ಉದ್ಯೋಗ ಹುಡುಕುವವರಿಗೆ ಸಿಹಿಸುದ್ದಿ, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯಲ್ಲಿವೆ 300 ಸಹಾಯಕರ ಹುದ್ದೆಗಳು …!

Follow Us :

ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯಲ್ಲಿ ಬರೋಬ್ಬರಿ 300 ಸಹಾಯಕರ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಫೆ.15ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೋಗ ಬಯಸುತ್ತಿರುವಂತಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯಲ್ಲಿ ಒಟ್ಟು 300 ಸಹಾಯಕ ಹುದ್ದೆಗಳಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆ.15 ಆಗಿದ್ದು, ಕನಿಷ್ಟ 21 ವರ್ಷ, ಗರಿಷ್ಟ 30 ವರ್ಷ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗಧಿಪಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದಂತಹ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು. ತಾವು ಆಯ್ಕೆ ಬಯಸುವಂತಹ ರಾಜ್ಯದ ಸ್ಥಳೀಯ ಭಾಷೆ ಮಾತನಾಡಲು ಹಾಗೂ ಓದಲು ತಿಳಿದಿರಬೇಕು.

ಆಯ್ಕೆ ವಿಚಾರಕ್ಕೆ ಬಂದರೇ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಎರಡು ಹಂತಗಳ ನಡೆಯಲಿದೆ. ಪ್ರಿಲಿಮ್ಸ್ ಪರೀಕ್ಷೆ ಇರಲಿದ್ದು, ಅದರಲ್ಲಿ ಇಂಗ್ಲೀಷ್ ಭಾಷೆ, ತಾರ್ಕಿಕ ಸಾಮರ್ಥ್ಯ, ಸಂಕ್ಯಾತ್ಮಕ ಸಾಮರ್ಥ್ಯ ವಿಚಯಕ್ಕೆ ಸಂಬಂಧಿಸಿದಂತೆ ಒಟ್ಟು 100 ಅಂಕಗಳಿಗೆ 60 ನಿಮಿಷದ ಅವಧಿಯಲ್ಲಿ ಆನ್ ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಗಳಿಸಿದ ಕಟ್ ಆಫ್ ಅಂಕಗಳ ಆಧಾರದ ಮೇಲೆ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ತಾರ್ಕಿಕ ಪರೀಕ್ಷೆ, ಇಂಗ್ಲೀಷ್ ಭಾಷೆ, ಸಾಮಾನ್ಯ ಜ್ಞಾನ, ಕಂಪ್ಯೂಟರ್‍ ಜ್ಞಾನ ಹಾಗೂ ಸಂಖ್ಯಾ ಸಾಮರ್ಥ್ಯ ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟು 200 ಪ್ರಶ್ನೆಗಳಿಗೆ 250 ಅಂಕಗಳಿಗೆ ಎರಡು ಗಂಟೆಯ ಅವಧಿಯಲ್ಲಿ ಆನ್ ಲೈನ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.newindia.co.in ತಾಣವನ್ನು ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.