Film News

ಜಪಾನ್ ನಲ್ಲಿ ಅಮಿರ್ ಖಾನ್ ಪುತ್ರನ ಜೊತೆಗೆ ಕಾಣಿಸಿಕೊಂಡ ಸಾಯಿ ಪಲ್ಲವಿ, ವೈರಲ್ ಆದ ಪೊಟೋಸ್…..!

ಸಿನಿರಂಗದಲ್ಲಿ ಓವರ್‍ ಗ್ಲಾಮರ್‍ ಪ್ರದರ್ಶನ ಮಾಡದೇ ಸಿನಿರಂಗದಲ್ಲಿ ಸಕ್ಸಸ್ ಪುಲ್ ಜರ್ನಿ ಸಾಗಿಸುತ್ತಿದ್ದ ನಟಿಯರಲ್ಲಿ ಸಾಯಿ ಪಲ್ಲವಿ ಮೊದಲ ಸ್ಥಾನದಲ್ಲಿರುತ್ತಾರೆ. ಜೊತೆಗೆ ಸಿನಿರಂಗದಲ್ಲಿ ಯಾವುದೇ ನೆಗೆಟೀವ್ ಟಾಕ್ ಇಲ್ಲದ ನಟಿಯೆಂತಲೂ ಕರೆಯಬಹುದಾಗಿದೆ. ಸಿನೆಮಾದಲ್ಲಿ ಆಕೆ ಅಭಿನಯದ ಜೊತೆಗೆ ಆಫ್ ಸ್ಕ್ರೀನ್ ನಲ್ಲೂ ಸಹ ಆಕೆಯ ನಡವಳಿಕೆ ಅನೇಕರಿಗೆ ತುಂಬಾನೆ ಇಷ್ಟವಾಗುತ್ತದೆ. ಸದ್ಯ ಸಾಯಿ ಪಲ್ಲವಿ ತಂಡೆಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಜಪಾನ್ ನಲ್ಲಿ ಅಮೀರ್‍ ಖಾನ್ ಪುತ್ರನ ಜೊತೆಗೆ ಕಾಣಿಸಿಕೊಂಡಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಸಾಯಿ ಪಲ್ಲವಿ ನಿರ್ದೇಶಕ ಚಂದೂ ಮೊಂಡೆಟಿ ನಿರ್ದೇಶನದಲ್ಲಿ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ತಂಡೆಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಶೂಟಿಂಗ್ ಸಹ ಇತ್ತೀಚಿಗಷ್ಟೆ ಪೂರ್ಣಗೊಂಡಿದೆ. ಈ ಸಿನೆಮಾದ ಜೊತೆಗೆ ಶೀಘ್ರದಲ್ಲೆ ಬಾಲಿವುಡ್ ಗೂ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬರುತ್ತಿತ್ತು. ಹಿಂದಿ ಭಾಷೆಯಲ್ಲಿ ಸಿನೆಮಾ ಮಾಡಲಿದ್ದಾರೆ ಎನ್ನಲಾಗಿದೆ. ಓರ್ವ ಸ್ಟಾರ್‍ ನಟನ ಮಗನ ಜೊತೆಗೆ ನಟಿಸಲಿದ್ದಾರಂತೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟನೆ ಸಹ ಇಲ್ಲ. ಇದೀಗ ಈ ಸುದ್ದಿಗೆ ಕ್ಲಾರಿಟಿ ದೊರೆತಂತಿದೆ. ಬಾಲಿವುಡ್ ಸ್ಟಾರ್‍ ನಟ ಅಮೀರ್‍ ಖಾನ್ ಮಗ ಜುನೈದ್ ಖಾನ್ ಜೊತೆಗೆ ಸಿನೆಮಾ ಮಾಡುತ್ತಿದ್ದಾರೆ. ಸದ್ಯ ಈ ಸಿನೆಮಾದ ಶೂಟಿಂಗ್ ಜಪಾನ್ ನಲ್ಲಿ ನಡೆಯುತ್ತಿದ್ದು, ಅಲ್ಲಿನ ಶೂಟಿಂಗ್ ನಡುವೆ ಸ್ನೋ ಫೆಸ್ಟಿವಲ್ ಗೆ ಎಂಟ್ರಿ ಕೊಟ್ಟಿದ್ದರು. ಈ ವೇಳೆ ತೆಗೆದಂತಹ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಇನ್ನೂ ಅಮೀರ್‍ ಖಾನ್ ಪುತ್ರ ಜುನೈದ್ ಖಾನ್ ನಟನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ. ಆತನ ಮೊದಲ ಸಿನೆಮಾ ಮಹಾರಾಜ್ ಬಿಡುಗಡೆಗೆ ಸಿದ್ದವಾಗಿದೆ. ಸದ್ಯ ಆತ ಎರಡನೇ ಸಿನೆಮಾದ ಶೂಟಿಂಗ್ ನಡೆಯುತ್ತಿದೆ. ಈ ಸಿನೆಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಜಪಾನ್ ನಲ್ಲಿ ನಡೆಯುತ್ತಿದೆ. ಶೂಟಿಂಗ್ ನಡುವೆ ವಿರಾಮ ಸಿಕ್ಕಾಗ ಜುನೈದ್ ಹಾಗೂ ಸಾಯಿ ಪಲ್ಲವಿ ಅಲ್ಲಿ ನಡೆಯುತ್ತಿದ್ದ ಸ್ನೋ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ಪೊಟೋಗಳು ಬಿಡುಗಡೆಯಾದ ಬಳಿಕ ಸಿನೆಮಾದ ಮೇಲೆ ಮತಷ್ಟು ಇಂಟ್ರಸ್ಟ್ ಹುಟ್ಟಿದೆ ಎನ್ನಲಾಗುತ್ತಿದೆ. ಇನ್ನೂ ಈ ಸಿನೆಮಾದ ಟೈಟಲ್, ಫಸ್ಟ್ ಲುಕ್ ರಿವೀಲ್ ಆಗಿಲ್ಲ. ಈ ಸಿನೆಮಾವನ್ನು ಅಮೀರ್‍ ಖಾನ್ ಸ್ವತಃ ನಿರ್ಮಾಣ ಮಾಡುತ್ತಿದ್ದಾರೆ.

Most Popular

To Top