Film News

ನಾನು ಹುಟ್ಟಿದ್ದು ಅಯೋಧ್ಯೆಯಲ್ಲಿ ಎಂದ ಮೆಗಾ ಸೊಸೆ ಲಾವಣ್ಯ, ಎಮೋಷನಲ್ ಕಾಮೆಂಟ್ಸ್ ಮಾಡಿದ ಲಾವಣ್ಯ…..!

ಕಳೆದ ವರ್ಷ ನ.1 ರಂದು ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಅದ್ದೂರಿಯಾಗಿ ಮದುವೆಯಾದರು. ಇಟಲಿಯಲ್ಲಿ ಈ ಸ್ಟಾರ್‍ ಗಳ ಮದುವೆ ಡೆಸ್ಟಿನೇಷನ್ ವೆಡ್ಡಿಂಗ್ ಹೆಸರಿನಲ್ಲಿ ತುಂಬಾ ಅದ್ದೂರಿಯಾಗಿ ನಡೆದಿತ್ತು. ಸದ್ಯ ಈ ಜೋಡಿ ತಮ್ಮ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಆಕೆ ಅಯೋಧ್ಯೆ ರಾಮಮಂದಿರದ ಉದ್ಘಾಟನೆಯ ಕುರಿತು ಎಮೋಷನಲ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಮೆಗಾ ಕುಟುಂಬದ ವರುಣ್ ಹಾಗೂ ಲಾವಣ್ಯ ಮದುವೆ ಸಂಭ್ರಮದಲ್ಲಿ ಮೆಗಾಸ್ಟಾರ್‍ ಚಿರಂಜೀವಿ, ಪವನ್ ಕಲ್ಯಾಣ್, ನಾಗಬಾಬು, ಅಲ್ಲು ಅರ್ಜುನ್, ರಾಮಚ್ ಚರಣ್, ಸಾಯಿಧರಮ್ ತೇಜ್, ವೈಷ್ಣವ್, ಅಲ್ಲು ಶಿರಿಷ್ ಸೇರಿದಂತೆ ಮೆಗಾ ಕುಟುಂಬ ಹಾಗೂ ಅಲ್ಲು ಕುಟುಂಬದ ಸದಸ್ಯರು ಹಾಜರಿದ್ದರು. ಇಟಲಿಯಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಲ್ಲಿ ಮೆಗಾ ಫ್ಯಾಮಿಲಿ ಕುಟುಂಬಸ್ಥರು ಡ್ಯಾನ್ಸ್ ಸಹ ಮಾಡಿದ ದೃಶ್ಯಗಳು ಸಹ ವೈರಲ್ ಆಗಿತ್ತು. ಸುಮಾರು ವರ್ಷಗಳ ಕಾಲ ಸೀಕ್ರೇಟ್ ಆಗಿ ಲವ್ ಟ್ರಾಕ್ ನಡೆಸಿದ ಈ ಜೋಡಿ ಬಳಿಕ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಮದುವೆಯಾದರು. ತಾವಿಬ್ಬರು ಮೊದಲು ಭೇಟಿಯಾಗಿದ್ದು, ಇಟಲಿಯಲ್ಲಿ, ಈ ಕಾರಣದಿಂದಲೇ ಈ ಜೋಡಿ ಇಟಿಲಿಯಲ್ಲೇ ಮದುವೆಯಾಗಲು ನಿರ್ಧಾರ ಮಾಡಿ, ಅಲ್ಲಿಯೇ ಅವರ ಮದುವೆ ಸಂಭ್ರಮ ಸಹ ನೆರವೇರಿತ್ತು.

ಇನ್ನೂ ಜ.22 ರಂದು ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅನೇಕ ಸಿನೆಮಾ ತಾರೆಯರು ಭಾಗಿಯಾಗಿದ್ದರು. ಇಡೀ ದೇಶವೇ ರಾಮಜಪ ಮಾಡುತ್ತಾ ಭಕ್ತಿ ಪರವಶವಾಗಿದೆ ಎಂದೇ ಹೇಳಬಹುದು. ಇದೀಗ ನಟಿ ಲಾವಣ್ಯ ತ್ರಿಪಾಠಿ ಅಯೋಧ್ಯೆ ರಾಮಮಂದಿರದ ಬಗ್ಗೆ ಎಮೋಷನಲ್ ಪೋಸ್ಟ್ ಮಾಡಿದ್ದಾರೆ. ಶ್ರೀರಾಮನ ಭಕ್ತಿಯನ್ನು ಪ್ರದರ್ಶನ ಮಾಡುತ್ತಾ ಪೋಸ್ಟ್ ಮಾಡಿದ್ದಾರೆ. ನಾನೂ ಸಹ ಅಯೋಧ್ಯೆಯಲ್ಲಿ ಜನಿಸಿದ್ದೇನೆ. ಲಾವಣ್ಯ ತಂದೆ ಹೈಕೋರ್ಟ್ ನ್ಯಾಯವಾಧಿ, ತಾಯಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಶಾಲಾ ವಿದ್ಯಾಭ್ಯಾಸ ಡೆಹರಾಡೂನ್ ನಲ್ಲಿ ಪೂರ್ಣಗೊಳಿಸಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಟಾಪನೆ ನಡೆಯುತ್ತಿರುವುದು ನನಗೆ ತುಂಬಾನೆ ಅದೃಷ್ಟ ಎಂದು ಭಾವಿಸುತ್ತಿದ್ದೇನೆ ಎಂದು  ಲಾವಣ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Most Popular

To Top