Film News

ಆ ವಿಚಾರದಲ್ಲಿ ನಾಗಬಾಬು ರವರನ್ನೇ ಎದುರು ಹಾಕಿಕೊಂಡ್ರಂತೆ ಲಾವಣ್ಯ ತ್ರಿಪಾಠಿ, ಅದು ಏನು ಗೊತ್ತಾ?

ಸದ್ಯ ಟಾಲಿವುಡ್ ಅಂಗಳದಲ್ಲಿ ಮೆಗಾ ಕುಟುಂಬದ ನಾಗಬಾಬು ರವರ ಪುತ್ರಿ ನಿಹಾರಿಕಾ ಹಾಗೂ ಚೈತನ್ಯ ಜೊನ್ನಲಗಡ್ಡ ವಿಚ್ಚೇದನ ಸುದ್ದಿ ಸಂಚಲನಾತ್ಮಕವಾಗಿದೆ. ರಾಜಸ್ಥಾನದ ಜೈಪುರದ ಪ್ಯಾಲೆಸ್ ನಲ್ಲಿ ಡೆಸ್ಟಿನೇಷನ್ ಮ್ಯಾರೇಜ್ ಹೆಸರಿನಲ್ಲಿ ನಿಹಾರಿಕಾ ಕೊಣಿದೆಲಾ ಹಾಗೂ ಚೈತನ್ಯ ಜೊನ್ನಲಗಡ್ಡ ಮದುವೆ ಅದ್ದೂರಿಯಾಗಿ ನಡೆಯಿತು. ಆದರೆ ಮದುವೆಯಾದ ಎರಡೇ ವರ್ಷಗಳಲ್ಲಿ ಅವರಿಬ್ಬರೂ ಬೇರೆಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಅವರು ವಿಚ್ಚೇದನ ಪಡೆದುಕೊಂಡರು. ಈ ವಿಚಾರ ನಿಹಾರಿಕಾ ತಮ್ಮಿಬ್ಬರ ಇಷ್ಟದಂತೆ ವಿಚ್ಚೇದನ ಪಡೆದುಕೊಂಡಿದ್ದಾಗಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು.

ಮೆಗಾ ಕುಟುಂಬದಲ್ಲಿ ನಿಹಾರಿಕಾ ವಿಚ್ಚೇದನ ಸಂಚಲನ ಎಂದೇ ಹೇಳಬಹುದು. ಜೊತೆಗೆ ಶೀಘ್ರದಲ್ಲೇ ನಾಗಬಾಬು ಹಾಗೂ ವರುಣ್ ತೇಜ್ ಸಹ ಮದುವೆ ಸಹ ನಡೆಯಲಿದೆ. ಒಂದು ಕಡೆ ಶುಭ ಸುದ್ದಿ ಮತ್ತೊಂದು ಕಡೆ ನಿಹಾರಿಕಾ ವಿಚ್ಚೇದನ ಎರಡೂ ವಿಚಾರಗಳಿಂದ ಕುಟುಂಬಸ್ಥರನ್ನು ಆಂದೋಲನಕ್ಕೆ ಗುರಿ ಮಾಡಿದೆಯೆಂದು ಹೇಳಬಹುದಾಗಿದೆ. ಇನ್ನೂ ಲಾವಣ್ಯ ತ್ರಿಪಾಠಿ ಶೀಘ್ರದಲ್ಲೇ ಮೆಗಾ ಕುಟುಂಬಕ್ಕೆ ಸೊಸೆಯಾಗಿ ಹೋಗಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ವರುಣ್ ಹಾಗೂ ಲಾವಣ್ಯ ಎಂಗೇಜ್ ಮೆಂಟ್ ಅದ್ದೂರಿಯಾಗಿ ನೆರವೇರಿತ್ತು ಶೀಘ್ರದಲ್ಲೇ ಮದುವೆ ಸಹ ನಡೆಯಲಿದೆ. ಇನ್ನೂ ಸೊಸೆಯಾಗಿ ಹೋಗುವುದಕ್ಕೂ ಮುಂಚೆ ಲಾವಣ್ಯ ನಾಗಬಾಬು ರವರನ್ನು ಒಂದು ವಿಚಾರದಲ್ಲಿ ಎದುರು ಹಾಕಿಕೊಂಡಿದ್ದಾರಂತೆ. ನಿಹಾರಿಕಾ ವಿಚ್ಚೇದನದ ವಿಚಾರದಲ್ಲಿ ನಾಗಬಾಬು ನಿಹಾರಿಕಾ ಮೇಲೆ ತುಂಬಾ ಕೋಪಗೊಡಿದ್ದಾರಂತೆ.

