ಹಿರೋಗಳ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ನಟಿ, ಅವರಿಗೆ ಟ್ಯಾಲೆಂಟ್ ಇಲ್ಲದೇ ಇದ್ದರೂ ಪರವಾಗಿಲ್ಲ ಎಂದ ಐಶ್ವರ್ಯ ರಾಜೇಶ್……!

Follow Us :

ಖ್ಯಾತ ಸೀನಿಯರ್‍ ನಟ ರಾಜೇಶ್ ಹಾಗೂ ನಟಿ ಶ್ರೀಲಕ್ಷ್ಮಿ ಯವರ ಕುಟುಂಬಕ್ಕೆ ಸೇರಿದ ಐಶ್ವರ್ಯ ರಾಜೇಶ್ ವಿಭಿನ್ನ ಸಿನೆಮಾಗಳ ಮೂಲಕ ತನ್ನದೇ ಆದ ಕ್ರೇಜ್ ಪಡೆದಕೊಂಡಿದ್ದಾರೆ. ಆಕೆ ತೆಲುಗು ನಟಿಯಾದರೂ ಸಹ ಆಕೆ ತಮಿಳು ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಇತ್ತೀಚಿಗೆ ಆಕೆ ಸಂಪೂರ್ಣವಾಗಿ ತೆಲುಗು ಸಿನೆಮಾಗಳಿಂದ ದೂರವಾದರು ಎಂದು ಹೇಳಬಹುದಾಗಿದೆ ಇದೀಗ ಟಾಲಿವುಡ್ ಹಿರೋಗಳ ಬಗ್ಗೆ ಸಂಚಲನಾತ್ಮಕ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸಂಚಲನ ಸೃಷ್ಟಿಸಿದೆ.

ತೆಲುಗು ಮೂಲದ ನಟಿ ಐಶ್ವರ್ಯ ರಾಜೇಶ್ ಕಾಲಿವುಡ್ ನಲ್ಲಿ ಸಕ್ಸಸ್ ಕಂಡುಕೊಂಡರು. ವಿಭಿನ್ನ ಸಿನೆಮಾಗಳ ಮೂಲಕ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಆಕೆ ಸಿನಿರಂಗದಲ್ಲಿ ತುಂಬಾನೆ ಕಷ್ಟಪಟ್ಟು ಬಂದಿದ್ದಾರೆ. ಆಕೆಯ ತಂದೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಆಕೆಯ ಬಾಲ್ಯದಲ್ಲೇ ತಂದೆ ಅನಾರೋಗ್ಯದ ಕಾರಣದಿಂದ ಮೃತಪಟ್ಟರು. ಇನ್ನೂ ತಂದೆಯ ಮರಣದ ಬಳಿಕ ಆಕೆಯ ಕುಟುಂಬದಲ್ಲೂ ಸಹ ಅನೇಕ ಕಷ್ಟಗಳು ಎದುರಾದವು. ತುಂಬಾ ಸಮಸ್ಯೆಗಳನ್ನು ಎದುರಿಸಿ ಸಿನಿರಂಗದಲ್ಲಿ ಸಕ್ಸಸ್ ಆದರು. ಸಿನಿರಂಗದಲ್ಲಿ ಆಕೆ ಸ್ಟಾರ್‍ ನಟಿಯಾಗಿ ಹೆಸರು ಗಳಿಸಿಕೊಳ್ಳಲು ತುಂಬಾನೆ ಕಷ್ಟಪಟ್ಟರು. ತಮಿಳು ಹಾಗೂ ತೆಲುಗಿನಲ್ಲಿ ಸಾಲು ಸಾಲು ಸಿನೆಮಾಗಳನ್ನು ಮಾಡುತ್ತಾ, ಹಿರೋಯಿನ್ ಆಗಿ, ಸ್ಪೇಷಲ್ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಹೆಚ್ಚಾಗಿ ಆಕೆ ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ.

ಈ ಹಿಂದೆ ನಟಿ ಐಶ್ವರ್ಯ ರಾಜೇಶ್ ಸಿನೆಮಾಗಳಲ್ಲಿ ಅವಕಾಶಗಳ ಬರದೇ ಇರುವ ಬಗ್ಗೆ ಕೆಲವೊಂದು ಕಾಮೆಂಟ್ ಮಾಡಿದ್ದರು. ಹಿರೋಗಳು ತಮ್ಮ ಸಿನೆಮಾಗಳಲ್ಲಿ ಅವಕಾಶ ಕಲ್ಪಿಸಲು ಆ ಹಿರೋಯಿನ್ ಗೆ ಮಾರ್ಕೆಟ್ ನಲ್ಲಿ ಎಷ್ಟು ಮೌಲ್ಯ ಇದೆ ಎಂಬುದನ್ನು ಪರಗಣಿಸಿ ಅವಕಾಶಗಳನ್ನು ನೀಡುತ್ತಾರೆ. ನನ್ನಂತಹ ಹಿರೋಯಿನ್ ಗಳಿಗೆ ಅವಕಾಶ ಕೊಡೊಲ್ಲಾ ಎಂದು, ಹಿರೋಗಳು ಅವಕಾಶ ಕೊಟ್ಟರೂ ಕೊಡದೇ ಇದ್ದರೂ ಸಹ ನನಗೆ ಯಾವುದೇ ಅಭ್ಯಂತರ ಇಲ್ಲ ಎಂದು ಹೇಳಿದ್ದರು. ಇದೀಗ ಐಶ್ವರ್ಯ ರಾಜೇಶ್ ಮತ್ತೊಮ್ಮೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.

ನಾನು ಹಿರೋಗಳು ಇಲ್ಲದೇ ಇದ್ದರೂ ಸಹ ಸಿನೆಮಾಗಳಲ್ಲಿ ನಟಿಸಿ ಹಿಟ್ ಸಿನೆಮಾಗಳನ್ನು ಪಡೆದುಕೋಳ್ಳುತ್ತೇನೆ ಎಂಬ ಆತ್ಮಸ್ಥೈರ್ಯ ಇದೆ. ತೆಲುಗು ಹಿರೋಗಳಿಗೆ ಹಿರೋಯಿನ್ ಗಳಲ್ಲಿನ ಟ್ಯಾಲೆಂಟ್ ಅವಶ್ಯಕತೆಯಿಲ್ಲ. ಅವರಿಗೆ ಹಿರೋಯಿನ್ ಗಳು ಸುಂದರವಾಗಿದ್ದರೇ ಸಾಕು, ಸೌಂದರ್ಯವನ್ನು ಮಾತ್ರ ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಆಕೆಯ ಈ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.