News

ಹಿಂದೂ ಸಂಪ್ರದಾಯದಂತೆ ಮದುವೆಯಾದ ವಿದೇಶಿ ಹುಡುಗಿ, ಜರ್ಮನಿಯಿಂದ ಬಂದು ಕುಂದಾಪುರ ಯುವಕನನ್ನು ವರಿಸಿದ ಯುವತಿ…..!

ಪ್ರೀತಿಗೆ ಜಾತಿ, ಧರ್ಮ, ದೇಶದ ಗಡಿ ಯಾವುದೇ ಇಲ್ಲ ಎಂದೇ ಹೇಳಲಾಗುತ್ತದೆ. ಇದು ಅನೇಕ ಬಾರಿ ಸಾಬೀತು ಸಹ ಆಗಿದೆ. ಇತ್ತೀಚಿಗಷ್ಟೆ ಭಾರಿ ಸದ್ದು ಮಾಡಿದ ಸೀಮಾ ಹೈದರ್‍ ಹಾಗೂ ಅಂಜು ಲವ್ ಸ್ಟೋರಿಗಳು ಇದಕ್ಕೆ ಉತ್ತಮ ಉದಾಹರಣೆ ಎನ್ನಬಹುದಾಗಿದೆ. ಇದೀಗ ಪ್ರೀತಿಸಿದ ಯುವಕನನ್ನು ಹರಿಸಿ ಭಾರತಕ್ಕೆ ಬಂದು ಆತನೊಂದಿಗೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ ವಿದೇಶಿ ಹುಡುಗಿ.

ಜರ್ಮನಿಯ ಯುವತಿ ಹಾಗೂ ಕುಂದಾಪುರ ತಾಲೂಕಿನ ಆಜ್ರಿ ಮೂಲದ ಯುವಕ ಪರಸ್ಪರ ಪ್ರೀತಿಸಿಕೊಂಡಿದ್ದಾರೆ. ಈ ಜೋಡಿಯ ಮದುವೆ ಜ.1 ರಂದು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಕುಂದಾಪುರದ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯದಲ್ಲಿ ಕುಟುಂಬಗಳ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಜರ್ಮನಿಯ ಪೆಟ್ರಾ ಶ್ರೂಅರ್‍ ಹಾಗೂ ಪೀಟರ್‍ ಶ್ರೂಅರ್‍ ಮುನಿಸ್ತರ್‍ ಯನಿಕಬ್ ಎಂಬುವವರ ಪುತ್ರಿ ಕಾರಿನ್ ಹಾಗೂ ಕುಂದಾಪುರದ ಆಜ್ರಿಯ ಕರಿಮನೆ ಸುವರ್ಣ ಹಾಗೂ ಪಂಜು ಪೂಜಾರಿ ದಂಪತಿಯ ಪುತ್ರ ಚಂದನ್ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.

ಇನ್ನೂ ಕುಂದಾಪುರದ ಚಂದನ್ ಜರ್ಮನಿಯ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಕಾರಿನ್ ಜರ್ಮನಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇವರಿಬ್ಬರಿಗೂ ಪರಿಚಯವಾಗಿ ಪರಸ್ಪರ ಪ್ರೀತಿಸಿಕೊಂಡಿದ್ದಾರೆ. ಬಳಿಕ ತಮ್ಮ ಪ್ರೀತಿಯ ವಿಚಾರ ಎರಡೂ ಕುಟುಂಗಳಿಗೆ ತಿಳಿಸಿ ಅವರ ಒಪ್ಪಿಗೆ ಪಡೆದುಕೊಂಡಿದ್ದಾರೆ. ಮಕ್ಕಳ ಪ್ರೀತಿಯನ್ನು ಒಪ್ಪಿ ಜ.1 ರಂದು ಹಿಂದೂ ಸಂಪ್ರದಾಯದಂತೆ ಎರಡೂ ಕುಟುಂಬಗಳ ಸಂಬಂಧಿಕರು, ಮಿತ್ರರ ಸಮ್ಮುಖದಲ್ಲಿ ಮದುವೆ ನೆರವೇರಿಸಿದ್ದಾರೆ. ಈ ಸಂಬಂಧ ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

Most Popular

To Top