ಸುಮಾರು ವರ್ಷಗಳ ಹಿಂದೆ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದಲ್ಲಿ ತುಂಬಾನೆ ಕ್ರೇಜ್ ಹೊಂದಿರುವ ನಟಿಯರಲ್ಲಿ ಅಮಿಷಾ ಪಟೇಲ್ ಸಹ ಒಬ್ಬರಾಗಿದ್ದಾರೆ. ನಟಿ ಅಮಿಷಾ ಪಟೇಲ್ ಕಹೋನಾ ಪ್ಯಾರ್ ಹೈ ಎಂಬ ಹಿಂದಿ ಸಿನೆಮಾದ ಮೂಲಕ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ದೊಡ್ಡ ಮಟ್ಟದ ಕ್ರೇಜ್ ಸಂಪಾದಿಸಿಕೊಂಡ ಈ ಬ್ಯೂಟಿ ಬಳಿಕ ಕೂಡಲೇ ತೆಲುಗು ಸಿನೆಮಾದಲ್ಲಿ ಕಾಣಿಸಿಕೊಂಡರು. ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆಗೆ ಬದ್ರಿ ಸಿನೆಮಾದಲ್ಲಿ ಕಾಣಿಸಿಕೊಂಡರು. ಇದೀಗ ತಮ್ಮ ಕೆರಿಯರ್ ನಾಶವಾಗಲು ಆತನ ಜೊತೆಗೆ ಡೇಟಿಂಗ್ ಮಾಡಿದ್ದೇ ಕಾರಣ ಎಂದು ಅಮಿಷಾ ಪಟೇಲ್ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.
ನಟಿ ಅಮೀಷಾ ಪಟೇಲ್ ಗೆ 50 ವರ್ಷ ವಯಸ್ಸಾದರೂ ಇನ್ನೂ ಮದುವೆಯಾಗಿಲ್ಲ. ಇದೀಗ ಆಕೆ ಬಾಲಿವುಡ್ ನಿರ್ದೇಶಕರೊಬ್ಬರ ಮೇಲೆ ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ. ಆತನ ಕಾರಣದಿಂದ ಆಕೆಯ ಜೀವನ ನಾಶವಾಯಿತು ಎಂದು ಹೇಳಿದ್ದಾರೆ. ಬಾಲಿವುಡ್ ನಿರ್ಮಾಪಕ ವಿಕ್ರಮ್ ಭಟ್ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದರು. ಈ ವಿಚಾರವನ್ನು ಆಕೆ ಆ ಸಮಯದಲ್ಲಿ ಬಹಿರಂಗವಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಆಕೆಯ ಕೆರಿಯರ್ ನಾಶವಾಯ್ತಂತೆ. ಈ ವಿಚಾರವನ್ನು ಆಕೆ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆಕೆಯ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಸಂದರ್ಶನದಲ್ಲಿ ಅಮಿಷಾ ಮಾತನಾಡುತ್ತಾ, ವಿಕ್ರಮ್ ಭಟ್ ಜೊತೆಗಿನ ರಿಲೇಷನ್ ಶಿಪ್ ಕಾರಣದಿಂದ ನನ್ನ ಸಿನಿ ಕೆರಿಯರ್ ನಾಶವಾಯ್ತು. ಅದರಲ್ಲಿ ಒಂದು ದಶಕದಿಂದ ಪುರುಷರಿಗೆ ದೂರವಾಗಿಯೇ ಇದ್ದೆ. ಸಿನಿರಂಗದಲ್ಲಿ ಪ್ರಮಾಣಿಕತೆಗೆ ಬೆಲೆ ಇಲ್ಲ. ನಾನು ತುಂಬಾ ಪ್ರಮಾಣಿಕಳಾಗಿದ್ದೇನೆ. ಆದರೆ ನಾನು ಯಾರನ್ನು ಹೃದಯಕ್ಕೆ ಹತ್ತಿರ ಮಾಡಿಕೊಂಡೆ ಅದೇ ನನ್ನ ಜೀವನದ ದೊಡ್ಡ ತಪ್ಪಾಗಿದೆ. ಅದನ್ನು ನಾನು ದೊಡ್ಡ ಗುಣಪಾಠವನ್ನಾಗಿ ಭಾವಿಸುತ್ತೇನೆ. ಆದರೆ 13 ವರ್ಷಗಳ ಕಾಲ ನನಗೆ ಸಿನೆಮಾ ಅವಕಾಶಗಳು ಬರಲಿಲ್ಲ. ನನ್ನ ಜೀವನದಲ್ಲಿ ಶಾಂತಿ ನೆಮ್ಮದಿ ಮಾತ್ರ ಇದ್ದು, ಬೇರೆ ಏನೂ ನನಗೆ ಬೇಕಿಲ್ಲ ಎಂದು ಅಮೀಷಾ ಪಟೇಲ್ ಹೇಳಿದ್ದಾರೆ. ಇನ್ನೂ ವಿಕ್ರಮ್ ಭಟ್ ಜೊತೆಗೆ ಅಮಿಷಾ ಸಿನಿರಂಗದಲ್ಲಿ ಬ್ಯುಸಿಯಾಗಿರುವಾಗಲೇ ಆತನೊಂದಿಗೆ ಡೇಟಿಂಗ್ ಮಾಡಿದ್ದಾರೆ. ವಿಕ್ರಮ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದ ಅಪ್ ಮುಜೆ ಅಚ್ಚೆ ಲಗ್ನೆ ಲಗೆ ಎಂಬ ಸಿನೆಮಾದಲ್ಲಿ ಅಮಿಷಾ ಪಟೇಲ್ ನಟಿಸಿದ್ದರು. ಈ ಸಿನೆಮಾದ ಬಳಿಕ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿ ಸುಮಾರು ಕಾಲ ಅವರು ಡೇಟಿಂಗ್ ನಡೆಸಿದರು. ಸುಮಾರು ಐದು ವರ್ಷಗಳ ಕಾಲ ಡೇಟಿಂಗ್ ನಡೆಸಿದ ಈ ಜೋಡಿ ಬೇರೆಯಾದರು.
ಇನ್ನೂ ಅಮಿಷಾ ಪಟೇಲ್ ಸಿನಿ ಕೆರಿಯರ್ ಅಷ್ಟೊಂದು ಸಕ್ಸಸ್ ಪುಲ್ ಆಗಿ ಸಾಗುತ್ತಿಲ್ಲ. ವರ್ಷಕ್ಕೊಂದು ಸಿನೆಮಾದಂತೆ, ಕೆಲವೊಂದು ಸಿನೆಮಾಗಳಲ್ಲಿ ಸ್ಪೇಷಲ್ ಸಾಂಗ್ಸ್ ನಲ್ಲೂ ಅಮಿಷಾ ನಟಿಸುತ್ತಾ ಕೆರಿಯರ್ ಸಾಗಿಸುತ್ತಿದ್ದಾರೆ. ಸದ್ಯ ಆಕೆ ಸನ್ನಿ ಡಿಯೋಲ್ ಜೊತೆಗೆ ಗದರ್-2 ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಇದೇ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ.
