News

ನನ್ನ ಮಗನನ್ನು ಕೂಡಲೇ ಗಲ್ಲಿಗೇರಿಸಿ, ಇಲ್ಲ ನಾನೆ ಅವನನ್ನು ಕೊಲೆ ಮಾಡುತ್ತೇನೆ ಎಂದ ಅತ್ಯಚಾರ ಆರೋಪಿಯ ತಂದೆ….!

ಕೆಲವು ದಿನಗಳ ಹಿಂದೆಯಷ್ಟೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಬಾಲಕೀಯ ಮೇಲೆ ನಡೆದ ಅತ್ಯಚಾರಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಅಪ್ರಾಪ್ತ ಬಾಲಕಿಯ ಮೇಲೆ ನಡೆದಂತಹ ಈ ಘಟನೆಯ ವಿರುದ್ದ ದೇಶವ್ಯಾಪಿ ಆಕ್ರೋಷ ಸಹ ವ್ಯಕ್ತವಾಗಿತ್ತು. ಈ ಸಂಬಂಧ ಆಟೋ ಚಾಲಕರೊಬ್ಬರನ್ನು  ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಆತನನ್ನು ಗಲ್ಲಿಗೇರಿಸಬೇಕೆಂದು ಆಗ್ರಹ ವ್ಯಕ್ತವಾಗಿದೆ. ಇದೀಗ ಆರೋಪಿ ತಂದೆ ತನ್ನ ಮಗನನ್ನು ಕೂಡಲೇ ಗಲ್ಲಿಗೇರಿಸಿ ಇಲ್ಲವಾದಲ್ಲಿ ನಾನೇ ಆತನನ್ನು ಕೊಲ್ಲುತ್ತೇನೆ ಎಂದು ಹೇಳಿರುವುದಾಗಿ ವರದಿಯಾಗಿದೆ.

ಉಜ್ಜೈನಿಯಲ್ಲಿ ನಡೆದ ಬಾಲಕೀಯ ಮೇಲಿನ ಅತ್ಯಚಾರಕ್ಕೆ ಸಂಬಂಧಿಸಿದಂತೆ ಭರತ್ ಸೋನಿ ಎಂಬಾತನ್ನನ್ನು ಬಂಧಿಸಲಾಗಿದೆ. ಆತನ ತಂದೆ ಮಗನ ಬಗ್ಗೆ ತೀವ್ರ ಆಕ್ರೋಷ ಹೊರಹಾಕಿದ್ದಾನೆ. ಯಾರೇ ಆಗಲಿ ಅಂತಹ ಕೆಟ್ಟ ಕೆಲಸ ಮಾಡಬಾರದು. ಆತನಿಗೆ ಕಠಿಣ ಶಿಕ್ಷೆಯಾಗಬೇಕು. ಅತ್ಯಚಾರದಂತಹ ಘೋರ ಕೃತ್ಯಗಳನ್ನು ಎಸಗುವವರನ್ನು ಗುಂಡು ಹೊಡೆದು ಸಾಯಿಸಬೇಕು. ಅವನ ಈ ಅಮಾನವೀಯ ಕೃತ್ಯದಿಂದಾಗಿ ನಾನು ಹಾಗೂ ನನ್ನ ಕುಟುಂಬ ಸಾಯೋವರೆಗೂ ಆ ಅವಮಾನದಿಂದ ಹೊರ ಬರಲು ಸಾಧ್ಯವಿಲ್ಲ. ಅವನ ಜಾಗದಲ್ಲಿ ನಾನೇನಾದರೂ ಇದಿದ್ದರೇ ತಪ್ಪು ಒಪ್ಪಿಕೊಂಡು ಸಾಯುತ್ತಿದ್ದೆ. ಅಂತಹ ಕ್ರೂರ ಕೃತ್ಯ ವೆಸಗಿದವರು ಬದುಕಲು ಅರ್ಹರೇ ಅಲ್ಲ. ಅಂತಹವನನ್ನು ಕೂಡಲೇ ಗಲ್ಲಿಗೇರಿಸಬೇಕು ಇಲ್ಲಾ ಗುಂಡು ಹಾರಿಸಿ ಸಾಯಿಸಬೇಕೆಂದು ಕೋಪದಿಂದ ನುಡಿದಿದ್ದಾರೆ ಎಂದು ರಾಷ್ಟ್ರೀಯ ಮಾದ್ಯಮಗಳಲ್ಲಿ ವರದಿಯಾಗಿದೆ ಎಂದು ತಿಳಿದುಬಂದಿದೆ.

ಕಳೆದ ಸೆ.25 ರಂದು ಮಧ್ಯಪ್ರದೇಶದ ಉಜೈನಿಯಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದರು. ಅತ್ಯಾಚಾರ ನಡೆದ ಬಳಿಕ ಆಕೆ ಅರೆಬೆತ್ತಲೆಯಾಗಿ ರಸ್ತೆಯಲ್ಲಿ ಓಡಿಬಂದಿದ್ದರು. ರಕ್ತಸ್ರಾವದಿಂದ ಅರೆಬೆತ್ತಲೆಯಾಗಿ ಬಂದ ಸಂತ್ರಸ್ತೆ ಸ್ಥಳೀಯರಲ್ಲಿ ಸಹಾಯ ಕೇಳಿದ್ದಳು. ಆದರೆ ಯಾರೂ ಸಹ ಆಕೆಗೆ ಸಹಾಯ ಮಾಡಿರಲಿಲ್ಲ. ಬಳಿಕ ಆಶ್ರಮವೊಂದರಲ್ಲಿ ವ್ಯಕ್ತಿಯೊಂಬ್ಬರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅತ್ಯಾಚಾರ ನಡೆದಿದ್ದಾಗಿ ತಿಳಿದುಬಂದಿತ್ತು. ಈ ಸಂಬಂಧ ಉಜೈನಿಯ ಮಹಾಕಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Most Popular

To Top