Film News

ಸಣ್ಣ ವಯಸ್ಸಿನಲ್ಲೇ ಆತ ನನ್ನನ್ನು ತಾಯಿ ಮಾಡಿದ ಎಂದು ಶಾಕಿಂಗ್ ಕಾಮೆಂಟ್ ಮಾಡಿದ ಸೀನಿಯರ್ ನಟಿ ಪ್ರಗತಿ…..!

ಸೀನಿಯರ್‍ ನಟಿ ಪ್ರಗತಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಕೆ ವಯಸ್ಸಿಗೆ ಸಂಬಂಧವಿಲ್ಲ ಎಂಬಂತೆ ಹೆವಿ ವರ್ಕೌಟ್, ಡ್ಯಾನ್ಸ್, ರೀಲ್ಸ್ ಗಳನ್ನು ಹಂಚಿಕೊಳ್ಳುವ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ವೈಟ್ ಲಿಫ್ಟಿಂಗ್ ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರು. ಇದೀಗ ಆಕೆ ತನ್ನ ವೈಯುಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡಿದ್ದು, ಆಕೆಯ ಈ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸೌತ್ ಸ್ಟಾರ್‍ ಕ್ಯಾರೆಕ್ಟರ್‍ ಆರ್ಟಿಸ್ಟ್ ಪ್ರಗತಿ ಸಿನೆಮಾಗಳಲ್ಲಿ ನಟಿಸುವುದರ ಜೊತೆಗೆ ಫಿಟ್ ನೆಸ್ ಗೂ ಸಹ ಆದ್ಯತೆ ನೀಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಜಿಮ್ ಮಾಡುತ್ತಾ ಪೊಟೋಗಳು, ವಿಡಿಯೋಗಳು ಹಂಚಿಕೊಳ್ಳುತ್ತಿರುತ್ತಾರೆ. ಶೂಟಿಂಗ್ ಇಲ್ಲದೇ ಇದ್ದರೇ ಆಕೆ ಹೆಚ್ಚಾಗಿ ಜಿಮ್ ನಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಅನೇಕರು ಆಕೆ ಸೋಷಿಯಲ್ ಮಿಡಿಯಾಗಾಗಿ ಫಿಟ್ ನೆಸ್ ಮೈಂಟೈನ್ ಮಾಡುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಕೆ ಇದೀಗ ದೊಡ್ಡ ಸಾಧನೆ ಮಾಡಿದ್ದು, ಆಕೆಯ ಕಸರತ್ತಿನ ಹಿಂದೆ ಇರುವ ಉದ್ದೇಶ ಏನು ಎಂಬುದು ತಿಳಿದಿದೆ. ವೈಯಿಟ್ ಲಿಫ್ಟಿಂಗ್ ಮಾಡುವ ಅನೇಕ ಸ್ಪರ್ಧೆಗಳಲ್ಲಿ ಸಹ ಆಕೆ ಭಾಗಿಯಾಗಿದ್ದರು. ಇದೀಗ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ನ್ಯಾಷನಲ್ ಪವರ್‍ ಲಿಫ್ಟಿಂಗ್ ಚಾಂಪಿಯನ್ ಆಗಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಪ್ರಗತಿ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ನಾನು ಚಿಕ್ಕ ವಯಸ್ಸಿನಲ್ಲೇ ಓರ್ವ ವ್ಯಕ್ತಿ ತಾಯಿ ಮಾಡಿಬಿಟ್ಟ. ಸಿನೆಮಾಗಳ ಮೇಲಿನ ಆಸಕ್ತಿಯ ಕಾರಣದಿಂದ ಸಿನಿರಂಗದಲ್ಲಿ ಬರಬೇಕು ಎಂದು ಭಾವಿಸಿದ್ದೆ. ಆದರೆ ಇಂಡಸ್ಟ್ರಿಯಲ್ಲಿ ಹಿರೋಯಿನ್ ಆಗಿ ಹೆಜ್ಜೆ ಇಡಬೇಕಾಗಿ ಅಂದುಕೊಂಡ ಸಮಯದಲ್ಲಿ ಓರ್ವ ವ್ಯಕ್ತಿ ನನ್ನ ಜೊತೆಗೆ ಮಾತನಾಡಿ ನನ್ನ ಮನಸ್ಸು ತುಂಬಾ ಕೆಡಿಸಿಬಿಟ್ಟಿದ್ದ. ಸಿನಿರಂಗದಲ್ಲಿ ಅವಕಾಶಗಳು ಬರೋದು ತುಂಬಾನೆ ಕಷ್ಟ. ಅವಕಾಶಗಳು ಬಂದರೂ ತುಂಬಾ ಕಾಲ ಹಿರೋಯಿನ್ ಆಗಿ ಇರೋಕೆ ಸಾಧ್ಯವಿಲ್ಲ. ಅದೇ ರೀತಿ ತಾಯಿಯಂತ ಪಾತ್ರಗಳಲ್ಲಿ ನಟಿಸಿದರೇ ಸುಮಾರು ಕಾಲ ಸಿನಿರಂಗದಲ್ಲಿ ಇರಬಹುದು ಎಂದು ಸಲಹೆ ನೀಡಿದ್ದರು.

ಈ ಕಾರಣದಿಂದ ನಾನು ಸಿನಿರಂಗದಲ್ಲಿ ತುಂಬಾ ಸಮಯ ಇರಬೇಕೆಂಬ ಕಾರಣದಿಂದ ಚಿಕ್ಕ ವಯಸ್ಸಿನಲ್ಲೇ ತಾಯಿ ಪಾತ್ರದಲ್ಲಿ ನಟಿಸಲು ಶುರು ಮಾಡಿದೆ. ಆ ರೀತಿ ನಾನು ತಾಯಿಯಾದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಪ್ರಗತಿ ಮಾಡಿದಂತಹ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

Most Popular

To Top