ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತೊಂದು ಮದುವೆಯಾಗಲಿದ್ದಾರಂತೆ, ವೈರಲ್ ಆದ ರೂಮರ್…..!

ಸಿನಿರಂಗದಲ್ಲಿ ಮದುವೆ, ವಿಚ್ಚೇದನ, ಲವ್, ಬ್ರೇಕಪ್ ಎಲ್ಲವೂ ಸಾಮಾನ್ಯ ಎಂಬಂತೆ ಆಗಾಗ ನಡೆಯುತ್ತಲೇ ಇರುತ್ತದೆ. ಈಗಾಗಲೇ ಅನೇಕ ಸ್ಟಾರ್‍ ಜೋಡಿಗಳು ವಿಚ್ಚೇದನ ಪಡೆದುಕೊಂಡಿದ್ದಾರೆ. ಸಮಂತಾ ನಾಗಚೈತನ್ಯ, ನಿಹಾರಿಕಾ ಚೈತನ್ಯ ಹೀಗೆ ಅನೇಕರು ವಿಚ್ಚೇದನ ಪಡೆದುಕೊಂಡು…

ಸಿನಿರಂಗದಲ್ಲಿ ಮದುವೆ, ವಿಚ್ಚೇದನ, ಲವ್, ಬ್ರೇಕಪ್ ಎಲ್ಲವೂ ಸಾಮಾನ್ಯ ಎಂಬಂತೆ ಆಗಾಗ ನಡೆಯುತ್ತಲೇ ಇರುತ್ತದೆ. ಈಗಾಗಲೇ ಅನೇಕ ಸ್ಟಾರ್‍ ಜೋಡಿಗಳು ವಿಚ್ಚೇದನ ಪಡೆದುಕೊಂಡಿದ್ದಾರೆ. ಸಮಂತಾ ನಾಗಚೈತನ್ಯ, ನಿಹಾರಿಕಾ ಚೈತನ್ಯ ಹೀಗೆ ಅನೇಕರು ವಿಚ್ಚೇದನ ಪಡೆದುಕೊಂಡು ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಈ ಹಾದಿಯಲ್ಲೆ ಕಾಲಿವುಡ್ ಸ್ಟಾರ್‍ ನಟ ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ ಸಹ ವಿಚ್ಚೇದನ ಪಡೆದುಕೊಂಡಿದ್ದಾರೆ. ಇದೀಗ ಐಶ್ವರ್ಯ ರಜನಿಕಾಂತ್ ಮತ್ತೆ ಮದುವೆಯಾಗಲಿದ್ದಾರಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸ್ಟಾರ್‍ ನಟ ಧನುಷ್ ತನ್ನ 21 ನೇ ವರ್ಷ ವಯಸ್ಸಿನಲ್ಲಿ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಹಿರಿಯ ಮಗಳಾದ ಐಶ್ವರ್ಯ ರವರನ್ನು ಮದುವೆಯಾದರು. ಐಶ್ವರ್ಯ ಧನುಷ್ ಗಿಂತ ಎರಡು ವರ್ಷ ದೊಡ್ಡವಳು. ತನಗಿಂತ ಚಿಕ್ಕ ವಯಸ್ಸಿನ ಧನುಷ್ ರನ್ನು ಮದುವೆಯಾದರು. ಇನ್ನೂ ಮದುವೆಯಾದ ಸಮಯದಲ್ಲಿ ಅನೇಕ ವಿಮರ್ಶೆಗಳನ್ನು ಸಹ ಎದುರಿಸಿದ್ದರು. ಮದುವೆಯಾಗಿ 18 ವರ್ಷಗಳ ಕಾಲ ಸಂತೋಷದಿಂದ ಇಬ್ಬರೂ ಜೀವನ ಸಾಗಿಸಿದ್ದರು. ಇದ್ದಕ್ಕಿಂದ್ದಂತೆ ಧನುಷ್ ರಾತ್ರಿ ತಮ್ಮ ಟ್ವಿಟರ್‍ ಖಾತೆಯಲ್ಲಿ ವಿಚ್ಚೇದನ ಪಡೆದುಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದರು. ಮಿಡಿಯಾದಿಂದ ತಮಗೆ ಪ್ರೈವೆಸಿ ಬೇಕು ಎಂದು ಕೋರಿದರು. ಈ ಸುದ್ದಿ ತಿಳಿದು ಅನೇಕರು ಶಾಕ್ ಆದರು. ಜೊತೆಗೆ ಅಷ್ಟು ವರ್ಷಗಳ ಕಾಲ ಸಂತೋಷದಿಂದ ಕಾಲ ಕಳೆದಂತಹ ಇಬ್ಬರ ವಿಚ್ಚೇದನಕ್ಕೆ ಕಾರಣವಾದರೂ ಏನು ಎಂಬ ಪ್ರಶ್ನೆಗಳೂ ಸಹ ಎದುರಾದವು. ಬಳಿಕ ರಜನಿಕಾಂತ್ ಇಬ್ಬರ ನಡುವೆ ಸಂದಾನ ಮಾಡಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಆದರೆ ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಐಶ್ವರ್ಯ ಮತ್ತೊಂದು ಮದುವೆಯಾಗಲಿದ್ದಾರಂತೆ. ಕಾಲಿವುಡ್ ಯಂಗ್ ಹಿರೋ ಜೊತೆಗೆ ಐಶ್ವರ್ಯ ಡೇಟಿಂಗ್ ನಡೆಸುತ್ತಿದ್ದಾರಂತೆ. ಕೆಲವು ದಿನಗಳ ಹಿಂದೆಯಷ್ಟೆ ಚೆನೈನಲ್ಲಿನ ರೆಸಾರ್ಟ್ ಒಂದರಲ್ಲಿ ಆಕೆ ಕಾಣಿಸಿಕೊಂಡಿದ್ದರಂತೆ. ಈ ಕಾರಣದಿಂದ ಆಕೆ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಸುದ್ದಿಯಲ್ಲಿ ಎಷ್ಟು ನಿಜವಿದೆಯೋ ತಿಳಿಯದು. ಆದರೆ ಸುದ್ದಿ ಮಾತ್ರ ವೈರಲ್ ಆಗುತ್ತಿದೆ. ಇನ್ನೂ ಐಶ್ವರ್ಯ ಸ್ಟಾರ್‍ ನಟನೊಂದಿಗೆ ಮದುವೆಯಾಗಲಿರುವ ಕಾರಣದಿಂದ  ಧನುಷ್ ಕೆರಿಯರ್‍ ಗೂ ಸಹ ಇದು ಪೆಟ್ಟಾಗಲಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಇನ್ನೂ ಈ ಬಗ್ಗೆ ಸಂಬಂಧಪಟ್ಟವರು ಸ್ಪಷ್ಟನೆ ನೀಡುವವರೆಗೂ ಸತ್ಯಾಂಶ ತಿಳಿಯುವುದಿಲ್ಲ ಎನ್ನಬಹುದಾಗಿದೆ.