Film News

ಬುಟ್ಟಬೊಮ್ಮ ಪೂಜಾ ಹೆಗ್ಡೆ ಎರಡೂ ಮೊಣಕಾಲಿಗೆ ಪೆಟ್ಟು, ಕಂಗಾಲಾದ ಫ್ಯಾನ್ಸ್…….!

ಸಿನಿರಂಗದಲ್ಲಿ ಸಾಲು ಸಾಲು ಸಿನೆಮಾಗಳಲ್ಲಿ ಸೋಲು ಕಂಡರೂ ಸಹ ಬೇಡಿಕೆಯುಳ್ಳ ನಟಿಯರಲ್ಲಿ ಮೊದಲ ಸ್ಥಾನ ಸ್ಟಾರ್‍ ನಟಿ ಪೂಜಾ ಹೆಗ್ಡೆಗೆ ಸಲ್ಲುತ್ತದೆ. ಬುಟ್ಟಬೊಮ್ಮ ಎಂದೇ ಕರೆಯಲಾಗುವ ಪೂಜಾ ಹೆಗ್ಡೆ ಮಾತ್ರ ಹ್ಯಾಟ್ರಿಕ್ ಸೋಲುಗಳನ್ನು ಕಂಡರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಸಿನೆಮಾಗಳಿಲ್ಲದೇ ಇದ್ದರೂ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಪೂಜಾ ಹೆಗ್ಡೆ ಹಂಚಿಕೊಂಡ ಪೊಟೋದಲ್ಲಿ ಆಕೆಯ ಎರಡೂ ಮೊಣಕಾಲಿಗೆ ಗಾಯವಾಗಿದ್ದು, ಆಕೆಗೆ ಏನಾಗಿದೆ ಎಂದು ಅಭಿಮಾನಿಗಳು ಕಂಗಾಲಾಗಿದ್ದಾರೆ ಎಂದು ಹೇಳಲಾಗಿದೆ.

ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಅತೀ ಕಡಿಮೆ ಸಮಯದಲ್ಲೇ ಸೌತ್ ಇಂಡಿಯಾದಲ್ಲಿ ಸ್ಟಾರ್‍ ಡಂ ಗಿಟ್ಟಿಸಿಕೊಂಡ ನಟಿ ಪೂಜಾ ಹೆಗ್ಡೆ ಒಕ ಲೈಲಾ ಕೋಸಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ಭಾರಿ ಹಿಟ್ ಪಡೆದುಕೊಂಡ ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಪಡೆದುಕೊಂಡರು. ಬಾಲಿವುಡ್ ನಲ್ಲೂ ಸಹ ಹೃತಿಕ್ ರೋಷನ್ ಜೊತೆಗೆ ಮೊಹೆಂಜೋದಾರೋ ಎಂಬ ಸಿನೆಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಈ ಸಿನೆಮಾ ಪ್ಲಾಫ್ ಪಡೆದುಕೊಂಡ ಬಳಿಕ ಆಕೆ ಕೆಲವು ವರ್ಷಗಳ ಕಾಲ ಸಿನೆಮಾಗಳಿಂದ ದೂರವಿದ್ದರು. ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ಜೊತೆಗೆ ದುವ್ವಾಡ ಜಗನ್ನಾಥಮ್ ಸಿನೆಮಾದ ಮೂಲಕ ರೀ ಎಂಟ್ರಿ ಕೊಟ್ಟು ಅಲ್ಲಿಂದ ಆಕೆಯ ಸಕ್ಸಸ್ ಗ್ರಾಫ್ ಮತ್ತೆ ಏರಿತ್ತು. ಆದರೆ ಕಳೆದ ವರ್ಷ ಆಕೆಗೆ ಬ್ಯಾಕ್ ಟು ಬ್ಯಾಕ್ ಸೋಲುಗಳೂ ಸಹ ಕಂಡವು.

ಇನ್ನೂ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡರೂ ಸಹ ಪೂಜಾ ಹೆಗ್ಡೆ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಎನ್ನಬಹುದಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಆಕ್ಟಿವ್ ಆಗಿದ್ದು, ಆಕೆ ಸಾಲು ಸಾಲು ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಆಕೆ ಫಿಟ್ ನೆಸ್ ಗಾಗಿ ವರ್ಕೌಟ್ಸ್ ಮಾಡುತ್ತಿರುತ್ತಾರೆ. ವರ್ಕೌಟ್ಸ್ ಗೆ ಸಂಬಂಧಿಸಿದಂತಹ ಪೊಟೋಗಳು ಹಾಗೂ ವಿಡಿಯೋಗಳನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆಕೆಗೆ ಏನಾಗಿದೆ ಎಂದು ಕಂಗಾಲಾಗಿದ್ದಾರೆ. ಪೂಜಾ ಹೆಗ್ಡೆ ತನ್ನ ಎರಡೂ ಮೊಣಕಾಲಿಗೆ ಗಾಯವಾಗಿರುವ ಪೊಟೋ ಹಂಚಿಕೊಂಡಿದ್ದು. ಆಕೆಯ ಇನ್ಸ್ಟಾ ಸ್ಟೋರಿ ಸಖತ್ ವೈರಲ್ ಆಗಿದೆ.

ಇತ್ತೀಗಷ್ಟೆ ಪೂಜಾ ಹೆಗ್ಡೆ ಜಿಮ್ ನಲ್ಲಿ ಬಾಕ್ಸಿಂಗ್ ಮಾಡಿದ್ದರಂತೆ. ಈ ಬಾಕ್ಸಿಂಗ್ ನಲ್ಲಿ ತನ್ನ ಜಿಮ್ ಮೇಟ್ ಹೆಚ್ಚು ಒತ್ತಡದಿಂದ ಬಾಕ್ಸಿಂಗ್ ಮಾಡಿದ್ದರಿಂದ ಆಕೆಯ ಮೊಣಕಾಲಿಗೆ ಚೆನ್ನಾಗಿ ಗಾಯವಾಗಿದೆಯಂತೆ. ಈ ಪೊಟೋವನ್ನು ಆಕೆ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ. ಇನ್ನೂ ಕೆಲವೊಂದು ಕಾರಣಗಳಿಂದ ಮಹೇಶ್ ಬಾಬು ರವರ ಗುಂಟೂರು ಖಾರಂ ಸಿನೆಮಾದಿಂದಲೂ ಹೊರಬಂದಿದ್ದಾರೆ. ಶೀಘ್ರದಲ್ಲೇ ಆಕೆಯ ಹೊಸ ಸಿನೆಮಾ ಅಪ್ಡೇಟ್ ಗಳ ಬಗ್ಗೆ ಮಾಹಿತಿ ಸಿಗಲಿದೆ ಎಂದು ಹೇಳಲಾಗುತ್ತಿದೆ.

Most Popular

To Top