Film News

ಪತಿ ಕ್ಯಾಪ್ಚರ್ ಮಾಡಿದ ಪೊಟೋಸ್ ಹಂಚಿಕೊಂಡ ಅನಸೂಯ, ಹಾಟ್ ಆಂಕರ್ ಮೇಕಪ್ ಲೆಸ್ ಪೊಟೋಸ್ ವೈರಲ್….!

ಜಬರ್ದಸ್ತ್ ಮೂಲಕ ಕ್ರೇಜ್ ಪಡೆದುಕೊಂಡ ಆಂಕರ್‍ ಕಂ ನಟಿ ಅನಸೂಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡು ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ಅನಸೂಯ ತುಂಬಾನೆ ಫೇಂ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಡುತ್ತಾ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಅನಸೂಯ ಪತಿ ಕ್ಲಿಕ್ ಮಾಡಿದ ಕೆಲವೊಂದು ಪೊಟೋಗಳನ್ನು ಆಕೆ ಹಂಚಿಕೊಂಡಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ನಟಿ ಅನಸೂಯ ಜಬರ್ದಸ್ತ್ ಶೋ ನಲ್ಲಿ ಗ್ಲಾಮರ್‍ ಶೋ ಮಾಡುತ್ತಾ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಬಳಿಕ ಸಿನೆಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡ ಅನಸೂಯ ವಿಭಿನ್ನ ಪಾತ್ರಗಳನ್ನು ಪೋಷಣೆ ಮಾಡುವ ಮೂಲಕ ಮತಷ್ಟು ಫೇಂ ಸಂಪಾದಿಸಿಕೊಂಡರು. ಆಕೆ ಆಯ್ಕೆ ಮಾಡಿಕೊಳ್ಳುವ ಪ್ರತಿಯೊಂದು ಪಾತ್ರ ಬಲವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ನೋಡುತ್ತಾರೆ. ಅದರಲ್ಲೂ ಕೆಲವೊಂದು ಸಿನೆಮಾಗಳಲ್ಲಿ ನೆಗೆಟೀವ್ ರೋಲ್ ಗಳಲ್ಲೂ ಸಹ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಪುಷ್ಪಾ ಸಿನೆಮಾದಲ್ಲಿ ಆಕೆ ಸುನೀಲ್ ಪತ್ನಿಯ ಪಾತ್ರದಲ್ಲಿ ಡಿ ಗ್ಲಾಮರ್‍ ರೋಲ್ ನಲ್ಲಿ ಕಾಣಿಸಿಕೊಂಡರು. ಇದೀಗ ಪುಷ್ಪಾ-2 ಸಿನೆಮಾದಲ್ಲಿ ಅನಸೂಯ ಪಾತ್ರ ಹೇಗಿರಲಿದೆ ಎಂಬುದು ತುಂಬಾ ಆಸಕ್ತಿ ಮೂಡಿಸಿದೆ.

ನಟಿ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಗ್ಲಾಮರಸ್ ಪೋಸ್ ಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಮುಂಜಾನೆ ಶಾರ್ಟ್ ಧರಿಸಿ ಮೇಕಪ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ವರ್ಕೌಟ್ ಮಾಡುತ್ತಾ, ಕಾಫಿ ಕುಡಿಯುತ್ತಾ ರಿಲ್ಯಾಕ್ಸ್ ಆಗುತ್ತಿದ್ದಾರೆ. ಈ ಪೊಟೋಗಳನ್ನು ಕ್ಲಿಕ್ ಮಾಡಿದ್ದು,ಅನಸೂಯ ಪತಿ ಭಾರದ್ವಾಜ್. ಪತಿ ಪೊಟೋಗಳನ್ನು ಕ್ಲಿಕ್ ಮಾಡುತ್ತಿದ್ದರೇ ಅನಸೂಯ ನಾಚಿ ನೀರಾಗಿದ್ದಾರೆ. ಕ್ಯೂಟ್ ಸ್ಮೈಲ್ ಕೊಡುತ್ತಾ ಎಲ್ಲರನ್ನೂ ಫಿದಾ ಮಾಡುತ್ತಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಅನಸೂಯ ಪೊಟೋಗಳಿಗೆ ಕೆಲವರು ಆಂಟಿ ಎಂದು ಟ್ರೋಲ್ ಸಹ ಮಾಡುತ್ತಿರುತ್ತಾರೆ. ಈ ಕಾರಣದಿಂದ ಅನಸೂಯ ಪೊಲೀಸರಿಗೆ ದೂರು ಸಹ ನೀಡಿದ್ದರು. ಆದರೂ ಸಹ ಟ್ರೋಲ್ ಗಳು ಮಾತ್ರ ನಿಂತಿಲ್ಲ. ಇನ್ನೂ ಅನಸೂಯ ವಿಭಿನ್ನ ಪಾತ್ರಗಳಲ್ಲೂ ಸಹ ನಟಿಸಲು ಸೈ ಎನ್ನುತ್ತಾರೆ. ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲೂ ಸಹ ನಟಿಸಲು ಸಿದ್ದವಾಗಿರುತ್ತಾರೆ. ಇದೀಗ ಆಕೆ ರಂಗಮಾರ್ತಾಂಡ, ಪುಷ್ಪಾ-2 ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.

Most Popular

To Top