ಅಭಿಮಾನಿಗಳೊಂದಿಗೆ ಚಿಟ್ ಚಾಟ್ ನಡೆಸಿದ ನಿಹಾರಿಕಾ, ರೊಮ್ಯಾನ್ಸ್, ಮರ್ಡರ್ ಅಂದರೇ ಇಷ್ಟ ಎಂದ ನಟಿ…..!

Follow Us :

ಟಾಲಿವುಡ್ ಸಿನಿರಂಗದ ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊಣಿದೆಲಾ ಇತ್ತೀಚಿಗೆ ಸಿನೆಮಾಗಳಿಗಿಂತ ವೈಯುಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಸುದ್ದಿಯಾದರು. ಎರಡು ವರ್ಷಗಳ ಹಿಂದೆಯಷ್ಟೆ ರಾಜಸ್ಥಾನದ ಜೈಪುರದಲ್ಲಿ ಅದ್ದೂರಿಯಾಗಿ ಮದುವೆಯಾದ ನಿಹಾರಿಕಾ ವಿಚ್ಚೇದನ ಪಡೆದುಕೊಂಡರು. ಚೈತನ್ಯ ಜೊನ್ನಲಗಡ್ಡ ಜೊತೆಗೆ ಮದುವೆಯಾಗಿ ಎರಡು ವರ್ಷಗಳಲ್ಲೆ ಆಕೆ ವಿಚ್ಚೇದನ ಪಡೆದುಕೊಂಡರು. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಚೇದನ ಪಡೆದುಕೊಂಡಿದ್ದಾಗಿ ನಿಹಾರಿಕಾ ತನ್ನ ಇನ್ಸ್ಟಾ ಖಾತೆಯ ಮೂಲಕ ತಿಳಿಸಿದ್ದರು.

ಸದ್ಯ ನಿಹಾರಿಕಾ ಸಿನೆಮಾಗಳ ಮೇಲೆ ಪೋಕಸ್ ಇಟ್ಟಿದ್ದಾರೆ ಎನ್ನಲಾಗಿದೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾಋಎ. ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ಅಭಿಮಾನದ ನಟ-ನಟಿಯರ ಬಗ್ಗೆ ತಿಳಿದುಕೊಳ್ಳಲು ಪತ್ರಿಕೆ ಸಂದರ್ಶನ, ಟಿವಿ ಸಂದರ್ಶನಗಳನ್ನು ಫಾಲೋ ಆಗುತ್ತಿದ್ದರು. ಇದೀಗ ಸೋಷಿಯಲ್ ಮಿಡಿಯಾ ಬಂದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಜೊತೆಗೆ ಸೆಲೆಬ್ರೆಟಿಗಳೇ ತಮ್ಮ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ನಡೆಸುತ್ತಿರುತ್ತಾರೆ. ಇದೀಗ ನಿಹಾರಿಕಾ ಸಹ ತಮ್ಮ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ನಡೆಸುತ್ತಿದ್ದಾರೆ. ಈ ವೇಳೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹೊರಹಾಕಿದ್ದಾರೆ.

ಈ ವೇಳೆ ನಿಹಾರಿಕಾ ಗೆ ಎದುರಾದ ಕೆಲವೊಂದು ಪ್ರಶ್ನೆಗಳಿಗೆ ಆಕೆ ಉತ್ತರಿಸಿದ್ದಾರೆ.  ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಸಹ ಹೊರಹಾಕಿದ್ದಾರೆ. ಈ ಹಾದಿಯಲ್ಲೇ ಓರ್ವ ಅಭಿಮಾನಿ ನೀವು ಹೆಚ್ಚಾಗಿ ವೆಬ್ ಸಿರೀಸ್ ಗಳನ್ನು ನೋಡುತ್ತೀರಾ ಎಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಉತ್ತರಿಸಿದ ನಿಹಾರಿಕಾ ದಿಸ್ ಈಜ್ ಅಜ್, ಡೆಕ್ಸೇಟರ್‍ ಸಿರೀಸ್ ಗಳು ತುಂಬಾ ಇಷ್ಟ ಎಂದು ಹೇಳಿದ್ದಾರೆ. ಮತ್ತೊಬ್ಬರು ನಿಮಗೆ ಯಾವ ರೀತಿಯ ವೆಬ್ ಸಿರೀಸ್ ಗಳು ಇಷ್ಟ, ಯಾವ ಸಿರೀಸ್ ಹೆಚ್ಚಾಗಿ ನೋಡುತ್ತಿರಾ ಎಂಬ ಪ್ರಶ್ನೆಗೆ ರೊಮ್ಯಾನ್ಸ್, ಮರ್ಡರ್‍, ಮಿಸ್ಟರಿ ಡ್ರಾಮಾ ನಂತಹ ಸಿರೀಸ್ ಗಳು ಹೆಚ್ಚಾಗಿ ನೋಡುತ್ತಿರುತ್ತೇವೆ. ಅಂತಹ ಕಂಟೆಟ್ ಇರುವ ಸಿರೀಸ್ ಗಳು ನನಗೆ ತುಂಬಾನೆ ಇಷ್ಟ ಎಂದು ನಿಹಾರಿಕಾ ಹೇಳಿದ್ದಾರೆ.

ಜೊತೆಗೆ ಮತ್ತೊರ್ವ ಅಭಿಮಾನಿ ನಿಮಗೆ ಇಷ್ಟವಾದ ಪ್ರದೇಶ ಯಾವುದು ಎಂದು ಕೇಳಿದರೇ, ಇಂಡೋನೇಷಿಯಾದ ಬಾಆಲಿ ಎಂದು ಉತ್ತರಿಸಿದ್ದಾರೆ. ಹೀಗೆ ಅನೇಕ ಪ್ರಶ್ನೆಗಳಿಗೆ ನಿಹಾರಿಕಾ ಉತ್ತರ ನೀಡಿದ್ದಾರೆ. ಇನ್ನೂ ಆಕೆ ಕೊನೆಯದಾಗಿ ಡೆಡ್ ಪಿಕ್ಸೆಲ್ಸ್ ಎಂಬ ವೆಬ್ ಸಿರೀಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಶೀಘ್ರದಲ್ಲೇ ಮತ್ತೊಂದು ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.