Film News

ನಾನು ಮಾತ್ರವಲ್ಲ ನನ್ನ ಪತಿ ಸಹ ಪ್ರೆಗ್ನೆಂಟ್ ಎಂದ ಅಮಲಾಪಾಲ್, ಪೊಟೋ ಮೂಲಕ ಶಾಕ್ ಕೊಟ್ಟ ಮಲ್ಲು ಬ್ಯೂಟಿ…..!

ಮಲ್ಲು ಹಾಟ್ ಬ್ಯೂಟಿ ಅಮಲಾಪಾಲ್ ಕೆಲವು ದಿನಗಳ ಹಿಂದೆಯಷ್ಟೆ ತಾನು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂತಸದ ವಿಚಾರವನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಈ ಸಂಬಂಧ ಪೊಟೋಗಳು, ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಇದೀಗ ಅಮಲಾಪಾಲ್ ತಾನು ಮಾತ್ರವಲ್ಲ ತನ್ನ ಪತಿ ಜಗತ್ ಸಹ ಪ್ರೆಗ್ನೆಂಟ್ ಎಂದು ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

2024 ವರ್ಷದ ಸಮಯದಲ್ಲೇ ನಟಿ ಅಮಲಾಪಾಲ್ ಅಭಿಮಾನಿಗಳೊಂದಿಗೆ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆಕೆ ಮೊದಲ ತಾಯ್ತನದ ಸಂತೋಷದಲ್ಲಿದ್ದಾರೆ. ತಾನು ಗರ್ಭಿಣಿಯಾಗುತ್ತಿರುವ ವಿಚಾರವನ್ನು ಸೋಷಿಯಲ್ ಮಿಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮಿಳು ನಿರ್ದೇಶಕ ಎ.ಎಲ್.ವಿಜಯ್ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಅಮಲಾಪಾಲ್ ಒಂಟಿಯಾಗಿಯೇ ಇದ್ದರು. ಬಳಿಕ ಆಕೆ ತಾನು ಮದುವೆಯಾಗಲಿರುವ ವ್ಯಕ್ತಿಯನ್ನು ಪರಿಚಯಿಸಿದ್ದರು. ಬಳಿಕ ನವೆಂಬರ್‍ 5 ರಂದು ಅದ್ದೂರಿಯಾಗಿ ಮದುವೆಯಾದರು. ಮದುವೆಯ ವಿಡಿಯೋ ಹಾಗೂ ಪೊಟೋಗಳನ್ನು ಸೋಷಿಯಲ್  ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಬಳಿಕ ಆಕೆ ಬೇಬಿ ಬಂಪ್ ವಿಡಿಯೋ ಪೊಟೋಗಳ ಮೂಲಕ ತುಂಬಾನೆ ಸದ್ದು ಮಾಡುತ್ತಿದ್ದಾರೆ. ಇದೀಗ ಮತ್ತೆ ಕೆಲವು ಪೊಟೋಗಳನ್ನು ಹಂಚಿಕೊಂಡು ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ.

ನಟಿ ಅಮಲಾಪಾಲ್ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ತಾನು ಗರ್ಭಿಣಿಯಾದ ವಿಚಾರವನ್ನು ಹಂಚಿಕೊಂಡಿದ್ದರು. ಆಕೆ ಈ ಸುದ್ದಿಯನ್ನು ಘೋಷಣೆಯಾದ ಬಳಿಕ ಆಕೆ ಬೇಬಿ ಬಂಪ್ ಶೋ ಮಾಡುತ್ತಾ ಪೊಟೊ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಮತ್ತೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಈ ಪೊಟೋಗಳಿಗೆ ಕ್ರೇಜಿ ಕ್ಯಾಪ್ಷನ್ ಕೊಟ್ಟಿದ್ದಾರೆ. ತನ್ನ ಪತಿಯೊಂದಿಗೆ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಕೆಲವು ಬೇಬಿ ಬಂಪ್ ಪೊಟೋಗಳನ್ನು ಸಹ ಶೇರ್‍ ಮಾಡಿದ್ದಾರೆ. ನಿಮಗೆ ಒಂದು ವಿಚಾರ ಗೊತ್ತಾ, ಪತ್ನಿ ಗರ್ಭಿಣಿಯಾದ ಸಮಯದಲ್ಲಿ ಪುರುಷನ ಹೊಟ್ಟೆ ಅಷ್ಟೇ ದೊಡ್ಡದಾಗುತ್ತದೆ ಎಂದು ಪರಿಶೋಧನೆಗಳು ಹೇಳುತ್ತಿವೆ. ಇದು ಅಂತಹ ಸಮಯವೇ, ಆಕೆ ಮಾತ್ರ ಗರ್ಭಿಣಿಯಲ್ಲ ನಾವಿಬ್ಬರು ಪ್ರಗ್ನೆಟ್, ಕ್ಷಮಿಸಿ ಪತಿ ಎಂದು ಕಾಮೆಂಟ್ ಹಾಕಿದ್ದಾರೆ.

ಇನ್ನೂ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಅಭಿಮಾನಿಗಳು ಈ ಪೊಟೋಗಳ ಬಗ್ಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ನಿಮ್ಮ ಪತಿ ಸಹ ಪ್ರಗ್ನೆಟ್ ಏಕೆಂದರೇ ಹೃದಯದ ತುಂಬಾ ಬೇಬಿಯನ್ನು ಹೋರುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ಅಮಲಾಪಾಲ್ ರವರ ಪೋಸ್ಟ್ ಅನ್ನು ಬೆಂಬಲಿಸುತ್ತಿದ್ದಾರೆ.

Most Popular

To Top