Film News

ಟ್ರಾನ್ಸಫರೆಂಟ್ ಸೀರೆಯಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಪ್ರಣಿತಾ ಸುಭಾಷ್, ಯುವಕರ ನಿದ್ದೆಗೆಡುವಂತಹ ಲುಕ್ಸ್ ಕೊಟ್ಟ ಬ್ಯೂಟಿ…..!

ಕನ್ನಡ ಸಿನೆಮಾಗಳ ಮೂಲಕ ಕೆರಿಯರ್‍ ಆರಂಭಿಸಿದ ಪ್ರಣಿತಾ ಸುಭಾಷ್ ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್ ಪಡೆದುಕೊಂಡರು. ಜೊತೆಗೆ ತೆಲುಗು ಸಿನೆಮಾಗಳಲ್ಲಿ ಸಹ ನಟಿಸುವ ಅವಕಾಶಗಳನ್ನು ಪಡೆದುಕೊಂಡರು. ಸ್ಟಾರ್‍ ನಟರೊಂದಿಗೆ ಸಹ ನಟಿಸುವ ಅವಕಾಶ ಪಡೆದುಕೊಂಡು ಸ್ಪೇಷಲ್ ಇಮೇಜ್ ಸಹ ಗಿಟ್ಟಿಸಿಕೊಂಡರು. ಮದುವೆಯಾದರೂ ಸಹ ಪ್ರಣೀತಾ ತುಂಬಾ ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.

ನಟಿ ಪ್ರಣಿತಾ ಸುಭಾಷ್ ಟಾಲಿವುಡ್ ನಲ್ಲಿ ಅತ್ತಾರಿಂಟಿಕಿ ದಾರೇದಿ ಸಿನೆಮಾದ ಮೂಲಕ ಸೌತ್ ಸಿನಿರಂಗದಾದ್ಯಂತ ಕ್ರೇಜ್ ಪಡೆದುಕೊಂಡರು. ಆಕೆ ಇತ್ತೀಚಿಗಷ್ಟೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಮದುವೆ, ಮಗು ಕಾರಣದಿಂದ ಸಿನೆಮಾಗಳಿಂದ ದೂರವುಳಿದ ಈಕೆ ಇದೀಗ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಆಕೆ ಸಿನೆಮಾಗಳಿಂದ ದೂರ ಉಳಿದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲೇ ಇದ್ದರು. ಇದೀಗ ಮತ್ತೆ ಆಕೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ಆಕೆ ಹಾಟ್ ಆಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ನಟಿ ಪ್ರಣಿತಾ ಕಳೆದ 2021 ರಲ್ಲಿ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜ್ ಎಂಬಾತನನ್ನು ಮದುವೆಯಾದರು. ಮದುವೆಯಾದ ಬಳಿಕ ಆಕೆ ಸಿನೆಮಾಗಳಿಂದ ದೂರವೇ ಉಳಿದಿದ್ದರು. ಸದ್ಯ ಪ್ರಣಿತಾ ತನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇನ್ನೂ ಪ್ರಣಿತಾ ಸೋಷಿಯಲ್ ಮಿಡಿಯಾದಲ್ಲಂತೂ ಸದಾ ಆಕ್ಟೀವ್ ಆಗಿದ್ದು, ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ ಸಿನೆಮಾ ಅಪ್ಡೇಟ್ಸ್ ನೀಡುತ್ತಾ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಪ್ರಣಿತಾ ಟ್ರೆಡಿಷನಲ್ ವೇರ್‍ ನಲ್ಲಿ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ತೆಳುವಾದ ಸೀರೆಯಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಟಾಪ್ ಟು ಬಾಟಂ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಅಭಿಮಾನಿಗಳನ್ನು ಮಸ್ಮರೈಜ್ ಮಾಡಿದ್ದಾರೆ. ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Most Popular

To Top