ಮತ್ತೆ ಟ್ರೋಲ್ ಆದ ಮಂಚು ಲಕ್ಷ್ಮೀ, ಆ ಬಾಯಿಯನ್ನು ಮುಚ್ಚಿಕೊಳ್ಳಮ್ಮ ತಾಯಿ ನೋಡೋಕೆ ಅಗ್ತಾ ಇಲ್ಲ ಎಂದು ಟ್ರೋಲ್…..!

Follow Us :

ತೆಲುಗು ಸಿನಿರಂಗದ ದೊಡ್ಡ ಕುಟುಂಬಗಳಲ್ಲಿ ಒಂದಾದ ಮಂಚು ಕುಟುಂಬದ ಬಗ್ಗೆ ಅತೀ ಹೆಚ್ಚು ಟ್ರೋಲ್ ಗಳಾಗುತ್ತಿರುತ್ತವೆ. ಅದರಲ್ಲೂ ಮೋಹನ್ ಬಾಬು ರವರ ಸಂತಾನವಾದ ವಿಷ್ಣು, ಲಕ್ಷ್ಮೀ ಬಗ್ಗೆ ಮಾತ್ರ ತುಂಬಾನೆ ಟ್ರೋಲ್ ಗಳು ಬರುತ್ತಿರುತ್ತವೆ. ಟ್ರೋಲರ್‍ ಗಳ ಬಗ್ಗೆ ಅವರು ಅನೇಕ ಬಾರಿ ಕಠಿಣವಾಗಿ ಎಚ್ಚರಿಕೆಗಳನ್ನು ಕೊಟ್ಟರೂ ಸಹ ಟ್ರೋಲರ್‍ ಗಳು ಮಾತ್ರ ಟ್ರೋಲ್ ಮಾಡುವುದು ಬಿಟ್ಟಿಲ್ಲ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳ ಕಾರಣದಿಂದ ಮತ್ತೆ ಭಾರಿ ಟ್ರೋಲ್ ಮಾಡುತ್ತಿದ್ದಾರೆ.

ನಟಿ ಮಂಚು ಲಕ್ಷ್ಮೀ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಒಂದಲ್ಲ ಒಂದು ರೀತಿಯ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಾಗುತ್ತಿರುತ್ತಾರೆ. ಮಂಚು ಕುಟುಂಬದ ಲಕ್ಷ್ಮೀ ಏನೆ ಮಾಡಿದರೂ ಸಹ ವಿಭಿನ್ನವಾಗಿಯೇ ಮಾಡುತ್ತಾರೆ. ಅಮೇರಿಕಾದಲ್ಲಿ ಕೆಲವೊಂದು ಶೋಗಳ ಮೂಲಕ ಹಾಗೂ ಕೆಲವೊಂದು ಸಿರೀಸ್ ಗಳಲ್ಲೂ ಸಹ ನಟಿಸಿದ್ದಾರೆ. ಇನ್ನೂ ನಟಿಯಾಗಿ ಕ್ರೇಜ್ ಸಂಪಾದಿಸಿಕೊಳ್ಳಲು ತುಂಬಾನೆ ಪ್ರಯತ್ನ ಮಾಡುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಟಾಕ್ ಶೋಗಳನ್ನು ಸಹ ಪರಿಚಯಿಸಿದರು. ಈ ಟಾಕ್ ಶೋ ಟ್ರೆಂಡ್ ಕ್ರಿಯೇಟ್ ಮಾಡಿದ್ದು ಮಂಚು ಲಕ್ಷ್ಮೀ ಯವರೇ ಎಂದರೇ ತಪ್ಪಾಗಲಾರದು. ಇನ್ನೂ ಆಕೆಯನ್ನು ಟ್ರೋಲ್ ಮಾಡಿಕೊಂಡೇ ಕೆಲವೊಂದು ಯೂಟ್ಯೂಬ್ ಹಾಗೂ ಸೋಷಿಯಲ್ ಮಿಡಿಯಾ ಪೇಜ್ ಗಳು ಬದುಕುತ್ತಿವೆ ಎಂದರೇ ತಪ್ಪಾಗಲಾರದು. ಆಕೆ ಭಾಷೆಯನ್ನು ಹೆಚ್ಚಾಗಿ ಟ್ರೋಲ್ ಮಾಡುತ್ತಿರುತ್ತಾರೆ.

ಇನ್ನೂ ಮಂಚು ಲಕ್ಷ್ಮೀ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದರು. ಈ ಪೊಟೋಗಳು ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗಿದೆ. ಮಾಡ್ರನ್ ಲುಕ್ಸ್ ನಲ್ಲಿ ಆಕೆ ಟಾಪ್ ಸೌಂದರ್ಯದ ಮೂಲಕ ಗ್ಲಾಮರಸ್ ಲುಕ್ಸ್ ಕೊಟ್ಟಿದ್ದಾರೆ. ಕೋಟ್ ತೆಗೆದು ಎದೆಯ ಸೌಂದರ್ಯವನ್ನು ಶೋ ಮಾಡಿದ್ದಾರೆ. ಈ ಪೊಟೋಗಳು ವೈರಲ್ ಆಗುತ್ತಿರುವ ಜೊತೆಗೆ ಟ್ರೋಲ್ ಸಹ ಆಗುತ್ತಿವೆ. ಈ ಪೊಟೋಗಳಲ್ಲಿ ಆಕೆ ತನ್ನ ಬಾಯಿ ತೆರೆದು ಕಾಣಿಸಿಕೊಂಡಿದ್ದು, ಇದರ ಬಗ್ಗೆ ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ನೋಡೊಕೆ ಮಾಡಲ್ ತರ ಇದ್ದೀರಾ, ಆ ರೀತಿಯಲ್ಲಿ ಬಾಯಿ ತೆಗೆದಿರುವುದು ತುಂಬಾ ಕೆಟ್ಟದಾಗಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಇನ್ನೂ ಮಂಚು ಲಕ್ಷ್ಮೀಗೆ ಈ ರೀತಿಯ ಟ್ರೋಲ್ ಗಳು ಹೊಸತೇನಲ್ಲ. ಸದಾ ಆಕೆಯನ್ನು ಟ್ರೋಲ್ ಮಾಡುತ್ತಲೇ ಇರುತ್ತಾರೆ. ನೆಗೆಟಿವಿಟಿ, ಟ್ರೋಲ್ ಗಳನ್ನು ಆಕೆ ಕಿವಿಗೆ ಹಾಕಿಕೊಳ್ಳುವುದಿಲ್ಲ. ಮೈ ಲೈಫ್ ಮೈ ರೂಲ್ಸ್ ಎಂಬಂತೆ ಆಕೆ ಬದುಕುತ್ತಿರುತ್ತಾರೆ. ಸದ್ಯ ಆಕೆ ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಮುಂಬೈನಲ್ಲೇ ಉಳಿದುಕೊಂಡು ಅಲ್ಲಿನ ಪಾರ್ಟಿಗಳಲ್ಲೂ ಸಹ ಸಖತ್ ಸದ್ದು ಮಾಡುತ್ತಿರುತ್ತಾರೆ. ಜೊತೆಗೆ ಮತಷ್ಟು ಹಾಟ್ ಆಗಿ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಸದ್ದು ಮಾಡುತ್ತಿರುತ್ತಾರೆ.