ನೆಪೊಟೀಸಂ ಬಗ್ಗೆ ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್ ಶಾಕಿಂಗ್ ಕಾಮೆಂಟ್ಸ್, ವೈರಲ್ ಆದ ಕಾಮೆಂಟ್ಸ್……!

Follow Us :

ಸಿನಿರಂಗದಲ್ಲಿ ಆಗಾಗ ನೆಪೊಟೀಸಂ ಬಗ್ಗೆ ಕಾಮೆಂಟ್ ಗಳು ಕೇಳಿಬರುತ್ತಲೇ ಇರುತ್ತದೆ. ಇತ್ತೀಚಿಗೆ ಕೆಲ ಸ್ಟಾರ್‍ ಗಳು ನೆಪೊಟೀಸಂ ಬಗ್ಗೆ ಮಾತನಾಡುತ್ತಿರುತ್ತಾರೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ತಾವು ಎದುರಿಸಿದಂತಹ ಸಮಸ್ಯೆಗಳು, ಅವಮಾನಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್‍ ಸಹ ತಾನು ನೆಪೊಟೀಸಂ ಎದುರಿಸಿದ್ದಾಗಿ ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸೀತಾರಾಮಂ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದಂತಹ ನಟಿ ಮೃಣಾಲ್ ಠಾಕೂರ್‍ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಯಾವುದೇ ಸಿನಿರ ಬ್ಯಾಕ್ ಗ್ರೌಂಡ್ ಇಲ್ಲದೇ ಆಕೆ ಸಿನಿರಂಗದಲ್ಲಿ ಸ್ಟಾರ್‍ ಆಗಿದ್ದಾರೆ. ಸೀರಿಯಲ್ಸ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಬಂದಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಪಾರ ಸಂಖ್ಯೆಯ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ಸೌತ್ ಅಂಡ್ ನಾರ್ತ್ ನಲ್ಲಿ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಂಡು ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಕೊನೆಯದಾಗಿ ಆಕೆ ಹಾಯ್ ನಾನ್ನ ಎಂಬ ಸಿನೆಮಾದಲ್ಲಿ ನಟಿಸಿ ಒಳ್ಳೆಯ ಸಕ್ಸಸ್ ಪಡೆದುಕೊಂಡರು. ಶೀಘ್ರದಲ್ಲೇ ವಿಜಯ್ ದೇವರಕೊಂಡ ಜೊತೆಗೆ ಫ್ಯಾಮಿಲಿ ಸ್ಟಾರ್‍ ಸಿನೆಮಾದ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಇತ್ತೀಚಿಗೆ ನಡೆದ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮೃಣಾಲ್ ಠಾಕೂರ್‍ ನೆಪೊಟೀಸಂ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೆಲವು ಮಾದ್ಯಮಗಳು ಆಕೆಯೊಂದಿಗೆ ಸಂದರ್ಶನ ತೆಗೆದುಕೊಂಡರು. ಈ ವೇಳೆ ಅಲ್ಲಿಗೆ ಸ್ಟಾರ್‍ ನಟನ ವಾರಸುದಾರರೊಬ್ಬ ಅಲ್ಲಿಗೆ ಬಂದಿದ್ದಾನೆ. ಇದರಿಂದ ಮಿಡಿಯಾದವರೆಲ್ಲಾ ಅಲ್ಲಿಗೆ ಹೋಗುತ್ತಾರೆ. ಮೃಣಾಲ್ ಸಂದರ್ಶನವನ್ನು ಮದ್ಯೆದಲ್ಲೇ ಬಿಟ್ಟು ಸ್ಟಾರ್‍ ಕಿಡ್ ಬಳಿಗೆ ಓಡಿಬಿಟ್ಟರು. ಈ ಬಗ್ಗೆ ನೆಟ್ಟಿಗರು ಸಹ ರಿಯಾಕ್ಟ್ ಆಗಿದ್ದಾರೆ. ಆಕೆಯ ಫೀಲಿಂಗ್ಸ್ ಹೇಗಿರುತ್ತದೆ, ಮಿಡಿಯಾದವರಾದರೂ ಅರ್ಥ ಮಾಡಿಕೊಳ್ಳಬೇಕಲ್ಲವೇ ಎಂದು ಆಕ್ರೋಷ ಹೊರಹಾಕುತ್ತಿದ್ದಾರೆ.

ಈ ಬಗ್ಗೆ ಮೃಣಾಲ್ ಸಹ ಕಾಮೆಂಟ್ ಮಾಡಿದ್ದು, ಪ್ರತಿಯೊಬ್ಬರು ನೆಪೊಟೀಸಂ ವಿಚಾರದಲ್ಲಿ ಸ್ಟಾರ್‍ ಕಿಡ್ ಗಳನ್ನು ನಿಂದಿಸುತ್ತಿರುತ್ತಾರೆ. ಆದರೆ ನೆಪೊಟೀಸಂ ಎಂಬುದು ಸ್ಟಾರ್‍ ಕಿಡ್ಸ್ ತಪ್ಪಲ್ಲ. ಪ್ರತಿ ಒಬ್ಬ ಪ್ರೇಕ್ಷಕ ಸ್ಟಾರ್‍ ಕಿಡ್ ಬಗ್ಗೆ ತಿಳಿದುಕೊಳ್ಳಬೇಕು ಅಂದುಕೊಳ್ಳುತ್ತಿರುತ್ತಾರೆ. ಮಿಡಿಯಾ ಸಹ ಅಂತಹ ಸುದ್ದಿಗಳನ್ನು ಬರೆಯೋಕೆ ಇಂಟ್ರಸ್ಟ್ ತೋರಿಸುತ್ತಿರುತ್ತಾರೆ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಸದ್ಯ ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.