ತನ್ನ ಗಂಡನ್ನು ತುಂಬಾ ಬೋರಿಂಗ್ ಗಂಡ ಎಂದ ಜ್ಯೋತಿಕಾ, ಶಾಕ್ ಆದ ಸೂರ್ಯ ಫ್ಯಾನ್ಸ್…..!

ಕಾಲಿವುಡ್ ಸಿನಿರಂಗದ ಕ್ಯೂಟ್ ಜೋಡಿಗಳಲ್ಲಿ ಜ್ಯೋತಿಕಾ ಹಾಗೂ ಸೂರ್ಯ ಜೋಡಿ ಒಂದಾಗಿದೆ. ಮದುವೆಯಾದಾಗಿನಿಂದ ಈ ಜೋಡಿ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಸೌತ್ ಸಿನಿರಂಗದಲ್ಲಿ ಸಿನೆಮಾಗಳ ಮೂಲಕ ಮಾತ್ರವಲ್ಲದೇ ವೈಯುಕ್ತಿಕವಾಗಿಯೂ ಸಹ ಫೇಮಸ್ ಆದ ನಟರ…

ಕಾಲಿವುಡ್ ಸಿನಿರಂಗದ ಕ್ಯೂಟ್ ಜೋಡಿಗಳಲ್ಲಿ ಜ್ಯೋತಿಕಾ ಹಾಗೂ ಸೂರ್ಯ ಜೋಡಿ ಒಂದಾಗಿದೆ. ಮದುವೆಯಾದಾಗಿನಿಂದ ಈ ಜೋಡಿ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಸೌತ್ ಸಿನಿರಂಗದಲ್ಲಿ ಸಿನೆಮಾಗಳ ಮೂಲಕ ಮಾತ್ರವಲ್ಲದೇ ವೈಯುಕ್ತಿಕವಾಗಿಯೂ ಸಹ ಫೇಮಸ್ ಆದ ನಟರ ಸಾಲಿನಲ್ಲಿ ಸೂರ್ಯ ಮೊದಲ ಸ್ಥಾನದಲ್ಲಿರುತ್ತಾರೆ. ಮದುವೆಯಾದ ಬಳಿಕ ಸುಮಾರು ವರ್ಷಗಳ ಕಾಲ ಸಿನೆಮಾಗಳಿಂದ ಬ್ರೇಕ್ ತೆಗೆದುಕೊಂಡ ಜ್ಯೋತಿಕಾ ಇದೀಗ ಮತ್ತೆ ಸಿನೆಮಾಗಳತ್ತ ಮುಖ ಮಾಡಿದ್ದಾರೆ.

ಮದುವೆಯಾದ ಬಳಿಕ ಜ್ಯೋತಿಕಾ ಮಲಯಾಳಂ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಮಲಯಾಳಂ ಸ್ಟಾರ್‍ ನಟ ಮುಮ್ಮಟಿ ಜೊತೆಗೆ ಕಾಥಲ್ ಎಂಬ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ಕಳೆದ 2006 ರಲ್ಲಿ ಮದುವೆಯಾಗಿದ್ದು, ಮದುವೆಯಾದ ಬಳಿಕ ಸೂರ್ಯ ತಂದೆಯ ಕಾರಣದಿಂದ ಆಕೆ ಸಿನೆಮಾ ಬಿಟ್ಟು ಮನೆಯಲ್ಲಿರಬೇಕಾಯ್ತು ಎಂದು ಸಹ ಹೇಳಲಾಗುತ್ತಿದೆ. ಮಗ ಸೊಸೆ ನಮ್ಮೊಂದಿಗೆ ಇರಬೇಕೆಂಬ ಸೂರ್ಯ ತಂದೆಯ ಬಯಕೆಯಂತೆ ಅವರಿಬ್ಬರೂ ಹುಟ್ಟಿದ ಮನೆಯಲ್ಲೇ ಇದ್ದರು.  ಆದರೆ ಇತ್ತೀಚಿಗೆ ಕೆಲವೊಂದು ಕಾರಣಗಳಿಂದ ಈ ಜೋಡಿ ಬೇರೆ ಮನೆಯಲ್ಲಿ ವಾಸವಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ಜ್ಯೋತಿಕಾ ಸ್ಟಾರ್‍ ನಟಿಯಾಗಿದ್ದು, ಅನೇಕ ಸಂದರ್ಶನಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಅನೇಕ ಬಾರಿ ಸೂರ್ಯ ರವರ ಬಗ್ಗೆ ಜ್ಯೋತಿಕಾಗೆ ಕೇಳಿದಾಗ ಆಕೆ ಮನೆಯಲ್ಲಿ ಅವರು ಬೋರಿಂಗ್ ಗಂಡ ಎಂದು ಹೇಳಿದ್ದಾರೆ. ನಟ ಸೂರ್ಯ ಅಂದರೇ ನನ್ನ ಗಂಡ ಶೂಟಿಂಗ್ ಇಲ್ಲದೇ ಮನೆಯಲ್ಲಿ ಇದ್ದರೇ ಆತ ಹೆಚ್ಚು ಮಾತನಾಡೋಲ್ಲ. ಅವರು ಏನಾದರು ಮಾತನಾಡಿದರೇ ಅದು ಜಗತ್ತಿಗೆ ಸಂಬಂಧಿಸಿದ ಸುದ್ದಿಯಾಗಿರುತ್ತದೆ. ನನಗೆ ಅಂತಹ ಸುದ್ದಿಗಳ ಬಗ್ಗೆ ಆಸಕ್ತಿಯೇ ಇಲ್ಲ. ಈ ಕಾರಣದಿಂದ ಅದು ನನಗೆ ತುಂಬಾನೆ ಬೋರಿಂಗ್ ಎನ್ನಿಸುತ್ತದೆ. ಈ ಕಾರಣದಿಂದ ನನ್ನ ಗಂಡ ಬೋರಿಂಗ್ ಗಂಡ ಎಂದು ಜ್ಯೋತಿಕಾ ಹೇಳಿದ್ದಾರೆ.

ಇನ್ನೂ ಜ್ಯೋತಿಕಾ ಹಾಗೂ ಸೂರ್ಯ ಅನೇಕ ತಮಿಳು ಸಿನೆಮಾಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಸಿನೆಮಾಗಳಲ್ಲಿ ನಟಿಸುವಾಗ ಅವರಿಬ್ಬರಲ್ಲಿ ಪ್ರೀತಿ ಹುಟ್ಟಿದ್ದು, ಬಳಿಕ ಎರಡೂ ಕುಟುಂಬಗಳ ವಿರೋಧದ ನಡುವೆಯೇ ಮದುವೆ ನಡೆದಿತ್ತು. ಮದುವೆಯಾದ ಬಳಿಕ ಸೂರ್ಯ ಮೊದಲಿನಂತೆ ಸಿನೆಮಾಗಳಲ್ಲಿ ನಟಿಸುತ್ತಿದ್ದರೇ, ಜ್ಯೋತಿಕಾ ಮಾತ್ರ ಆಯ್ದ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.