News

ಆಧಾರ್ ಕಾರ್ಡ್ ದಾರರಿಗೆ ಪ್ರಮುಖ ಮಾಹಿತಿ, ಡಿ.14 ರೊಳಗೆ ಈ ಕೆಲಸ ಕಡ್ಡಾಯವಾಗಿ ಮಾಡಿ…..!

ಭಾರತದಲ್ಲಿ ಪ್ರತಿಯೊಂದು ವಿಚಾರದಲ್ಲೂ ಆಧಾರ್‍ ಸಂಖ್ಯೆ ತುಂಬಾನೆ ಪ್ರಾಮುಖ್ಯತೆ ವಹಿಸಿದೆ. ಬ್ಯಾಂಕಿಂಗ್ ವ್ಯವಸ್ಥೆ ಸೇರಿದಂತೆ ಅನೇಕ ಕೆಲಸಗಳಿಗಾಗಿ ಆಧಾರ್‍ ಮುಖ್ಯವಾಗಿದೆ. ಇದೀಗ ಆಧಾರ್‍ ಕಾರ್ಡ್ ಹೊಂದಿರುವವರು ಈ ಕೆಲಸ ಮಾಡಲೇಬೇಕಾಗಿದೆ. 2011 ರಿಂದ 2015 ರ ಅವಧಿಯಲ್ಲಿ ಆಧಾರ್‍ ಕಾರ್ಡ್ ಮಾಡಿಸಿದ ಆಧಾರ್‍ ಕಾರ್ಡ್ ದಾರರು ತಮ್ಮ ಆಧಾರ್‍ ಅನ್ನು ಒಮ್ಮೆ ಸಹ ಅಪ್ಡೇಟ್ ಮಾಡದೇ ಇರುವವರೂ ಕೂಡಲೇ ಅಪ್ಡೇಟ್ ಮಾಡುವಂತೆ ಕಟ್ಟುನಿಟ್ಟಿನ ಆದೇಶ ಹೊರಬಂದಿದೆ. ಈ ಸಂಬಂಧ ಈಗಾಗಲೇ ಸಂದೇಶಗಳೂ ಸಹ ಬರುತ್ತಿದ್ದು, ಡಿ.14ರೊಳಗೆ ಅಪ್ಡೇಟ್ ಮಾಡಿಕೊಳ್ಳವುದು ಕಡ್ಡಾಯವಾಗಿದೆ.

ಸದ್ಯ ಆಧಾರ್‍ ಕಾರ್ಡ್ ಇಲ್ಲದೇ ಇದ್ದರೇ ನಾವು ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವೇ ಇಲ್ಲ ಎನ್ನಬಹುದಾಗಿದೆ. ಇದೀಗ ಆಧಾರ್‍ ಕಾರ್ಡ್ ಗೆ ಸಂಬಂಧಿಸಿದ ಪ್ರಮುಖ ಮಾಹಿತಿ ಬಂದಿದ್ದು, ಹತ್ತು ವರ್ಷದ ಹಿಂದೆ ಆಧಾರ್‍ ಕಾರ್ಡ್ ಮಾಡಿಸಿದಂತಹ ವ್ಯಕ್ತಿಗಳು ಡಿ.14 ರೊಳಗೆ ಕಡ್ಡಾಯವಾಗಿ ಅಪ್ಡೇಟ್ ಮಾಡಿಸಿಕೊಳ್ಳಬೇಕೆಂಬ ಹೊಸ ನಿಯಮ ಜಾರಿಯಾಗಿದೆ. 2011 ರಿಂದ 2015 ರ ಅವಧಿಯಲ್ಲಿ ಆಧಾರ್‍ ಕಾರ್ಡ್ ಮಾಡಿಸಿದ ಆಧಾರ್‍ ಕಾರ್ಡ್ ದಾರರು ತಮ್ಮ ಆಧಾರ್‍ ಅನ್ನು ಒಮ್ಮೆ ಸಹ ಅಪ್ಡೇಟ್ ಮಾಡದೇ ಇರುವವರೂ ಕೂಡಲೇ ಅಪ್ಡೇಟ್ ಮಾಡಬೇಕಿದೆ. ಆದ್ದರಿಂದ ಆಧಾರ್‍ ಅಪ್ಡೇಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎನ್ನಬಹುದಾಗಿದೆ.

ಆನ್ ಲೈನ್ ಮೂಲಕವೂ ಸಹ ಆಧಾರ್‍ ಅಪ್ಡೇಟ್ ಮಾಡಬಹುದಾಗಿದೆ. ವಿಳಾಸ ಬದಲಾವಣೆ ಆನ್ ಲೈನ್ ಮೂಲಕ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ಭಾವಚಿತ್ರ, ಐರೀಸ್ ಸೇರಿದಂತೆ ಇತರೇ ಅಪ್ಡೇಟ್ ಗಳಿಗಾಗಿ ಜನರು ಆಧಾರ್‍ ನೊಂದಣಿ ಕೇಂದ್ರಗಳಿಗೆ ಹೋಗಬೇಕಾಗಿದೆ. ಇತ್ತೀಚಿಗೆ ಆಧಾರ್‍ ಕಾರ್ಡ್‌ನಲ್ಲಿ ಆಗುತ್ತಿರುವ ವಂಚನೆ ಹಾಗೂ ಮಾಹಿತಿ ಸೋರಿಕೆಯಂತಹ ಪ್ರಕರಣಗಳ ಕಾರಣದಿಂದ ಆಧಾರ್‍ ಅಪ್ಡೇಟ್ ಮಾಡಿಸಬೇಕೆಂಬ ಕಡ್ಡಾಯ ನಿಯಮ ಆಧಾರ್‍ UIDAI ಆದೇಶ ಹೊರಡಿಸಿದೆ.

Most Popular

To Top