Film News

ತ್ರಿಷಾ ಸೇರಿದಂತೆ ಅವರೂ ಮೇಲೂ ಕೇಸ್ ದಾಖಲಿಸುತ್ತೇನೆ ಎಂದು ಮತ್ತೆ ಗಲಾಟೆ ಶುರು ಮಾಡಿದ ಮನ್ಸೂರ್ ಅಲಿಖಾನ್….!

ಕೆಲವು ದಿನಗಳ ಹಿಂದೆಯಷ್ಟೆ ತ್ರಿಷಾ ರವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ ದೊಡ್ಡ ರಾದ್ದಾಂತ ಮಾಡಿದಂತಹ ಖಳನಾಯಕ ಮನ್ಸೂರ್‍ ಅಲಿಖಾನ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಮನ್ಸೂರ್‍ ತ್ರಿಷಾ ಬಗ್ಗೆ ನೀಡಿದ ಹೇಳಿಕೆಗೆ ಕ್ಷಮೆ ಕೇಳಿದ್ದು ಆಯ್ತು, ತ್ರಿಷಾ ಸಹ ಈ ಬಗ್ಗೆ ರಿಯಾಕ್ಟ್ ಆಗಿದ್ದು ಆಯ್ತು. ಎಲ್ಲಾ ರಾದ್ದಾಂತ ಮುಗಿಯಿತು ಎನ್ನುವಷ್ಟರಲ್ಲಿ ಮನ್ಸೂರ್‍ ಮತ್ತೆ ಗಲಾಟೆ ಶುರು ಮಾಡಿದ್ದಾರೆ ಎನ್ನಲಾಗಿದೆ. ತ್ರಿಷಾ ಸೇರಿದಂತೆ ಚಿರಂಜೀವಿ, ಖುಷ್ಬು ರವರಿಗೆ ನೊಟೀಸ್ ಜಾರಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಟ ಮನ್ಸೂರ್‍ ‌ಅಲಿಖಾನ್ ಕೆಲವು ದಿನಗಳ ಹಿಂದೆಯಷ್ಟೆ ತ್ರಿಷಾ ಬಗ್ಗೆ ಅಸಭ್ಯಕರವಾದ ಕಾಮೆಂಟ್ಸ್ ಮಾಡಿ ದೊಡ್ಡ ವಿವಾದ ಸೃಷ್ಟಿಸಿದ್ದರು. ಇದು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಯಾಗಿತ್ತು. ಜೊತೆಗೆ ಪೊಲೀಸ್ ಠಾಣೆಯವರೆಗೂ ಈ ಘಟನೆ ಹೋಗಿತ್ತು. ಎರಡು ದಿನಗಳ ಹಿಂದೆಯಷ್ಟೆ ತ್ರಿಷಾಗೆ ಕ್ಷಮೆ ಸಹ ಕೋರಿದ್ದರು. ತ್ರಿಷಾ ಸಹ ಮನುಷ್ಯರು ತಪ್ಪುಗಳನ್ನು ಮಾಡುವುದು ಸಹಜ, ತಪ್ಪುಗಳನ್ನು ಕ್ಷಮಿಸುವುದು ದೊಡ್ಡ ವಿಚಾರ ಎಂದು ವಿವಾದಕ್ಕೆ ತೆರೆ ಎಳೆಯುವಂತೆ ಟ್ಟೀಟ್ ಮಾಡಿದ್ದರು. ಆದರೆ ಮನ್ಸೂರ್‍ ಮತ್ತೆ ಈ ಗಲಾಟೆಗೆ ತುಪ್ಪ ಸುರಿದಿದ್ದಾರೆ. ತ್ರಿಷಾ ಸೇರಿದಂತೆ ಚಿರಂಜೀವಿ, ಖುಷ್ಬು ರವರ ಮೇಲೆ ಕ್ರಿಮಿನಲ್ ಕೇಸ್ ಹಾಕುತ್ತೇನೆ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ತ್ರಿಷಾ ವಿವಾದಕ್ಕೆ ಸಂಬಂಧಿಸಿದಂತೆ ಆಕೆಗೆ ಸಪೋರ್ಟ್ ಮಾಡಿದಂತಹ ಚಿರಂಜೀವಿ ಹಾಗೂ ಖುಷ್ಬು ರವರ ಮೇಲೆ ಮಾನನಷ್ಟ ಮೊಕದ್ದಮ್ಮೆ ಹೂಡುವುದಾಗಿ ಮನ್ಸೂರ್‍ ಹೇಳಿದ್ದಾರೆ. ಜೊತೆಗೆ ಸೋಮವಾರ (ನ.27) ರಂದು ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ಅನ್ನು ದಾಖಲು ಮಾಡುತ್ತೇನೆ ಎಂದು ಪ್ರಕಟಿಸಿದ್ದಾರೆ. ಈ ಸಂಬಂಧ ತ್ರಿಷಾ, ಚಿರಂಜೀವಿ ಹಾಗೂ ಖುಷ್ಬು ಮೂವರಿಗೂ ಸಹ ನೊಟೀಸ್ ಗಳನ್ನು ಸಹ ಜಾರಿ ಮಾಡುತ್ತೇನೆ ಎಂದಿದ್ದಾರೆ. ತ್ರಿಷಾ ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅನಗತ್ಯವಾಗಿ ನನ್ನ ವಿರುದ್ದ ಮಾತನಾಡಿದ್ದಾರೆ. ಅವರ ಹೇಳಿಕೆಗಳು ನನ್ನನ್ನು ಮಾನಸಿಕವಾಗಿ ನೋಯಿಸಿದೆ. ಆದ್ದರಿಂದಲೇ ಈ ವಿಚಾರಕ್ಕೆ ಸಂಬಂಧಿಸಿದಪಟ್ಟಂತೆ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಮನ್ಸೂರ್‍ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ತ್ರಿಷಾ, ಚಿರಂಜೀವಿ ಹಾಗೂ ಖುಷ್ಬು ರವರುಗಳ ವಿರುದ್ದ ಮಾನನಷ್ಟ, ಕ್ರಿಮಿನಲ್, ಸಿವಿಲ್ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲು ಮಾಡುವುದಾಗಿ ಮನ್ಸೂರ್‍ ತಿಳಿಸಿದ್ದಾರೆ. ಮನ್ಸೂರ್‍ ತನ್ನ ಲಾಯರ್‍ ಗುರು ಧನಂಜಯನ್ ಮೂಲಕ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವುದಾಗಿ ಪ್ರಕಟಿಸಿದ್ದಾರೆ. ಮನ್ಸೂರ್‍ ಹೇಳಿಕೆಗಳಿಗೆ ಕಾಲಿವುಡ್ ಹಾಗೂ ಟಾಲಿವುಡ್ ನ ಅನೇಕ ಸಿನಿ ಸೆಲೆಬ್ರೆಟಿಗಳು ಆಕ್ರೋಷ ಹೊರಹಾಖಿದ್ದರು. ರಾಷ್ಟ್ರೀಯ ಮಹಿಳಾ ಕಮಿಷನ್ ಸಹ ಮನ್ಸೂರ್‍ ವಿರುದ್ದ ಕೇಸ್ ದಾಖಲು ಮಾಡಬೇಕೆಂದು ಆದೇಶ ಮಾಡಿತ್ತು.

Most Popular

To Top