Film News

ಅರ್ಧರಾತ್ರಿ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಿದ ಬಾಲಿವುಡ್ ಬಾದ್ ಷಾ ಶಾರುಖ್, ಸೀಕ್ರೇಟ್ ಆಗಿ ದೇವಿಯ ದರ್ಶನ ಪಡೆದ ನಟ…..!

ಬಾಲಿವುಡ್ ಸಿನಿರಂಗದ ಸ್ಟಾರ್‍ ನಟ ಶಾರುಖ್ ಖಾನ್ ಇತ್ತೀಚಿಗಷ್ಟೆ ಪಠಾನ್ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ದೇಶದ ಸಿನಿರಂಗದ ಸ್ಟಾರ್‍ ನಟರಲ್ಲಿ ಶಾರುಖ್ ಸಹ ಒಬ್ಬರಾಗಿದ್ದಾರೆ. ಅವರು ಮೂಲತಃ ಮುಸ್ಲೀಂ ಧರ್ಮಕ್ಕೆ ಸೇರಿದ್ದರೂ ಸಹ ಅವರ ಮನೆಯಲ್ಲಿ ಗಣೇಶ ಚತುರ್ಥಿ ಸೇರಿದಂತೆ ಅನೇಕ ಹಿಂದೂ ಹಬ್ಬಗಳನ್ನು ಸಹ ಆಚರಿಸುತ್ತಾರೆ. ಆ.29 ರ ರಾತ್ರಿ ಅವರು ಸೀಕ್ರೇಟ್ ಆಗಿ ಹಿಂದೂಗಳ ಪ್ರಮುಖ ದೇವಾಲಯ ವೈಷ್ಣೋದೇವಿಯ ದರ್ಶನ ಪಡೆದುಕೊಂಡಿದ್ದಾರೆ.

ದೇಶದ ಸಿನಿರಂಗದಲ್ಲಿ ಭಾರಿ ಕ್ರೇಜ್ ಹೊಂದಿರುವ ನಟರ ಸಾಲಿನಲ್ಲಿ ಶಾರುಖ್ ಸಹ ಸೇರುತ್ತಾರೆ. 60ರ ವಯಸ್ಸಿನಲ್ಲಿಯೂ ಸಹ ಆಕ್ಷನ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಶಾರುಖ್ ಬ್ಯಾಕ್ ಟು ಬ್ಯಾಕ್ ಡಿಜಾಸ್ಟರ್‍ ಗಳ ಮೂಲಕ ಸಿನೆಮಾಗಳಿಂದ ದೂರವೇ ಉಳಿದರು. ಬಳಿಕ ಪಠಾನ್ ಸಿನೆಮಾದ ಮೂಲಕ ಮತ್ತೆ ಸಕ್ಸಸ್ ಕಂಡುಕೊಂಡರು. ಈ ಸಿನೆಮಾ ಆತನಿಗೆ ಬಿಗ್ ಸಕ್ಸಸ್ ಕೊಡುವುದರ ಜೊತೆಗೆ ಸೂಪರ್‍ ಹಿಟ್ ಇಲ್ಲದೇ ಇರುವಂತಹ ಬಾಲಿವುಡ್ ಗೂ ಸಹ ಒಳ್ಳೆಯ ಸಕ್ಸಸ್ ತಂದುಕೊಟ್ಟರು ಎಂದು ಹೇಳಬಹುದಾಗಿದೆ. ಇದೀಗ ಜವಾನ್ ಸಿನೆಮಾದ ಮೂಲಕ ಸದ್ದು ಮಾಡಲಿದ್ದಾರೆ. ಜವಾನ್ ಸಿನೆಮಾ ಇದೇ ಸೆ.7 ರಂದು ಅದ್ದೂರಿಯಾಗಿ ತೆರೆಕಾಣಲಿದೆ. ಈ ಸಿನೆಮಾ ಬಿಡುಗಡೆಗೆ ಒಂದು ವಾರ ಬಾಕಿಯಿರುವಾಗಲೇ ಶಾರುಖ್ ಟೆಂಪಲ್ ರನ್ ಮಾಡಿದ್ದಾರೆ.

ಇನ್ನೂ ಶಾರುಖ್ ಕಾಶ್ಮೀರದಲ್ಲಿರುವ ವೈಷ್ಣೋದೇವಿಯ ದರ್ಶನಕ್ಕೆ ತೆರಳಿದ್ದಾರೆ. ಅದರಲ್ಲೂ ಮಧ್ಯರಾತ್ರಿ ಅವರು ದೇವಿಯ ದರ್ಶನಕ್ಕೆ ತೆರಳಿದ್ದರ ಹಿನ್ನೆಲೆಯಲ್ಲಿ ಈ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಯಾರಿಗೂ ಗುರುತು ಸಿಗಬಾರದೆಂಬ ದೃಷ್ಟಿಯಿಂದ ಶಾರುಖ್ ಮುಖ ಮುಚ್ಚಿಕೊಂಡು, ಆ.29 ರ ರಾತ್ರಿ 11.40 ರ ಸಮಯದಲ್ಲಿ ವೈಷ್ಣೋದೇವಿಯ ದರ್ಶನ ಪಡೆದುಕೊಂಡಿದ್ದಾರೆ. ಶಾರುಖ್ ರವರನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದರು. ಇನ್ನೂ ಈ ಹಿಂದೆ ಸಹ ಶಾರುಖ್ ವೈಷ್ಣೋದೇವಿ ದರ್ಶನ ಪಡೆದುಕೊಂಡರು. ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡ ಪಠಾಣ್ ಸಿನೆಮಾದ ರಿಲೀಸ್ ಗೂ ಮುನ್ನಾ ಅವರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಿನೆಮಾ ಸಹ ಬಾಲಿವುಡ್ ಗೆ ಮತಷ್ಟು ಹುರುಪು ತಂದುಕೊಟ್ಟಿತ್ತು. ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿತ್ತು.

ಈ ಕಾರಣದಿಂದಲೇ ಶಾರುಖ್ ಮತ್ತೊಮ್ಮೆ ತಮ್ಮ ಜವಾನ್ ಸಿನೆಮಾ ಜಯಗಳಿಸಲಿ ಎಂದು ವೈಷ್ಣೋದೇವಿಯ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಿಂದೂ ದೇವರ ಮೇಲಿಟ್ಟ ನಂಬಕೆಯನ್ನು ಅನೇಕರು ಹೊಗಳುತ್ತಿದ್ದಾರೆ. ಅದೇ ಮಾದರಿಯಲ್ಲಿ ಕೆಲವರು ಟೀಕೆ ಸಹ ಮಾಡುತ್ತಿದ್ದಾರೆ. ಇನ್ನೂ ಸೆ.7 ರಂದು ಜವಾನ್ ಸಿನೆಮಾ ಬಿಡುಗಡೆಯಾಗಲಿದ್ದು ಯಾವ ರೀತಿಯಲ್ಲಿ ಸಕ್ಸಸ್ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top