Film News

ನಿಂಗೆ ಗಂಟೆಗೆ ಐದು ಸಾವಿರ ಕೊಡ್ತಾರೆ ಅಲ್ವಾ ಎಂದ ನೆಟ್ಟಿಗ, ಸರಿಯಾಗಿ ಕೌಂಟರ್ ಕೊಟ್ಟ ನಟಿ ಕಸ್ತೂರಿ…..!

ಒಂದು ಕಾಲದಲ್ಲಿ ಸ್ಟಾರ್‍ ನಟಿಯಾಗಿ ಸದ್ದು ಮಾಡಿದ ನಟಿ ಕಸ್ತೂರಿ ಗೃಹಲಕ್ಷ್ಮಿ ಎಂಬ ತೆಲುಗು ಸೀರಿಯಲ್ ಮೂಲಕ ದೊಡ್ಡ ಅಭಿಮಾನಿ ಬಳಗ ಸಾಧಿಸಿಕೊಂಡಿದ್ದಾರೆ. ಆಕೆಯನ್ನು ಕಸ್ತೂರಿ ಇಂಡಸ್ಟ್ರಿಯಲ್ಲಿ ಫೈರ್‍ ಬ್ರಾಂಡ್ ಎಂದು ಹೇಳಲಾಗುತ್ತದೆ. ಯಾವುದೇ ವಿಚಾರವಿದ್ದರೂ ಸಹ ಆಕೆ ನೇರವಾಗಿಯೇ ತಮ್ಮ ಅಭಿಪ್ರಾಯವನ್ನು ಹೇಳಿಬಿಡುತ್ತಾರೆ. ಬಿಗ್ ಬಾಸ್ ನಲ್ಲೂ ಸಹ ಆಕೆ ಕಾಣಿಸಿಕೊಂಡಿದ್ದರು. ಇದೀಗ ಆಕೆ ಬಿಗ್ ಬಾಸ್ ಶೋ ಬಗ್ಗೆ ಟ್ವೀಟ್ ಮಾಡಿದ್ದು ಆ ಟ್ವೀಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

 

ನಟಿ ಕಸ್ತೂರಿ ಕೆರಿಯರ್‍ ನಲ್ಲಿ ಬ್ಯುಸಿಯಾಗಿದ್ದರೂ ಸಹ ಬಿಡುವು ಸಿಕ್ಕಾಗ ಸೋಷಿಯಲ್ ಮಿಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಪ್ಯಾನ್ ಇಂಡಿಯಾ ಸಿನೆಮಾ ಆದಿಪುರುಷ್ ಸಿನೆಮಾದಲ್ಲಿ ಪ್ರಭಾಸ್ ಬಗ್ಗೆ ಕಾಮೆಂಟ್ ಮಾಡಿ ಪ್ರಭಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡಲಾಗಿತ್ತು. ಇದೀಗ ತಮಿಳಿನಲ್ಲಿ ಆರಂಭವಾದ ಬಿಗ್ ಶೋ ಬಗ್ಗೆ ಮಾತನಾಡಿದ್ದಾರೆ.  ಈ ಶೋ ಬಗ್ಗೆ ನೆಟ್ಟಿಗರು ಕಸ್ತೂರಿ ರವರ ಬಳಿ ಅಭಿಪ್ರಾಯ ಕೇಳಿದ್ದಾರೆ. ಅದಕ್ಕೆ ಸೋಷಿಯಲ್ ಮಿಡಿಯಾದಲ್ಲಿ ಕಸ್ತೂರಿ ರಿಯಾಕ್ಷನ್ ಕೊಟ್ಟಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಬಿಗ್ ಬಾಸ್ ಶೋ ಬಗ್ಗೆ ಮಾತನಾಡಿದ ಕಸ್ತೂರಿ, ಒಂದು ಮನೆಯಲ್ಲಿ ತುಂಬಾ ಮಂದಿಯನ್ನು ಇಟ್ಟು ಆರ್ಟಿಫಿಷಿಯಲ್ ಆಗಿ ಫೀಲೀಂಗ್ಸ್ ತೋರುವಂತಹ ಶೋ ಬಗ್ಗೆ ನಾನು ತಲೆಗೆಡಿಸಿಕೊಳ್ಳುವುದಿಲ್ಲ. ನನ್ನ ಬಳಿ ಟಿವಿ ಇಲ್ಲ, ನನಗಷ್ಟು ಸಮಯ, ತಾಳ್ಮೆ, ಇಂಟ್ರಸ್ಟ್ ಸಹ ಇಲ್ಲ. ನನಗೆ ಕುಟುಂಬ, ಜವಾಬ್ದಾರಿ, ಕೆಲಸ ತುಂಬಾನೆ ಇದೆ. ನಾನು ಬಿಗ್ ಬಾಸ್ ನೋಡುತ್ತಿಲ್ಲ ಎಂದು ಆಕೆ ಟ್ವೀಟ್ ಮಾಡಿದ್ದಾರೆ. ಇನ್ನೂ ಈ ಟ್ವೀಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನೀವು ಆ ರೀತಿಯಲ್ಲಿ ಕಾಮೆಂಟ್ ಮಾಡುವುದು ಸರಿಯಲ್ಲ. ಆಗ ಹಣಕ್ಕಾಗಿ ಕಾರ್ಯಕ್ರಮಕ್ಕೆ ಹೋಗಿದ್ರಾ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಅದರಲ್ಲೂ ಓರ್ವ ನೆಟ್ಟಿಗ ಮಿತಿ ಮೀರಿ ಕಾಮೆಂಟ್ಸ್ ಮಾಡಿದ್ದಾನೆ. ಹೌದು ನಿನಗೆ ಗಂಟೆಗೆ ಐದು ಸಾವಿರ ಬರುತ್ತೆ ಅಲ್ವಾ ಎಂದು ವಲ್ಗರ್‍ ಆಗಿ ಅರ್ಥ ಬರುವ ಮಾದರಿಯಲ್ಲಿ ಕಾಮೆಂಟ್ ಮಾಡಿದ್ದಾನೆ. ಅದಕ್ಕೆ ಫೈರ್‍ ಆದ ಕಸ್ತೂರಿ ನಿಮ್ಮ ಮನೆಯವರು ನಿನ್ನು ಅದೇ ರೀತಿಯಾಗಿ ಬೆಳೆಸಿದ್ದಾರಯೇ, ನಿನ್ನ ನೋಡುತ್ತಿದ್ದರೇ ನನಗೆ ತುಂಬಾ ನಾಚಿಕೆಯಾಗುತ್ತಿದೆ ಎಂದು ಸ್ಟ್ರಾಂಗ್ ಕೌಂಟರ್‍ ಕೊಟ್ಟಿದ್ದಾರೆ. ಈ ಟ್ವೀಟ್ಸ್ ಇದೀಗ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Most Popular

To Top