ಆಸ್ಕರ್ ವೇದಿಕೆಗೆ ಬೆತ್ತಲೆಯಾಗಿ ಬಂದ WWE ಸ್ಟಾರ್ ಜಾನ್ ಸೀನಾ, ಶಾಕ್ ಆದ ಫ್ಯಾನ್ಸ್….!

Follow Us :

2024ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭ ಪ್ರತಿ ವರ್ಷದಂತೆ ಅದ್ಧೂರಿಯಾಗಿ ನಡೆದಿದೆ. ಲಾಸ್ ಏಂಜಲಿಸ್ ನಲ್ಲಿ 96ನೇ ಆಸ್ಕರ್‍ ಅವಾರ್ಡ್ ಸಮಾರಂಭ ಅದ್ದೂರಿಯಾಗಿ ನಡೆಯುತ್ತಿದೆ. ವಿಶ್ವದ ಅನೇಕ ಸ್ಟಾರ್‍ ಕಲಾವಿದರು ಈ ಸಮಾರಂಭಕ್ಕೆ ಹಾಜರಾಗುತ್ತಿದ್ದಾರೆ. ಪ್ರತೀ ವರ್ಷ ಈ ಕಾರ್ಯಕ್ರಮದಲ್ಲಿ ಒಂದಲ್ಲ ಒಂದು ವಿಚಿತ್ರವಾದ ಘಟನೆ ನಡೆಯುತ್ತಿರುತ್ತದೆ. ಈ ಬಾರಿಯೂ ಸಹ ವಿಚಿತ್ರವಾದ ಘಟನೆಯೊಂದು ನಡೆದಿದೆ. WWE ಸ್ಟಾರ್‍ ಕಂಡ ನಟ ಜಾನ್ ಸೀನ ಆಸ್ಕರ್‍ ವೇದಿಕೆಗೆ ಬೆತ್ತಲೆಯಾಗಿ ಬಂದಿದ್ದು, ಎಲ್ಲರೂ ಶಾಕ್ ಆಗಿದ್ದಾರೆ.

ವಿಶ್ವದ ಚಲನಚಿತ್ರೋತ್ಸವದಲ್ಲಿ ನೀಡುವಂತಹ ಅತ್ಯುನ್ನತ ಪ್ರಶಸ್ತಿ ಆಸ್ಕರ್‍ ಪ್ರಶಸ್ತಿ ಎಂದು ಹೇಳಲಾಗುತ್ತದೆ. ಅತ್ಯುತ್ತಮ ಚಲನಚಿತ್ರ, ನಟ-ನಟಿ, ಸಂಗೀತ ಹೀಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರತೀ ವರ್ಷ ಆಸ್ಕರ್‍ ವೇದಿಕೆಯಲ್ಲಿ ಕೆಲವೊಂದು ಇಂಟ್ರಸ್ಟಿಂಗ್ ಆಗಿರುವ ಸನ್ನಿವೇಶಗಳು ನಡೆಯುತ್ತಿರುತ್ತವೆ. ಈ ಬಾರಿಯೂ ಸಹ ವಿಚಿತ್ರ ಘಟನೆ ನಡೆದಿದೆ. ನಟ ಕಂ WWE ಸ್ಟಾರ್‍ ವೇದಿಕೆಗೆ ಬೆತ್ತಲೆಯಾಗಿ ಬಂದಿದ್ದಾರೆ. ಜಾನ್ ಸೀನ ಪೂರ್‍ ಥಿಂಗ್ಸ್ ಸಿನೆಮಾಗಾಗಿ ಅತ್ಯುತ್ತಮ ವಸ್ತ್ರವಿನ್ಯಾಸ ಪ್ರಶಸ್ತಿಯನ್ನು ಘೋಷಣೆ ಮಾಡಲು ವೇದಿಕೆಗೆ ಬಂದಿದ್ದರು. ಆತನನ್ನು ನೋಡಿ ಎಲ್ಲರೂ ಶಾಕ್ ಆಗಿದ್ದರು.

ಆಸ್ಕರ್‍ ವೇದಿಕೆಯಲ್ಲಿದ್ದ ನಿರೂಪಕ ಜಿಮ್ಮಿ ಕಿಮ್ಮಲ್ ಸಭಿಕರಿಗೆ ಜಾನ್ ಸೀನಾ ಬೆತ್ತಲೆಯಾಗಿ ವೇದಿಕೆ ಮೇಲೆ ಬರುತ್ತಾರೆ ಎಂದು ಸುಳಿವು ನೀಡುತ್ತಿದ್ದರು. ತೆರೆಮರೆಯಲ್ಲಿದ್ದ ಜಾನ್ ಸೀನ ನಿರೂಪಕರೊಂದಿಗೆ ಮಾತನಾಡುತ್ತಾರೆ. ಈ ವೇಳೆ ನಿರೂಪಕ ಜಿಮ್ಮಿ ಕಿಮ್ಮಲ್ ಈ ವೇದಿಕೆ ಮೇಲೆ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಓಡುವುದನ್ನು ನೀವು ಕಲ್ಪನೆ ಮಾಡಿಕೊಳ್ಳಬಹುದೇ ಎಂದು ಪ್ರಶ್ನೆ ಮಾಡುತ್ತಾರೆ. ಬಳಿಕ ಜಾನ್ ಸೀನಾ ವೇದಿಕೆಗೆ ಎಂಟ್ರಿ ಕೊಡುತ್ತಾರೆ. ಬಳಿಕ ನಿರೂಪಕ ಹಾಗೂ ಜಾನ್ ಸೀನ ನಡುವೆ ಚರ್ಚೆ ಸಹ ನಡೆಯುತ್ತದೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಪರ ವಿರೋಧದ ಚರ್ಚೆ ಸಹ ನಡೆಯುತ್ತಿದೆ. ಇನ್ನೂ ಜಾನ್ ಸೀನ ವೇದಿಕೆಯ ಮೇಲೆ ಬೆತ್ತಲೆಯಾಗಿ ಬರುವುದು ಸಹ ಕಾರ್ಯಕ್ರಮದ ಒಂದು ಭಾಗವಾಗಿತ್ತು ಎನ್ನಲಾಗಿದ್ದು, ಅದಕ್ಕಾಗಿ ಜಾನ್ ಸೀನ ರವರಿಗೆ ತುಂಬಾ ಸಂಭಾವನೆ ಸಹ ನೀಡಿದ್ದಾರೆ ಎಂದು ಸಹ ಕೆಲವೊಂದು ಹಾಲಿವುಡ್ ಮಾದ್ಯಮಗಳು ಸುದ್ದಿ ಮಾಡಿದೆ ಎನ್ನಲಾಗಿದೆ.