ಸಂಚಲನಾತ್ಮಕ ಹೇಳಿಕೆ ಕೊಟ್ಟ ನಟಿ ನಮಿತಾ, ಆ ವಿಚಾರದಲ್ಲಿ ಕೆಲವು ವರ್ಷಗಳು ನರಕ ಅನುಭವಿಸಿದ್ದೆ ಎಂದ ನಟಿ….!

ಸಿನಿರಂಗದಲ್ಲಿ ಆರಂಭ ಚೆನ್ನಾಗಿ ಪಡೆದುಕೊಂಡರು ಬಳಿಕ ಸಿನೆಮಾಗಳಿಂದ ದೂರವುಳಿಯುತ್ತಾರೆ. ಈ ಸಾಲಿಗೆ ನಟಿ ನಮಿತಾ ಸಹ ಸೇರುತ್ತಾರೆ. ಟಾಲಿವುಡ್‌ ಸೊಂತಂ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ನಮಿತಾ ತಮ್ಮ ನಟನೆಯ…

ಸಿನಿರಂಗದಲ್ಲಿ ಆರಂಭ ಚೆನ್ನಾಗಿ ಪಡೆದುಕೊಂಡರು ಬಳಿಕ ಸಿನೆಮಾಗಳಿಂದ ದೂರವುಳಿಯುತ್ತಾರೆ. ಈ ಸಾಲಿಗೆ ನಟಿ ನಮಿತಾ ಸಹ ಸೇರುತ್ತಾರೆ. ಟಾಲಿವುಡ್‌ ಸೊಂತಂ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ನಮಿತಾ ತಮ್ಮ ನಟನೆಯ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಹ ಗಳಿಸಿಕೊಂಡಿದ್ದರು. ದೊಡ್ಡ ನಟರ ಜೊತೆಗೂ ಸಹ ತೆರೆಯನ್ನು ಹಂಚಿಕೊಂಡಿದ್ದರು ನಟಿ ನಮಿತಾ. ಕಾಲಕ್ರಮೇಣ ದೇಹವನ್ನು ಬೆಳೆಸಿಕೊಂಡರೂ ಸಹ ದಪ್ಪವಾಗಿದ್ದರು ಮುದ್ದಾಗಿ ಇದ್ದಾರೆ ಎಂದು ಅಭಿಮಾನಿಗಳು ಗುಣಗಾಣ ಮಾಡುತ್ತಿದ್ದರು. ಸಿನೆಮಾಗಳಿಂದ ದೂರವುಳಿದ ಈಕೆ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ನಮಿತಾ ಸಹ ಒಬ್ಬರಾಗಿದ್ದಾರೆ. ಆಕೆ ಜೆಮಿನಿ, ಬಿಲ್ಲಾ, ಸಿಂಹಾ ಮೊದಲಾದ ಸಿನೆಮಾಗಳ ಮೂಲಕ ಒಳ್ಳೆಯ ಕ್ರೇಜ್ ಸಹ ಪಡೆದುಕೊಂಡರು. ಇನ್ನೂ ಆರಂಭದಲ್ಲಿ ಆಕೆ ಸಣ್ಣ ಆಗಿದ್ದರೂ ಸಹ ಬಳಿಕ ದಪ್ಪವಾದರು. ದಪ್ಪವಾಗಿರುವ ಕಾರಣದಿಂದಲೇ ಆಕೆ ಕೆಲವೊಂದು ವಿಮರ್ಶೆಗಳಿಗೆ ಗುರಿಯಾದರು. ಆದರೆ ಆ ಸಮಯದಲ್ಲಿ ಆಕೆ ಅದ್ಯಾವುದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಇನ್ನೂ ಸಿನೆಮಾಗಳಿಂದ ಕೊಂಚ ದೂರವುಳಿದ ಈಕೆ ಇದೀಗ ತನ್ನ ಸೋಷಿಯಲ್ ಮಿಡಿಯಾ ಖಾತೆಗಳ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲಿದ್ದಾರೆ. ನಮಿತಾ ತನ್ನ ಇನ್ಸ್ಟಾ ಖಾತೆಯ ಮೂಲಕ ತಾನು ಅನುಭವಿಸಿದ ಮಾನಸಿಕ ಒತ್ತಡದ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

ಇನ್ನೂ ನಮಿತಾ ತನ್ನ ಇನ್ಸ್ಟಾ ಖಾತೆಯಲ್ಲಿ ತಾನು ಅನುಭವಿಸಿದ ಮಾನಸಿಕ ಒತ್ತಡದ ಬಗ್ಗೆ ಮಾತನಾಡಿದ್ದಾರೆ. ಮಾನಸಿಕ ಒತ್ತಡವನ್ನು ಹೇಗೆ ಎದುರಿಸಬೇಕು ಎಂಬುದನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಈ ಪೋಸ್ಟ್ ಮಾಡುತ್ತಿದ್ದೇನೆ. ಹತ್ತು ವರ್ಷಗಳ ಹಿಂದೆ ನಾನು ದಪ್ಪವಾಗಿದ್ದೇನೆ ಎಂದು ಅನೇಕ ವಿಮರ್ಶೆಗಳು ಎದುರಾಗಿದ್ದವು. ಅದರಿಂದ ನಾನು ತುಂಬಾ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ರಾತ್ರಿ ವೇಳೆ ನಿದ್ದೆ ಬರುತ್ತಿರಲಿಲ್ಲ. ಈ ವೇಳೆ ಅತಿಯಾದ ಆಹಾರ ಸೇವನೆ ಮಾಡುವುದು ಅಭ್ಯಾಸವಾಗಿತ್ತು. ಈ ರೀತಿಯಾಗಿ ತುಂಬಾ ದಪ್ಪವಾಗಿಬಿಟ್ಟೆ. ಕಡಿಮೆ ಸಮಯದಲ್ಲೇ ಸುಮಾರು 97 ಕೆಜಿ ಆಗಿಬಿಟ್ಟೆ. ಆದರೆ ಕೆಲವರು ಮದ್ಯಪಾನ ಮಾಡಿದ್ದಕ್ಕಾಗಿ ದಪ್ಪ ಆಗಿದ್ದೆ ಎಂದು ಕೊಳ್ಳುತ್ತಾರೆ ಆದರೆ ನಾನು ದಪ್ಪವಾಗಿದ್ದು ಬೇರೆಯದ್ದೆ ಆಗಿದೆ ಎಂದಿದ್ದಾರೆ.

ಇನ್ನೂ ನಮಿತಾ ಹಂಚಿಕೊಂಡ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ತಾನು ಈ ಪೋಸ್ಟ್ ಹಂಚಿಕೊಂಡಿದ್ದರ ಹಿಂದೆ ಬೇರೆ ಯಾವುದೇ ಉದ್ದೇಶವಿಲ್ಲ ಮಾನಸಿಕ ಒತ್ತಡವನ್ನು ಹೇಗೆ ಎದುರಿಸಬೇಕೆಂದು ತಿಳಿಸುವ ನಿಟ್ಟಿನಲ್ಲಿ ಆಕೆ ಈ ಪೋಸ್ಟ್ ಹಂಚಿಕೊಂಡಿದ್ದಾಗಿ ಹೇಳಿದ್ದಾರೆ.