Film News

ರಶ್ಮಿಕಾ ಕೈಯಿಂದ ಮೊಬೈಲ್ ಕಿತ್ತುಕೊಂಡ ಅಭಿಮಾನಿ, ಶಾಕ್ ಆದ ರಶ್, ವೈರಲ್ ಆದ ವಿಡಿಯೋ……!

ಸಿನಿಮಾ ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಒಂದಲ್ಲ ಒಂದು ರೀತಿಯ ಕಿರಿಕಿರಿ ಅನುಭವಿಸುತ್ತಿರುತ್ತಾರೆ. ಕೆಲವೊಮ್ಮೆ ವಿಚಿತ್ರ ಘಟನೆಗಳೂ ಸಹ ಎದುರಿಸುತ್ತಿರುತ್ತಾರೆ. ಇನ್ನೂ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾಗುವಂತಹ ರಶ್ಮಿಕಾಗೆ ಅಭಿಮಾನಿಯೋರ್ವ ಶಾಕ್ ಕೊಟ್ಟಿದ್ದಾನೆ. ಮುಂಬೈನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸೆಲ್ಫಿ ಕೊಡುವಾಗ ಅಭಿಮಾನಿಯೊಬ್ಬ ಆಕೆಯ ಕೈಯಿಂದ ಮೊಬೈಲ್ ಕಸಿದುಕೊಂಡಿದ್ದಾನೆ. ಅಭಿಮಾನಿಯ ಈ ವರ್ತನೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡು ಸದ್ಯ ಸಿನೆಮಾಗಳಲ್ಲಿ ಪುಲ್ ಬ್ಯುಸಿ ಆಗಿದ್ದಾರೆ. ಕನ್ನಡ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಕಡಿಮೆ ಸಮಯದಲ್ಲೇ ಸೌತ್ ಅಂಡ್ ನಾರ್ತ್ ನಲ್ಲೂ ಬೇಡಿಕೆಯುಳ್ಳ ನಟಿಯಾದರು. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುವ ರಶ್ಮಿಕಾ ಏನೆ ಪೋಸ್ಟ್ ಮಾಡಿದರೂ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತದೆ. ಇದೀಗ ಶೂಟಿಂಗ್ ಮುಗಿಸಿಕೊಂಡು ಬರುತ್ತಿದ್ದಾಗ ರಶ್ಮಿಕಾ ಜೊತೆಗೆ ಸೆಲ್ಫಿಗಾಗಿ ಅಭಿಮಾನಿಗಳು ಮುಂದಾಗಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರ ವರ್ತನೆಯನ್ನು ಕಂಡು ರಶ್ಮಿಕಾ ಶಾಕ್ ಆಗಿದ್ದಾರೆ. ಈ ಸಂಬಂಧ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಮುಂಬೈನಲ್ಲಿ ತನ್ನ ವ್ಯಾನಿಟಿ ವ್ಯಾನ್ ನಿಂದ ರಶ್ಮಿಕಾ ಹೊರ ಬಂದಿದ್ದಾರೆ. ಈ ವೇಳೆ ಆಕೆ ಅಭಿಮಾನಿಗಳೊಂದಿಗೆ ಪೊಟೋ ಸೆಷನ್ ಮಾಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಅಭಿಮಾನಿಯೊಬ್ಬ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಪರಚಿತ ಅಭಿಮಾನಿಯೊಬ್ಬ ರಶ್ಮಿಕಾ ಕೈಯಿಂದ ಪೋನ್ ಕಸಿದುಕೊಂಡಿದ್ದಾನೆ. ಅಭಿಮಾನಿಯ ಈ ವರ್ತನೆಗೆ ರಶ್ಮಿಕಾ ಶಾಕ್ ಆಗಿದ್ದಾರೆ. ಆತನ ವರ್ತನೆಗೆ ಅನೇಕರು ಬೇಸರ ಸಹ ವ್ಯಕ್ತಪಡಿಸುತ್ತಿದ್ದಾರೆ. ಬಳಿಕ ರಶ್ಮಿಕಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಆಕೆ ಕ್ಯೂಟ್ ಲುಕ್ಸ್ ಸಹ ವೈರಲ್ ಆಗಿದೆ. ಸದ್ಯ ರಶ್ಮಿಕಾ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಕಡಿಮೆ ಸಮಯದಲ್ಲೇ ಸ್ಟಾರ್‍ ಡಂ ಗಿಟ್ಟಿಸಿಕೊಂಡ ನಟಿಯರ ಸಾಲಿನಲ್ಲಿ ರಶ್ಮಿಕಾ ಮೊದಲ ಸ್ಥಾನದಲ್ಲಿರುತ್ತಾರೆ. ಪುಷ್ಪಾ ಸಿನೆಮಾ ಆಕೆಗೆ ಪ್ಯಾನ್ ಇಂಡಿಯಾ ಸ್ಟಾರ್‍ ಪಟ್ಟ ಸಹ ತಂದುಕೊಟ್ಟಿತ್ತು. ಇದೀಗ ಪುಷ್ಪಾ-2 ಸಿನೆಮಾದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಆಕೆ ಯಾನಿಮಲ್, ರೈಂಬೋ ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top