ಈ ವಿಚಾರದಲ್ಲಿ ಲಾವಣ್ಯ ತ್ರಿಪಾಠಿ ಇನ್ವಾಲ್ವ್ ಆಗಿ ನಿಹಾರಿಕಾಗೆ ಸಪೋರ್ಟ್ ಮಾಡಿದ್ದಾರಂತೆ. ನಾಗಬಾಬು ನಿಹಾರಿಕಾ ಮನೆಯಲ್ಲಿ ಇರಬಾರದು ಎಂದು ತುಂಬಾ ಕೋಪಗೊಂಡಿದ್ದರಂತೆ. ಆದರೆ ಲಾವಣ್ಯ ನಿಹಾರಿಕಾಗೆ ಸಪೋರ್ಟ್ ಮಾಡಿ, ವಿಚ್ಚೇದನದ ವಿಚಾರದಲ್ಲಿ ಒಬ್ಬರದ್ದೇ ತಪ್ಪು ಎಂದು ಹೇಳಲು ಆಗುವುದಿಲ್ಲ. ನಿಹಾರಿಕಾಗೆ ಅಲ್ಲಿ ಎದುರಾದ ಸಮಸ್ಯೆಗಳ ಕಾರಣದಿಂದ ತಾನು ವಿಚ್ಚೇದನ ಪಡೆದುಕೊಂಡರು. ಹಾಗಂತ ಒಬ್ಬರನ್ನೇ ನಾವು ತಪ್ಪಾಗಿ ನೋಡಿ, ನಿಹಾರಿಕಾ ಮೇಲೆ ಕೋಪಗೊಳ್ಳುವುದು ಸರಿಯಲ್ಲಿ. ಆಕೆಯ ಬೈದರೇ ಆಕೆ ಎಲ್ಲಿಗೆ ಹೋಗಬೇಕು. ಅಂತಹ ಸಮಯದಲ್ಲಿ ನಾವು ಆಕೆಗೆ ತುಂಬಾ ಬೆಂಬಲವಾಗಿ ನಿಲ್ಲಬೇಕು ಎಂದು ನಾಗಬಾಬು ರವರ ನಿರ್ಣಯವನ್ನು ಎದುರಿಸಿ ನಿಹಾರಿಕಾಗೆ ಸಪೋರ್ಟ್ ಮಾಡಿದ್ದರಂತೆ.

ಇನ್ನೂ ಈ ಸುದ್ದಿ ವೈರಲ್ ಆಗುತ್ತಿದ್ದಂತೆ. ಲಾವಣ್ಯ ತ್ರಿಪಾಠಿ ಮೆಗಾ ಕುಟುಂಬಕ್ಕೆ ಸೊಸೆಯಾಗುವುದಕ್ಕೂ ಮುಂಚೆ ಮಾವನಿಗೆ ಎದುರು ತಿರುಗಿದ್ದಾರೆ ಎಂಬ ಕಾಮೆಂಟ್ ಗಳು ಹರಿದುಬರುತ್ತಿವೆ. ಮತ್ತೆ ಕೆಲವರು ತನ್ನ ಮನೆಯ ಮಗಳ ವಿಚಾರದಲ್ಲಿ ಸಪೋರ್ಟ್ ಮಾಡಿದರೇ ತಪ್ಪೇನು ಎಂದು ಸಹ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಇನ್ನೂ ಮೆಗಾ ಕುಟುಂಬದಲ್ಲಿ ನಿಹಾರಿಕಾ ವಿಚ್ಚೇದನ ವಿಚಾರ ಕೊಂಚ ಇರುಸು ಮುರುಸು ತಂದುಕೊಟ್ಟಿದೆ ಎಂದು ಹೇಳಬಹುದಾಗಿದೆ.

Most Popular

To Top