ಸರಿಯಾದ ವ್ಯಕ್ತಿ ಸಿಕ್ಕರೇ ಎರಡನೇ ಮದುವೆಗೆ ಸಿದ್ದವಂತೆ 7/G ಬೃಂದಾವನ್ ಕಾಲೋನಿ ಫೇಂ ನಟಿ ಸೋನಿಯಾ…!

Follow Us :

ಸಿನಿರಂಗದಲ್ಲಿ ಲವ್, ಬ್ರೇಕಪ್, ಮದುವೆ, ವಿಚ್ಚೇಧನಗಳು ಆಗಾಗ ನಡೆಯುತ್ತಲೇ ಇರುತ್ತವೆ. ಅದರಲ್ಲೂ ವಿಚ್ಚೇಧನ ಪಡೆದುಕೊಂಡ ಅನೇಕರ ನಟ-ನಟಿಯರ ಎರಡನೇ ಮದುವೆಯ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇರುತ್ತದೆ. ಒಂದು ಸುದ್ದಿ ಹೊರಬಂದರೇ ಸಾಕು ಅದು ನಿಜವಿರಲಿ, ಸುಳ್ಳಾಗಿರಲಿ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತದೆ. ಈ ಹಾದಿಯಲ್ಲೇ ಇದೀಗ 7/G ಬೃಂದಾವನ್ ಕಾಲೋನಿ ಖ್ಯಾತಿಯ ಸೋನಿಯಾ ಅಗರ್ವಾಲ್ ಸಹ ಎರಡನೇ ಮದುವೆಗೆ ಸಿದ್ದವಾಗಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.

ತೆಲುಗು ಸಿನಿರಂಗದಲ್ಲಿ ಒಳ್ಳೆಯ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಸಿನೆಮಾಗಳಲ್ಲಿ 7/G ಬೃಂದಾವನ್ ಕಾಲೋನಿ ಸಿನೆಮಾ ಸಹ ಒಂದಾಗಿದೆ. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಈ ಸಿನೆಮಾದಲ್ಲಿ ನಟಿಸಿದ ಸೋನಿಯಾ ಅಗರ್ವಾಲ್ ಸಹ ಸಿಕ್ಕಾಪಟ್ಟೆ ಫೇಂ ಪಡೆದುಕೊಂಡರು. ಈ ಸಿನೆಮಾದ ಬಳಿಕ ಸೋನಿಯಾ ಅನೇಕ ಯುವಕರ ಕ್ರಷ್ ಆದರು ಎಂದರೇ ತಪ್ಪಾಗಲಾರದು. ಈ ಸಿನೆಮಾ ಒಳ್ಳೆಯ ಸ್ಪಂದನೆ ತಂದುಕೊಟ್ಟಿತ್ತು. ಮೊದಲಿಗೆ ಈ ಸಿನೆಮಾ ನೆಗೆಟೀವ್ ಟಾಕ್ ಪಡೆದುಕೊಂಡರು ಬಳಿಕ ಸೂಪರ್‍ ಹಿಟ್ ಆಗಿತ್ತು. ಈ ಸಿನೆಮಾ ನಾಯಕಿ ಸೋನಿಯಾ ಅಗರ್ವಾಲ್ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ನಟಿಸಿದ್ದರು. 7/G ಬೃಂದಾವನ್ ಕಾಲೋನಿ ಸಿನೆಮಾದ ಮೂಲಕ ಒಳ್ಳೆಯ ಫೇಂ ಪಡೆದುಕೊಂಡರು ಎಂದೇ ಹೇಳಬಹುದಾಗಿದೆ.

ಇನ್ನೂ ಈ ಸಿನೆಮಾದ ನಿರ್ದೇಶಕ ಸೆಲ್ವ ರಾಘವನ್ ರವರನ್ನೇ ಈ ಸಿನೆಮಾದ ಬಳಿಕ ವಿವಾಹವಾದರು. ಮದುವೆಯಾದ ಬಳಿಕ ಆಕೆ ಸಿನೆಮಾಗಳಿಂದ ದೂರವೇ ಉಳಿದರು. ಇನ್ನೂ ಮದುವೆಯಾದ  ಕೆಲವೇ ದಿನಗಳಲ್ಲಿ ಪತಿಯೊಂದಿಗೆ ವಿಬೇದಗಳು ಉಂಟಾಗಿ ಆತನಿಂದ ಸೋನಿಯಾ ಬೇರೆಯಾದರು. ಆಕೆ ವಿಚ್ಚೇದನ ಪಡೆದುಕೊಂಡಾಗಿನಿಂದ ಸಿಂಗಲ್ ಆಗಿಯೇ ಜೀವನ ಸಾಗಿಸುತ್ತಿದ್ದಾರೆ ಸೋನಿಯಾ ಅಗರ್ವಾಲ್. ಇದೀಗ ಆಕೆ ಎರಡನೇ ಮದುವೆಗೆ ಸಿದ್ದರಾಗಿದ್ದಾರೆ ಎಂಬ ಸುದ್ದಿಯೊಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಎಂಬುದು ಮಾತ್ರ ಇನ್ನೂ ಖಚಿತವಾಗಿಲ್ಲ ಆದರೆ ಸುದ್ದಿ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇನ್ನೂ ನಟಿ ಸೋನಿಯಾ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಅನೇಕ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಆಕೆ ಫಾಲ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಇದೀಗ ಆಕೆ ಎರಡನೇ ಮದುವೆಗೆ ಸಿದ್ದರಾಗಿದ್ದಾರೆ. ಸರಿಯಾದ ಸಮಯ ಬಂದಾಗ, ಆಕೆಯನ್ನು ಎರಡನೇ ಮದುವೆ ಮಾಡಿಕೊಳ್ಳುವ ವ್ಯಕ್ತಿ ಸಿಕ್ಕಾಗ ಮದುವೆಯಾಗುತ್ತಾರಂತೆ, ಎಷ್ಟು ದಿನಗಳ ಕಾಲ ಮದುವೆಯಾಗದೇ ಈ ರೀತಿ ಇರುತ್ತೇನೆ ನನಗೆ ಸಹ ತಿಳಿಯದು ಎಂಬ ಆಕೆ ಹೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.