ಮೈನಸ್ 15 ಡಿಗ್ರಿ ಸೆ. ಚಳಿಯಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡ ಪ್ರಗ್ಯಾ ಜೈಸ್ವಾಲ್, ಆಕೆಯ ಸಾಹಸಕ್ಕೆ ಫಿದಾ ಆದ ನೆಟ್ಟಿಗರು….!

Follow Us :

ನಟಿ ಪ್ರಗ್ಯಾ ಜೈಸ್ವಾಲ್ ಅಖಂಡ ಸಿನೆಮಾದ ಬಳಿಕ ಜೋಷ್ ಏರಿಸಿಕೊಂಡಿದ್ದಾರೆ. ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತೆರೆದ ಪುಸ್ತಕದಂತೆ ಸೌಂದರ್ಯ ಪ್ರದರ್ಶನ ಮಾಡುತ್ತಿದ್ದಾರೆ. ತಮಿಳಿನ ವಿರಟ್ಟು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಹೆಚ್ಚು ಹೆಚ್ಚು ಸಿನೆಮಾಗಳಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡರು. ಇದೀಗ ಆಕೆ ನೆವರ್‍ ಬಿಪೋರ್‍ ಅನ್ನೋ ಹಾಗೆ ಬಿಕಿನಿಯಲ್ಲಿ ಹಾಟ್ ಟ್ರೀಟ್ ಕೊಟ್ಟಿದ್ದಾರೆ. ಇದೀಗ ಆಕೆ ಮೈನಸ್ 15 ಡಿಗ್ರಿ ಸೆಲ್ಸಿಯಸ್ ಚಳಿಯಲ್ಲಿ ಬಿಕಿನಿ ಧರಿಸಿ ಐಸ್ ಸ್ವಿಮ್ಮಿಂಗ್ ಮಾಡಿದ್ದಾರೆ. ಆಕೆಯ ಈ ಸಾಹಸಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ನಟಿ ಪ್ರಗ್ಯಾ ಸದ್ಯ ಸಮ್ಮರ್‍ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ತನ್ನ ಕುಟುಂಬದೊಂದಿಗೆ ಫಿನ್ ಲ್ಯಾಂಡ್ ಗೆ ಹೋಗಿದ್ದಾರೆ. ಅಲ್ಲಿನ ಮೈನಸ್ ಡಿಗ್ರಿ ಚಳಿಯಲ್ಲಿ ಆಕೆ ಸಾಹಸ ಮಾಡಿದ್ದಾರೆ. ಬಿಕಿನಿಯಲ್ಲಿ ಐಸ್ ಬಾತ್ ಮಾಡಿದ್ದಾರೆ. ಐಸ್ ಸ್ವಿಮ್ ಮಾಡುವಂತಹ ವಿಡಿಯೋ ಅನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೋಲ್ಡ್ ಬ್ಯೂಟಿಯ ಸಾಹಸಕ್ಕೆ ಫಿದಾ ಆಗಿದ್ದಾರೆ ಜೊತೆಗೆ ಅದೇ ಸಮಯದಲ್ಲಿ ಆಕೆಯ ಹಾಟ್ ಲುಕ್ಸ್ ಗೆ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರೂ ಸಹ ಫಿದಾ ಆಗಿದ್ದಾರೆ. ಇನ್ನೂ ಪ್ರಗ್ಯಾ ಈ ವಿಡಿಯೋ ಜೊತೆಗೆ ಇಂಟ್ರಸ್ಟಿಂಗ್ ಕಾಮೆಂಟ್ ಸಹ ಹಂಚಿಕೊಂಡಿದ್ದಾರೆ. ಅಂತಹ ಚಳಿಯಲ್ಲಿ ಐಸ್ ಸ್ವಿಮ್ಮಿಂಗ್ ಮಾಡುವುದು ಹೇಳಲು ಸಾಧ್ಯವಿಲ್ಲದಂತಹ ಅನುಭವ. ಇದು ಆರೋಗ್ಯದ ದೃಷ್ಟಿಯಿಂದಲೂ ಸಹ ಒಳ್ಳೆಯದು. ಫಿನ್ ಲ್ಯಾಂಡ್ ನಲ್ಲಿ ಐಸ್ ಸ್ವಿಮ್ಮಿಂಗ್ ಮಾಡಿದ್ದು, ತುಂಬಾ ಅದ್ಬುತವಾಗಿದೆ ಎಂದು ಹೇಳಿದ್ದಾರೆ.

