ಮದುವೆಗೆ ಸಿದ್ದವಾದ ಆಂಕರ್ ರಶ್ಮಿ, ವರನ ವಿವರ ಸಹ ರಿವೀಲ್, ಶಾಕ್ ಆದ ಸುಧೀರ್ ಫ್ಯಾನ್ಸ್……!

ಕಿರುತೆರೆಯಲ್ಲಿ ಸುಧೀರ್‍ ಹಾಗೂ ರಶ್ಮಿ ಜೋಡಿಗೆ ತುಂಬಾನೆ ಕ್ರೇಜ್ ಇದೆ. ಜಬರ್ದಸ್ತ್ ಶೋ ಮೂಲಕ ಈ ಜೋಡಿಯ ಹವಾ ಶುರುವಾಯಿತು. ಈ ಶೋ ನಲ್ಲಿ ಅವರ ಲವ್ ಟ್ರಾಕ್, ರೊಮ್ಯಾನ್ಸ್, ಕೆಮಿಸ್ಟ್ರಿ ಎಲ್ಲವೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಅದರಲ್ಲೂ ಡಿ ರಿಯಾಲಿಟಿ ಶೋ ನಲ್ಲಿ ಈ ಜೋಡಿ ಮತಷ್ಟು ಸಂಚಲನ ಸೃಷ್ಟಿ ಮಾಡಿದ್ದರು. ಸದ್ಯ ರಶ್ಮಿ ಮದುವೆಗೆ ಸಿದ್ದವಾಗಿದ್ದು, ವರನ ವಿವರಗಳೂ ಸಹ ಹೊರಬಂದಿದೆ. ಈ ಸುದ್ದಿಯನ್ನು  ಕೇಳಿ ಸುಧೀರ್‍ ಫ್ಯಾನ್ಸ್ ಶಾಕ್ ಆಗಿದ್ದಾರೆ ಎನ್ನಲಾಗಿದೆ.

ಹಾಟ್ ಆಂಕರ್‍ ರಶ್ಮಿ ಗೌತಮ್ ಮದುವೆ ಸುದ್ದಿ ಎವರ್‍ ಗ್ರೀನ್ ಸುದ್ದಿ ಎಂದೇ ಹೇಳಬಹುದಾಗಿದೆ. ಮದುವೆ ವಯಸ್ಸು ಬಂದು ಸುಮಾರು ವರ್ಷಗಳು ಕಳೆದಿದ್ದು, ಅಭಿಮಾನಿಗಳು ಏಜ್ ಬಾರ್‍ ಆಗಿದೆ ಮದುವೆ ಯಾವಾಗ ಎಂದು ಕೇಳುತ್ತಿರುತ್ತಾರೆ. ಜಬರ್ದಸ್ತ್ ನಲ್ಲಿ ರಶ್ಮಿ ಹಾಗೂ ಸುಡಿಗಾಲಿ ಸುಧೀರ್‍ ರವರ ನಡುವಣ ಆನ್ ಸ್ಕ್ರೀನ್ ಕೆಮಿಸ್ಟ್ರಿ ಮಾತ್ರ ನೆಕ್ಸ್ಟ್ ಲೆವೆಲ್ ಎಂದೇ ಹೇಳಬಹುದಾಗಿದೆ. ಅವರಿಬ್ಬರ ರೊಮ್ಯಾಂಟಿಕ್ ಡ್ಯಾನ್ಸ್, ರೊಮ್ಯಾನ್ಸ್, ಲವ್ ಟ್ರಾಕ್ ಎಲ್ಲವೂ ಪ್ರೇಕ್ಷರನ್ನು ತುಂಬಾನೆ ರಂಜಿಸಿದೆ. ಈ ಕಾರಣದಿಂದ ಅವರಿಬ್ಬರಲ್ಲಿ ಯಾರಾದರೂ ಹೊರಗೆ ಕಾಣಿಸಿಕೊಂಡರೂ ಸಹ ಒಬ್ಬರ ಬಗ್ಗೆ ಒಬ್ಬರಲ್ಲಿ ಪ್ರಶ್ನೆ ಕೇಳುತತ್‌ಇರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಸುಧೀರ್‍ ಕಾಳಿಂಗ್ ಸಹಸ್ರ ಎಂಬ ಸಿನೆಮಾದ ಪ್ರಮೋಷನ್ ನಲ್ಲೂ ಸಹ ರಶ್ಮಿ ಬಗ್ಗೆ ಕೆಲವೊಂದು ಪ್ರಶ್ನೆಗಳು ಕೇಳಿಬಂದಿದ್ದವು.

ಇನ್ನೂ ರಶ್ಮಿ ಹಾಗೂ ಸುಧೀರ್‍ ನಡುವೆ ಲವ್ ಟ್ರಾಕ್ ನಡೆಯುತ್ತಿದ್ದು, ಮುಂದೆ ಒಂದು ದಿನ ಈ ಸುದ್ದಿ ಬ್ರೇಕ್ ಆಗಲಿದೆ ಎಂಬ ಅನುಮಾನಗಳು ಅಭಿಮಾನಿಗಳಲ್ಲಿ ಮನೆ ಮಾಡಿದೆ. ಈ ನಡುವೆ ರಶ್ಮಿಕಾ ಮದುವೆ ಎಂದು ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಒರಿಸ್ಸಾ ಮೂಲದವರಾದ ರಶ್ಮಿ ಗೌತಮ್ ಒರಿಸ್ಸಾ ಮೂಲದ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ. ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ರಶ್ಮಿ ಸುದ್ದಿ ತಿಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸಹ ಇದೇ ಮಾದರಿಯಲ್ಲಿ ಮದುವೆ ಬಗ್ಗೆ ರೂಮರ್‍ ಗಳು ಕೇಳಿಬಂದಿದ್ದವು. ಅದೆಲ್ಲಾ ಸುಳ್ಳು ಸುದ್ದಿಯಾಗಿತ್ತು. ಇದೀಗ ಈ ಸುದ್ದಿಯ ಬಗ್ಗೆ ಸಹ ಯಾವುದೇ ಅಧಿಕೃತ ಮಾಹಿತಿ ಇಲ್ಲದೇ ಇರುವ ಕಾರಣ ಈ ಸುದ್ದಿಯನ್ನು ಅನೇಕರು ಫೇಕ್ ಎಂದು ಅಲ್ಲಗೆಳೆದಿದ್ದಾರೆ. ಮತ್ತೆ ಕೆಲವರು ಶಾಕ್ ಆಗಿದ್ದಾರೆ.