ತ್ರಿಷಾ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಮತ್ತೋರ್ವ ನಟಿ ಮೀರಾ, ತ್ರಿಷಾರನ್ನು ಅಸಭ್ಯವಾಗಿ ಮುಟ್ಟಿದ್ರು ಆಕೆ ಸಹಿಸಿಕೊಂಡಿದ್ಲು ಎಂದ ನಟಿ ಮೀರಾ ಮಿಥುನ್……!

Follow Us :

ಸದಾ ವಿವಾದಗಳ ಮೂಲಕ ಸುದ್ದಿಯಾಗುವ ಬಿಗ್ ಬಾಸ್ ಮಾಜಿ ಕಂಟೆಸ್ಟಂಟ್ ಮೀರಾ ಮಿಥುನ್ ಸ್ಟಾರ್‍ ಹಿರೋಗಳ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡುತ್ತಿರುತ್ತಾರೆ. ಈ ಹಿಂದೆ ಸೂರ್ಯ, ವಿಜಯ್, ಜ್ಯೋತಿಕಾ, ತ್ರಿಷಾ, ರಜನಿಕಾಂತ್ ರವರಂತಹ ಅನೇಕ ಸ್ಟಾರ್‍ ಗಳ ಬಗ್ಗೆ ಆರೋಪಗಳನ್ನು ಮಾಡಿದ್ದರು. ತ್ರಿಷಾ ಗೆ ಜಾತಿ ಮೇಲೆ ವ್ಯಾಮೋಹ ಹೆಚ್ಚು ಅದಕ್ಕಾಗಿ ನನಗೆ ಅವಕಾಶಗಳು ಕಳೆದುಕೊಂಡೆ ಎಂದು ಆರೋಪ ಮಾಡಿದ್ದರು. ಇದೀಗ ಮತ್ತೊಮ್ಮೆ ತ್ರಿಷಾ ಕುರಿತು ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಸ್ಟಾರ್‍ ನಟಿ ತ್ರಿಷಾ ಬಗ್ಗೆ ಮೀರಾ ಮಿಥುನ್ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ತ್ರಿಷಾ ನಟಿಯಾಗಿ ಮಾಡಿದ ಸಿನೆಮಾ ಒಂದರಲ್ಲಿ ನಾನು ಸಹ ಒಂದು ಸಣ್ಣ ಪಾತ್ರ ಮಾಡಿದ್ದೆ. ಆ ಸಿನೆಮಾ ಸೆಟ್ ನಲ್ಲಿ ಓರ್ವ ಪ್ರಮುಖ ನಟ ಆಕೆಯನ್ನು ಮುಟ್ಟಬಾರದ ಜಾಗದಲ್ಲಿ ಪದೇ ಪದೇ ಮುಟ್ಟುತ್ತಿದ್ದು. ಅದನ್ನು ನೋಡಿ ನನಗೆ ತುಂಬಾ ಕೋಪ ಬಂತು. ತ್ರಿಷಾ ಸಹ ಕಿರಿಕಿರಿ ಅನುಭವಿಸಿದ್ದರು. ಆದರೆ ಆಕೆ ಸುಮ್ಮನೆ ಇದ್ದಳು. ಕಿರುಚಾಡಿ ಗಲಾಟೆ ಮಾಡಿದರೇ ಸಿನೆಮಾ ಅವಕಾಶಗಳನ್ನು ಕಳೆದುಕೊಳ್ಳುತ್ತೇನೆ ಎಂಬ ಭಯದಿಂದ ಆಕೆ ಅದನ್ನು ತಡೆದುಕೊಂಡರು. ಸ್ಟಾರ್‍ ಹಿರೋಯಿನ್ ಆದ ತ್ರಿಷಾ ರವರಿಗೆ ಆ ರೀತಿಯಾದರೇ ಇನ್ನೂ ಸಾಮಾನ್ಯ ನಟಿಯರ ಪಾಡೇನು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ತ್ರಿಷಾ ರನ್ನು ಅಸಭ್ಯಕರವಾಗಿ ಮುಟ್ಟಿದ ಆ ನಟ ಯಾರು ಎಂಬ ಹೆಸರು ಮಾತ್ರ ಆಕೆ ರಿವೀಲ್ ಮಾಡಿಲ್ಲ.

ಇನ್ನೂ ನಟಿ ಮೀರಾ ಮಿಥುನ್ ಕಾಮೆಂಟ್ ಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ತ್ರಿಷಾ ರವರಿಗೆ ಕಿರುಕುಳ ಕೊಟ್ಟ ಆ ನಟ ಯಾರು ಎಂಬ ಚರ್ಚೆಗಳೂ ಸಹ ಶುರುವಾಗಿದೆ. ಅದೇ ಸಮಯದಲ್ಲಿ ಮೀರಾ ಮಿಥುನ್ ರವರ ಕಾಮೆಂಟ್ ಗಳು ಸುಳ್ಳು ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಪಾಪ್ಯುಲರ್‍ ಆಗಲು ಮೀರಾ ಮಿಥುನ್ ಆಗಾಗ ಅಂತಹ ಕಾಮೆಂಟ್ ಗಳನ್ನು ಮಾಡುತ್ತಿರುತ್ತಾರೆ ಎಂಬ ವಾದ ಸಹ ಕೇಳಿಬರುತ್ತಿದೆ. ಇನ್ನೂ ತಮಿಳಿನ ಬಿಗ್ ಬಾಸ್ ಸೀಸನ್-3 ರಲ್ಲಿ ಮೀರಾ ಭಾಗವಹಿಸಿದ್ದರು.

ಆಕೆ ಸಕ್ಸಸ್ ಕಾಣಲಿಲ್ಲ. ಕಳೆದ 2015ರಲ್ಲೂ ಆಕೆಯ ಮೇಲೆ ಕೆಲವೊಂದು ಆರೋಪಗಳ ಮೇರೆಗೆ ಪೊಲೀಸರು ಪ್ರಕರಣ ಸಹ ದಾಖಲಿಸಿದ್ದರು. ಆದರೆ ಪೊಲೀಸರಿಗೆ ಆಕೆ ಚಾಲೆಂಜ್ ಮಾಡುತ್ತಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಇನ್ನೂ ಕಳೆದ ವರ್ಷ ಆಗಸ್ಟ್ ಮಾಹೆಯಲ್ಲಿ ಆಕೆಯನ್ನು ಕೇರಳ ಪೊಲೀಸರು ಬಂಧಿಸಿದ್ದರು. ಈ ವೇಳೆ ಪೊಲೀಸರು ತನಗೆ ಕಿರುಕುಳ ಕೊಟ್ಟರು ಎಂದೂ ಸಹ ಆರೋಪಿಸಿದ್ದರು. ಈ ರೀತಿಯಲ್ಲಿ ಆಕೆ ಸದಾ ವಿವಾದಗಳಿಂದ ಜೀವನ ಸಾಗಿಸುತ್ತಿದ್ದಾರೆ.