ಇನ್ನೂ ಪ್ರಗ್ಯಾ ಜೈಸ್ವಾಲ್ ದೇಹದ ಮೈಮಾಟಕ್ಕೆ ಅಭಿಮಾನಿಗಳು ಸೇರಿದಂತೆ ನೆಟ್ಟಿಗರೂ ಸಹ ಫಿದಾ ಆಗಿದ್ದಾರೆ. ಬಿಕಿನಿ ಸೌಂದರ್ಯಕ್ಕೆ ಫಿದಾ ಆದ ಅಭಿಮಾನಿಗಳು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಪ್ರಗ್ಯಾ ಕೆರಿಯರ್‍ ಅಷ್ಟೊಂದು ಚೆನ್ನಾಗಿಲ್ಲ ಎಂದೇ ಹೇಳಬಹುದಾಗಿದೆ. ಅಖಂಡ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡ ಪ್ರಗ್ಯಾಳ ಬಳಿಕ ತೆರೆಕಂಡ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಸದ್ಯ ಪ್ರಗ್ಯಾ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಂಡು ಸುಮಾರು ಒಂದು ವರ್ಷ ಮೇಲಾಗಿದೆ. ಆಕೆಗೆ ಯಾವುದೇ ಅವಕಾಶಗಳೂ ಸಹ ಇಲ್ಲ ಎಂದೇ ಹೇಳಲಾಗುತ್ತಿದೆ. ಸೌಂದರ್ಯದ ಜೊತೆಗೆ ಅಭಿನಯ ಇದ್ದರೂ ಸಹ ಆಕೆಗೆ ಅವಕಾಶಗಳು ಮಾತ್ರ ಬರುತ್ತಿಲ್ಲ. ಇನ್ನೂ ಮುಂದೆಯಾದರೂ ಆಕೆ ಅವಕಾಶಗಳನ್ನು ಪಡೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಪ್ರಗ್ಯಾ ಜೈಸ್ವಾಲ್ ವರುಣ್ ತೇಜ್ ಜೊತೆಗೆ ಕಂಚೆ ಎಂಬ ಸಿನೆಮಾದ ಮೂಲಕ ಸಕ್ಸಸ್ ಕಂಡರು. ಬಳಿಕ ಆಕೆಯ ಸಿನೆಮಾಗಳು ಸಕ್ಸಸ್ ಕಾಣಲಿಲ್ಲ. ಕೆರಿಯರ್‍ ಫೇಡ್ ಔಟ್ ಆಗುವಂತಹ ಸಮಯದಲ್ಲಿ ಆಕೆಗೆ ಅಖಂಡ ಸಿನೆಮಾ ಬಿಗ್ ಬ್ರೇಕ್ ನೀಡಿತ್ತು. ಆದರೆ ಈ ಸಿನೆಮಾದ ಸಕ್ಸಸ್ ಕ್ರೆಡಿಟ್ ಸಂಪೂರ್ಣವಾಗಿ ಬಾಲಕೃಷ್ಣ ಪಾಲಾಯಿತು ಎನ್ನಲಾಗಿದೆ. ಇನ್ನೂ ಆಕೆ ಸಿನೆಮಾಗಳಲ್ಲಿನ ಅವಕಾಶಗಳಿಗಾಗಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ನಿರ್ಮಾಪಕ ಹಾಗೂ ನಿರ್ದೇಶಕರ ಗಮನ ಸೆಳೆಯುವ ಪ್ರಯತ್ನಗಳನ್ನು ಸಹ ಮಾಡುತ್ತಿದ್ದಾರೆ  ಎನ್ನಲಾಗುತ್ತಿದೆ.