ತೆಲುಗು ಸ್ಟಾರ್ ನಟರ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಮಂಚು ಲಕ್ಷ್ಮೀ, ಅವರಿಗೆ ನನ್ನ ಕಂಡರೇ ಕೀಳು ಭಾವನೆ ಎಂದ ನಟಿ….!

Follow Us :

ಮಲ್ಟಿ ಟ್ಯಾಲೆಂಟೆಡ್ ನಟಿ ಮಂಚು ಲಕ್ಷ್ಮೀ ನಲವತ್ತರ ವಯಸ್ಸಿನಲ್ಲೂ ಸಹ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನಲ್ಲಿನ ಗ್ಲಾಮರ್‍ ಎಂಬ ಅಂಗವನ್ನು ಇದೀಗ ಶೋ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿಸಿಕೊಂಡು ಆಕೆ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಆಗಾಗ ಆಕೆ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡುತ್ತಿರುತ್ತಾರೆ. ಇದೀಗ ಆಕೆ ಟಾಲಿವುಡ್ ಹಿರೋಗಳ ಬಗ್ಗೆ ಕಾಮೆಂಟ್ ಮಾಡಿದ್ದು, ಅವು ವೈರಲ್ ಆಗುತ್ತಿವೆ.

ಟಾಲಿವುಡ್ ನ ದೊಡ್ಡ ಕುಟುಂಬಗಳಲ್ಲಿ ಒಂದಾದ ಮಂಚು ಕುಟುಂಬದ ಸ್ಟಾರ್‍ ನಟ ಮೋಹನ್ ಬಾಬು ರವರ ಪುತ್ರಿ ಮಂಚು ಲಕ್ಷ್ಮೀ  ಈಗಾಗಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಅನೇಕ ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದರೂ ಸಹ ಆಕೆ ನಟಿಯಾಗಿ ಸಕ್ಸಸ್ ಆಗಲು ವಿಫಲರಾದರು. ನಟಿಯಾಗಿ ಹಾಗೂ ಕೆಲವೊಂದು ಕಿರುತೆರೆ ಶೋಗಳನ್ನು ಸಹ ಹೋಸ್ಟ್ ಮಾಡಿದರು. ಜೊತೆಗೆ ನಿರ್ಮಾಪಕಿಯಾಗಿಯೂ ಸಹ ಆಕೆ ಕೆಲಸ ಮಾಡಿದರು. ಸದ್ಯ ಆಕೆ ಬಾಲಿವುಡ್ ಸಿನಿರಂಗದತ್ತ ಮುಖ ಮಾಡಿದ್ದಾರೆ. ಬಾಲಿವುಡ್ ನಲ್ಲಿ ತನ್ನ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

ಇನ್ನೂ ಇತ್ತೀಚಿಗೆ ಆಕೆ ಆಹಾ ಒಟಿಟಿಯಲ್ಲಿ ಪ್ರಸಾರವಾಗುವ ಕುಕ್ಕಿಂಗ್ ಪ್ರೋಗ್ರಾಂ ಒಂದನ್ನು ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಕೆಲ ಸೆಲೆಬ್ರೆಟಿಗಳು ಹಾಜರಾಗಿದ್ದರು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಒಂದು ಎಪಿಸೋಡ್ ನಲ್ಲಿ ಮಂಚು ಲಕ್ಷ್ಮೀ ಟಾಲಿವುಡ್ ಸ್ಟಾರ್‍ ಹಿರೋಗಳ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ. ನಾನು ಮಾಡುವ ಮಾಡುವಂತಹ ಕಾರ್ಯಕ್ರಮಗಳಿಗೆ ಟಾಲಿವುಡ್ ಇಂಡಸ್ಟ್ರಿಯ ಸ್ಟಾರ್‍ ಹಿರೋಗಳಾದ ಪ್ರಭಾಸ್, ರಾಮ್ ಚರಣ್, ಅಲ್ಲು ಅರ್ಜುನ್ ರವರಂತಹವರು ಬರುವುದಿಲ್ಲ ಎಂದಿದ್ದಾರೆ. ಅದಕ್ಕೆ ಅವು ಏಕೆ ಬರೊಲ್ಲ ಎಂಬ ಮತ್ತೊಂದು ಪ್ರಶ್ನೆ ಆಕೆಗೆ ಎದುರಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀ ಅವರಿಗೆ ನನ್ನ ಶೋ ಅಂದರೇ ಕಡಿಮೆ ಎಂಬ ಭಾವನೆ ಇದೆಯೇನೋ ಅದಕ್ಕೆ ಬರೊಲ್ಲವೇನೋ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಮಂಚು ಲಕ್ಷ್ಮೀ ಮಾಡಿದ ಈ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಹಿಂದೆ ಸಹ ಮಂಚು ಲಕ್ಷ್ಮೀ ಇದೇ ಮಾದರಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದರು. ಆ ಕಾರ್ಯಕ್ರಮಕ್ಕೆ ಟಾಲಿವುಡ್ ನ ಸ್ಟಾರ್‍ ಹಿರೋಗಳು ಹಾಜರಾಗಿದ್ದರು. ಆದರೆ ಇದೀಗ ಆ ಮೂರು ಹಿರೋಗಳ ಬಗ್ಗೆ ಕಾಮೆಂಟ್ ಮಾಡಿದ ಕಾರಣದಿಂದ ಆಕೆಯ ಕಾಮೆಂಟ್ ಗಳ ವಿರುದ್ದ ವಿಮರ್ಶೆಗಳು ಕೇಳಿಬರುತ್ತಿವೆ.