ದುಬೈನಲ್ಲಿ ಜಗಳ ಮಾಡಿಕೊಂಡಿದ್ದ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ, ಅಷಕ್ಕೂ ಆಗಿದ್ದಾದರೂ ಏನು?

Follow Us :

ಸೌತ್ ಸಿನಿರಂಗದಲ್ಲಿ ಬುಟ್ಟಬೊಮ್ಮ ಎಂದೇ ಕ್ರೇಜ್ ಪಡೆದುಕೊಂಡಿರುವ ಪೂಜಾ ಹೆಗ್ಡೆ ಸೌತ್ ಅಂಡ್ ನಾರ್ತ್‌ನಲ್ಲೂ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಗ್ಲಾಮರ್‍ ಜೊತೆಗೆ ಅದೃಷ್ಟ ಸಹ ಆಕೆಗಿರುವ ಕಾರಣದಿಂದ ಆಕೆಯ ಖಾತೆಯಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳು ಸೇರಿಕೊಂಡವು. ಕಳೆದ ವರ್ಷ ಆಕೆಗೆ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡರೂ ಸಹ ಆಕೆಗೆ ಅವಕಾಶಗಳು ಮಾತ್ರ ಕಡಿಮೆಯಾಗಲಿಲ್ಲ. ಇದೀಗ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ ಎದುರಾಗಿದೆ ಎನ್ನಲಾಗಿದ್ದು, ಅಷ್ಟಕ್ಕೂ ದುಬೈನಲ್ಲಿ ಜಗಳ ಆಗಿದ್ದಾದರೂ ಏಕೆ, ಅದರಲ್ಲಿ ಸತ್ಯಾಂಶವಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಸ್ಟಾರ್‍ ನಟಿ ಪೂಜಾ ಹೆಗ್ಡೆ ಭಾರತದಲ್ಲಿ ಮಾತ್ರವಲ್ಲದೇ ಬೇರೆ ದೇಶಗಳಲ್ಲೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಭಾರತದ ಸಿನೆಮಾಗಳು ದುಬೈನಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತವೆ. ಈ ಕಾರಣದಿಂದ ಭಾರತದ ಅನೇಕ ಸೆಲೆಬ್ರೆಟಿಗಳು ದುಬೈನಲ್ಲಿ ನಡೆಯುವಂತಹ ಕೆಲವೊಂದು ಕಾರ್ಯಕ್ರಮಗಳಿಗೆ ಹಾಜರಾಗುತ್ತಿರುತ್ತಾರೆ.  ಕೆಲವು ದಿನಗಳ ಹಿಂದೆಯಷ್ಟೆ ಕ್ಲಬ್ ವೊಂದರ ಉದ್ಘಾಟನೆಯ ಸಲುವಾಗಿ ಪೂಜಾ ಹೆಗ್ಡೆ ದುಬೈಗೆ ಹೋಗಿದ್ದರು.  ಕ್ಲಬ್ ಉದ್ಘಾಟನೆಯ ಸಮಯದಲ್ಲಿ ಪೂಜಾ ಜಗಳ ಮಾಡಿಕೊಂಡಿದ್ದಾರೆ ಜಗಳವಾದ ಬಳಿಕ ಆಕೆಗೆ ಜೀವ ಬೆದರಿಕೆ ಬಂದಿದೆ ಎಂಬ ಸುದ್ದಿ ಜೋರಾಗಿ ಕೇಳಿಬಂದಿತ್ತು. ಈ ಸುದ್ದಿ ಕೇಳಿದ ಅಭಿಮಾನಿಗಳು ಆಂತಕಕ್ಕೆ ಗುರಿಯಾಗಿದ್ದರು. ಅನೇಕರು ಕೂಡಲೇ ನೀವು ಭಾರತಕ್ಕೆ ವಾಪಸ್ ಬನ್ನಿ ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ.

ಆದರೆ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎನ್ನಲಾಗಿದ್ದು, ಸುಳ್ಳು ಸುದ್ದಿ ಎಂದು ಬಹಿರಂಗವಾಗಿದೆ. ಯಾರೋ ನೆಟ್ಟಿಗನೋರ್ವ ಸೋಷಿಯಲ್ ಮಿಡಿಯಾದಲ್ಲಿ ಸುಳ್ಳು ಸುದ್ದಿಯೊಂದನ್ನು ಹರಿಬಿಟ್ಟಿದ್ದಾರೆ. ಈ ಸುದ್ದಿ ಬಹಿರಂಗವಾದ ಬಳಿಕ ಅಭಿಮಾನಿಗಳು ನಿಟ್ಟಿಸುರು ಬಿಟ್ಟಿದ್ದಾರೆ. ಪೂಜಾ ಆಪ್ತ ವಲಯದಿಂದ ಇದೊಂದು ಸುಳ್ಳು ಸುದ್ದಿಯಾಗಿದ್ದು, ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನೂ ನಟಿ ಪೂಜಾ ಹೆಗ್ಡೆ ಗೆ ಕಳೆದ ವರ್ಷ ಭಾರಿ ನಿರಾಸೆ ತಂದುಕೊಟ್ಟಿತ್ತು. ಆಕೆ ಅಭಿನಯದ ಎಲ್ಲಾ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಗುಂಟೂರು ಖಾರಂ ಸಿನೆಮಾದಿಂದಲೂ ಆಕೆ ಹೊರಬಂದರು. ಸದ್ಯ ಆಕೆ ಕೆಲವೊಂದು ಸಿನೆಮಾಗಳು ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ತೆರೆಕಾಣಲಿದೆ.