರೆ ಶೋಗಳ ಜೊತೆಗೆ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.

ನಟಿ ಪ್ರಿಯಮಣಿ 2003 ರಲ್ಲಿ ಎವರೇ ಅತಗಾಡು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಸಾಲು ಸಾಲು ಅವಕಾಶಗಳನ್ನು ಪಡೆದುಕೊಂಡು ಸ್ಟಾರ್‍ ನಟಿಯರ ಸಾಲಿಗೆ ಸೇರಿಕೊಂಡರು. ತೆಲುಗು ಹಾಗೂ ತಮಿಳಿನ ಅನೇಕ ಸಿನೆಮಾಗಳಲಲ್‌ಇ ನಟಿಸಿದ್ದರು. ಆದರೆ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೆ ಆಕೆ ಮುಸ್ತಾಫಾ ಎಂಬಾತನೊಂದಿಗೆ ಅಂತರ್ಜಾತಿ ವಿವಾಹ ಮಾಡಿಕೊಂಡರು. ಮದುವೆಯ ಬಳಿಕ ಸಿನೆಮಾಗಳಿಗೆ ಬ್ರೇಕ್ ಕೊಟ್ಟರು. ಕೆಲವು ವರ್ಷಗಳ ಬಳಿಕ ಆಕೆ ಕಿರುತೆರೆ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದರು. ಬಳಿಕ ಸಿನೆಮಾಗಳಲ್ಲೂ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ಇತ್ತಿಚಿಗಷ್ಟೆ ತೆರೆಕಂಡ ಕಸ್ಟಡಿ ಸಿನೆಮಾದಲ್ಲೂ ಸಹ ಪ್ರಿಯಮಣಿ ಪ್ರಮುಖ ಪಾತ್ರದ ಮೂಲಕ ಅನೇಕರನ್ನು ಮಸ್ಮರೈಜ್ ಮಾಡಿದರು.

ಇತ್ತೀಚಿಗೆ ಪ್ರಿಯಮಣಿ ಸಂದರ್ಶನವೊಂದರಲ್ಲಿ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೆಲವು ವರ್ಷಗಳಿಂದ ನಾನು ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವುದನ್ನು ಬಿಟ್ಟು ಬಿಟ್ಟಿದ್ದೇನೆ. ಅದಕ್ಕೆ ಕಾರಣವನ್ನೂ ಸಹ ಆಕೆ ರಿವೀಲ್ ಮಾಡಿದ್ದಾರೆ. ಮದುವೆಯ ಬಳಿಕ ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸುವುದನ್ನು ಬಿಡಲು ನಿರ್ಧಾರ ಮಾಡಿದ್ದೇನೆ. ಅದು ಪಾತ್ರವಾದರೂ ವೈಯುಕ್ತಿಕವಾಗಿ ನಾನು ಅದರಿಂದ ತುಂಬಾ ಕಿರಿಕಿರಿ ಅನುಭವಿಸುತ್ತೇನೆ. ಅಂತಹ ದೃಶ್ಯಗಳಲ್ಲಿ ನಟಿಸಿದರೇ ನಾನು ನನ್ನ ಪತಿಗೆ ಉತ್ತರ ಹೇಳಬೇಕಾಗುತ್ತದೆ. ನನಗೆ ಮದುವೆಯಾದ ಬಳಿಕ ಅಂತಹ ದೃಶ್ಯಗಳಲ್ಲಿ ನಟಿಸಿಲ್ಲ. ಯಾವುದೇ ಸಿನೆಮಾ ಒಪ್ಪಿಕೊಳ್ಳುವ ಮುಂಚೆಯೇ ಆ ವಿಚಾರವನ್ನು ಹೇಳುತ್ತೇನೆ. ನಾನು ನಟಿಸುವಂತಹ ಸಿನೆಮಾಗಳನ್ನು ನಮ್ಮ ಕುಟುಂಬದವರು ನೋಡುತ್ತಾರೆ. ಅದರಿಂದ ಅವರು ಕಿರಿಕಿರಿ ಅನುಭವಿಸುವುದು ನನಗೆ ಇಷ್ಟವಿಲ್ಲ ಆದ್ದರಿಂದ ಈ ನಿರ್ಣಯ ತೆಗೆದುಕೊಂಡಿದ್ದೇನೆ ಎಂದು ಪ್ರಿಯಮಣಿ ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಪ್ರಿಯಮಣಿ ಕೆಲವು ದಿನಗಳ ಹಿಂದೆಯಷ್ಟೆ ಬಾಡಿಶೇಮಿಂಗ್ ಬಗ್ಗೆ ಸಹ ಕಾಮೆಂಟ್ಸ್ ಮಾಡಿದ್ದರು. ಜೊತೆಗೆ ತಾನು ಮುಸ್ತಾಫಾನನ್ನು ಮದುವೆಯಾದ ಸಮಯದಲ್ಲಿ ಎದರುಸಿದ ವಿಮರ್ಶೆಗಳ  ಬಗ್ಗೆ ಸಹ ಕಾಮೆಂಟ್ಸ್ ಮಾಡಿದ್ದರು. ಇನ್ನೂ ಪ್ರಿಯಮಣಿ ಹಂಚಿಕೊಂಡ ಕಾಮೆಂಟ್ ಗಳು ಸಖತ್ ವೈರಲ್ ಆಗಿದೆ.

Most Popular

To Top