ಪತಿಯ ವಿರುದ್ದ ಆರೋಪ ಮಾಡಿದ ಮಹಾಲಕ್ಷ್ಮೀ, ಮೋಸದಿಂದ ಮದುವೆಯಾದ ಎಂದು ರವಿಂದರ್ ವಿರುದ್ದ ಗಂಭೀರ ಆರೋಪ…..!

ಸೌತ್ ಇಂಡಸ್ಟ್ರಿಯಲ್ಲಿ ಇತ್ತೀಚಿಗೆ ತುಂಬಾನೆ ಸದ್ದು ಮಾಡಿದ ಮದುವೆ ಎಂದರೇ ಅದು ಮಹಾಲಕ್ಷ್ಮೀ ರವೀಂದರ್‍ ಮದುವೆ ಎಂದು ಹೇಳಬಹುದು. ಸ್ಟಾರ್‍ ಸೆಲೆಬ್ರೆಟಿಗಳ ಮದುವೆಗಿಂತಲೂ ಈ ಜೋಡಿಯ ಮದುವೆ ಎಲ್ಲಾ ಕಡೆ ಸಖತ್ ಸೌಂಡ್ ಮಾಡಿತ್ತು.…

ಸೌತ್ ಇಂಡಸ್ಟ್ರಿಯಲ್ಲಿ ಇತ್ತೀಚಿಗೆ ತುಂಬಾನೆ ಸದ್ದು ಮಾಡಿದ ಮದುವೆ ಎಂದರೇ ಅದು ಮಹಾಲಕ್ಷ್ಮೀ ರವೀಂದರ್‍ ಮದುವೆ ಎಂದು ಹೇಳಬಹುದು. ಸ್ಟಾರ್‍ ಸೆಲೆಬ್ರೆಟಿಗಳ ಮದುವೆಗಿಂತಲೂ ಈ ಜೋಡಿಯ ಮದುವೆ ಎಲ್ಲಾ ಕಡೆ ಸಖತ್ ಸೌಂಡ್ ಮಾಡಿತ್ತು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮದುವೆಯಾದಾಗಿನಿಂದ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇದೀಗ ಮಹಾಲಕ್ಷ್ಮೀ  ಮೋಸದಿಂದ ರವಿಂದರ್‍ ಮದುವೆಯಾದರು ಎಂದು ಮಹಾಲಕ್ಷ್ಮೀ ಗಂಭೀರ ಆರೋಪ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಿರ್ಮಾಪಕ ರವಿಂದರ್‍ ಹಾಗೂ ಮಹಾಲಕ್ಷ್ಮೀ ತಮ್ಮ ಮೊದಲ ಪತಿ ಹಾಗೂ ಪತ್ನಿಗೆ ವಿಚ್ಚೇದನ ನೀಡಿ ಕೆಲವು ದಿನಗಳ ಕಾಲ ಇಬ್ಬರೂ ಪ್ರೀತಿಸಿ ಅದ್ದೂರಿಯಾಗಿ ಸಪ್ತಪದಿ ತುಳಿದರು. ಅವರಿಬ್ಬರ ಮದುವೆ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿದ್ದೇ ತಡ ಪ್ರತಿನಿತ್ಯ ಅವರನ್ನು ಟ್ರೋಲ್ ಮಾಡುತ್ತಲೇ ಇದ್ದರು. ಮೊದಲಿಗೆ ಮಹಾಲಕ್ಷ್ಮೀ ಸಹ ತಮ್ಮನ್ನ ಟ್ರೋಲ್ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಸಹ ಟ್ರೋಲ್ ಗಳು ನಿಲ್ಲದ ಕಾರಣ ಯಾವ ಟ್ರೋಲ್ ಗಳನ್ನು ಸಹ ಕಿವಿಗೆ ಹಾಕಿಕೊಳ್ಳದೇ ತಮ್ಮ ವೈವಾಹಿಕ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದರು. ಆದರೆ ಇತ್ತೀಚಿಗೆ ಅವರಿಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡಿದ್ದು, ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಕೆಲವು ದಿನಗಳ ಹಿಂದೆಯಷ್ಟೆ ರವಿಂದರ್‍ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು.

ಓರ್ವ ವ್ಯಾಪಾರಿಯನ್ನು ಮೋಸ ಮಾಡಿದ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಚೆನೈ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ರವಿಂದರ್‍ ರವರನ್ನು ಬಂಧಿಸಿದ್ದಾರೆ. ವಿದ್ಯುತ್ ಉತ್ಪತ್ತಿ ಮಾಡುವಂತಹ ಪ್ಲಾಂಟ್ ನಿರ್ಮಾಣ ಮಾಡಿ ಅದರಿಂದ ಭಾರಿ ಲಾಭ ಗಳಿಸಬಹುದೆಂದು ಚೆನೈ ಮೂಲದ ಬಾಲಾಜಿ ಎಂಬ ವ್ಯಕ್ತಿಯನ್ನು ನಂಬಿಸಿ ಅವರಿಂದ 15.83 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾಗಿ ದೂರು ನೀಡಿದ್ದರು. ದೂರಿನನಂತೆ ರವೀಂದರ್‍ ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಇದೀಗ ರವೀಂದರ್‍ ಪತ್ನಿ ರವಿಂದರ್‍ ವಿರುದ್ದ ಕೆಲವೊಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ರವಿಂದರ್‍ ನನಗೆ ಮೋಸ ಮಾಡಿದ್ದಾನೆ. ಆತ ಕೋಟಿ ಕೋಟಿ ಮೋಸ ಮಾಡಿರುವ ವಿಚಾರ ನನಗೆ ತಿಳಿಸಿಲ್ಲ. ನನ್ನ ಮೊದಲ ಪತಿಗೆ ವಿಚ್ಚೇದನ ಕೊಟ್ಟು ರವಿಂದರ್‍ ನನ್ನು ಮದುವೆಯಾಗಿ ಮೋಸ ಹೋದೆ. ಆತ ಮೊಬೈಲ್ ಸಂಖ್ಯೆ ಬದಲಿಸಿಕೊಂಡು ಮೋಸ ಮಾಡುತ್ತಿದ್ದ ಎಂದು ಆಕೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ ಎಂದು ಹೇಳಲಾಗುತ್ತಿದೆ.

ಸದ್ಯ ಮಹಾಲಕ್ಷ್ಮೀ ಹೇಳಿದ್ದಾರೆ ಎನ್ನಲಾದ ಈ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಜೊತೆಗೆ ಆಕೆ ಮಾನಸಿಕ ಖಿನ್ನತೆಗೆ ಸಹ ಒಳಗಾಗಿದ್ದಾಳೆ ಎನ್ನಲಾಗಿದೆ. ಇನ್ನೂ ಹಣ ನೋಡಿ ಮದುವೆಯಾದ್ರೆ ಇದೇ ರೀತಿ ಆಗೋದು ಎಂದು ಆಕೆಯನ್ನು ಟ್ರೋಲ್ ಸಹ ಮಾಡಲಾಗುತ್ತಿದೆ.